ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿ 2026: ಕರ್ನಾಟಕದ ಯುವಕ-ಯುವತಿಯರಿಗೆ ಸುವರ್ಣಾವಕಾಶ! 25,000+ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ಈ ನೇಮಕಾತಿ ಪ್ರಕ್ರಿಯೆ Indian Army ಅಡಿಯಲ್ಲಿ ನಡೆಯಲಿದ್ದು, ಅಗ್ನಿಪಥ್ ಯೋಜನೆಯ ಭಾಗವಾಗಿ ನಾಲ್ಕು ವರ್ಷದ ಅವಧಿಗೆ ಯುವಕರಿಗೆ ಸೇನೆಗೆ ಸೇರುವ ಅವಕಾಶ ಒದಗಿಸಲಾಗುತ್ತದೆ. ಅಗ್ನಿವೀರ್ ಆಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಧುನಿಕ ಸೈನಿಕ ತರಬೇತಿ, ಶಿಸ್ತಿನ ಜೀವನ, ಮತ್ತು ದೇಶರಕ್ಷಣೆಯ ಮಹತ್ವದ ಜವಾಬ್ದಾರಿ ನೀಡಲಾಗುತ್ತದೆ. ಸೇವಾ ಅವಧಿ ಪೂರ್ಣಗೊಂಡ ಬಳಿಕ, ಕಾರ್ಯಕ್ಷಮತೆ ಆಧಾರಿತವಾಗಿ ಕೆಲವು ಅಭ್ಯರ್ಥಿಗಳಿಗೆ ಶಾಶ್ವತ ಸೇವೆಯ ಅವಕಾಶವೂ ಲಭ್ಯವಿರುತ್ತದೆ.
ಸೇನೆ ಸೇರುವ ಆಸಕ್ತಿ ಹೊಂದಿರುವ ಯುವಕರು ತಡಮಾಡದೇ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪರಿಶೀಲಿಸಿ, ನಿಗದಿತ ಕೊನೆಯ ದಿನಾಂಕ: 01 ಏಪ್ರಿಲ್ 2026 ರೊಳಗೆ ಅರ್ಜಿ ಸಲ್ಲಿಸುವುದು ಅಗತ್ಯ. ದೇಶಸೇವೆ ಎಂಬ ಮಹತ್ತರ ಗುರಿಯನ್ನು ಸಾಧಿಸಲು ಇದು ಸುವರ್ಣಾವಕಾಶವಾಗಿದ್ದು, ನಿಮ್ಮ ಭವಿಷ್ಯಕ್ಕೆ ಹೊಸ ದಾರಿಯನ್ನು ತೆರೆದಿಡಲಿದೆ.
ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
Indian Army ನೇಮಕಾತಿಯ ವಿವರ:
- ಸಂಸ್ಥೆ: ಭಾರತೀಯ ಸೇನೆ (Indian Army)
- ಹುದ್ದೆಗಳ ಹೆಸರು: ಜಿಡಿ, ಟೆಕ್ನಿಕಲ್, ಕ್ಲರ್ಕ್, ಟ್ರೇಡ್ಸ್‌ಮನ್
- ಒಟ್ಟು ಹುದ್ದೆಗಳು: 25,000+ (ನಿರೀಕ್ಷಿತ)
- ಹುದ್ದೆಯ ಸ್ಥಳ: ಅಖಿಲ ಭಾರತ
- ಅಗ್ನಿವೀರ್ ಜನರಲ್ ಡ್ಯೂಟಿ (GD): 10ನೇ ತರಗತಿ (SSLC) ಪಾಸ್ - ಶೇ. 45 ಅಂಕಗಳೊಂದಿಗೆ.
- ಅಗ್ನಿವೀರ್ ಟೆಕ್ನಿಕಲ್ (Technical): ಪಿಯುಸಿ ವಿಜ್ಞಾನ (PCM) ಅಥವಾ 10ನೇ ತರಗತಿ ನಂತರ ITI ಕೋರ್ಸ್.
- ಅಗ್ನಿವೀರ್ ಆಫೀಸ್ ಅಸಿಸ್ಟೆಂಟ್ / ಕ್ಲರ್ಕ್: ಪಿಯುಸಿ (ಯಾವುದೇ ವಿಭಾಗ) ಶೇ. 60 ಅಂಕಗಳೊಂದಿಗೆ ಉತ್ತೀರ್ಣ.
- ಅಗ್ನಿವೀರ್ ಟ್ರೇಡ್ಸ್‌ಮನ್ (10th Pass): 10ನೇ ತರಗತಿ ಉತ್ತೀರ್ಣ (ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕ).
- ಅಗ್ನಿವೀರ್ ಟ್ರೇಡ್ಸ್‌ಮನ್ (8th Pass): 8ನೇ ತರಗತಿ ಉತ್ತೀರ್ಣ (ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕ).
- ಮಹಿಳಾ ಮಿಲಿಟರಿ ಪೊಲೀಸ್ (WMP): ಮಹಿಳಾ ಅಭ್ಯರ್ಥಿಗಳಿಗೆ ಜಿಡಿ ವಿಭಾಗದಲ್ಲಿ ಅವಕಾಶ.
- NCC ಪ್ರಮಾಣಪತ್ರ: NCC 'A' (5 ಅಂಕ), 'B' (10 ಅಂಕ), 'C' (20 ಅಂಕ). ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ NCC 'C' ಕೆಡೆಟ್‌ಗಳಿಗೆ 25 ಅಂಕಗಳವರೆಗೆ ಬೋನಸ್ ದೊರೆಯಲಿದೆ.
- ಕ್ರೀಡಾಪಟುಗಳು: ಕಳೆದ ಎರಡು ವರ್ಷಗಳಲ್ಲಿ ರಾಷ್ಟ್ರೀಯ/ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಆದ್ಯತೆ.
- ITI/ಡಿಪ್ಲೋಮಾ: ತಾಂತ್ರಿಕ ಹುದ್ದೆಗಳಿಗೆ ITI ಅಥವಾ ಡಿಪ್ಲೋಮಾ ಹೊಂದಿದವರಿಗೆ ವಿಶೇಷ ಅಂಕಗಳು.
ಸಂಬಳ ಮತ್ತು 4 ವರ್ಷದ ನಂತರದ ಭವಿಷ್ಯ:
- ಸೇವಾ ಅವಧಿ: 4 ವರ್ಷಗಳು.
- ವೇತನ: ವಾರ್ಷಿಕ ₹3.6 ಲಕ್ಷದಿಂದ ಆರಂಭವಾಗಿ 4ನೇ ವರ್ಷದಲ್ಲಿ ₹4.8 ಲಕ್ಷದವರೆಗೆ ಹೆಚ್ಚಾಗುತ್ತದೆ.
- ಸೇವಾ ನಿಧಿ: 4 ವರ್ಷದ ನಂತರ ಹೊರಬರುವಾಗ ಸುಮಾರು ₹11.71 ಲಕ್ಷ ಮೊತ್ತದ ಟ್ಯಾಕ್ಸ್-ಫ್ರೀ ಹಣ ದೊರೆಯಲಿದೆ.
- ಖಾಯಂ ನೇಮಕಾತಿ: ಪ್ರತಿ ಬ್ಯಾಚ್‌ನ ಶೇ. 25 ರಷ್ಟು ಸಮರ್ಥ ಅಗ್ನಿವೀರ್‌ಗಳಿಗೆ ಸೇನೆಯಲ್ಲಿ ಖಾಯಂ ಆಗಿ ಮುಂದುವರಿಯಲು ಅವಕಾಶವಿರುತ್ತದೆ.
- ಬೆಳಗಾವಿ ವಲಯ (ARO Belgaum): ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳಿಗೆ.
- ಬೆಂಗಳೂರು ವಲಯ (RO HQ Bangalore): ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಮೈಸೂರು, ಚಾಮರಾಜನಗರ ಸೇರಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ.
- ಮಂಗಳೂರು ವಲಯ (ARO Mangalore): ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಿಗೆ.
- ವಯಸ್ಸು: 17.5 ರಿಂದ 21 ವರ್ಷಗಳು (ಅಭ್ಯರ್ಥಿಗಳು 01 ಅಕ್ಟೋಬರ್ 2005 ರಿಂದ 01 ಏಪ್ರಿಲ್ 2009 ರ ನಡುವೆ ಜನಿಸಿರಬೇಕು).
- ಎತ್ತರ: ಸಾಮಾನ್ಯ ಹುದ್ದೆಗಳಿಗೆ 166 ಸೆಂ.ಮೀ (ದಕ್ಷಿಣ ವಲಯದ ಮಾನದಂಡದಂತೆ). ಕ್ಲರ್ಕ್ ಹುದ್ದೆಗಳಿಗೆ 162 ಸೆಂ.ಮೀ.
- ಎದೆಯ ಅಳತೆ: 77 ಸೆಂ.ಮೀ (+5 ಸೆಂ.ಮೀ ವಿಸ್ತರಣೆ ಕಡ್ಡಾಯ).
- ಹಂತ 1: ಆನ್‌ಲೈನ್ ಲಿಖಿತ ಪರೀಕ್ಷೆ (CEE): ಜೂನ್ 1 ರಿಂದ 16, 2026 ರವರೆಗೆ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (MCQ) ನಡೆಯಲಿದ್ದು, ವಿಶೇಷವಾಗಿ ಕ್ಲರ್ಕ್ ಹುದ್ದೆಯ ಆಕಾಂಕ್ಷಿಗಳಿಗೆ ಇದೇ ಹಂತದಲ್ಲಿ ನಿಮಿಷಕ್ಕೆ 30 ಪದಗಳ ವೇಗದ ಟೈಪಿಂಗ್ ಪರೀಕ್ಷೆಯನ್ನು ಸಹ ನಡೆಸಲಾಗುತ್ತದೆ.
- ಹಂತ 2: ದೈಹಿಕ ಪರೀಕ್ಷೆ (Recruitment Rally): ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು 1.6 ಕಿ.ಮೀ ಓಟ, ಪುಲ್-ಅಪ್ಸ್, 9 ಅಡಿ ಹಳ್ಳ ಜಿಗಿತ ಮತ್ತು ಜಿಗ್-ಜಾಗ್ ಬ್ಯಾಲೆನ್ಸ್ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದ್ದು, ಇದರೊಂದಿಗೆ ಎತ್ತರ, ತೂಕ ಮತ್ತು ಎದೆಯ ಅಳತೆಯ ಕಟ್ಟುನಿಟ್ಟಿನ ಪರಿಶೀಲನೆ ನಡೆಸಲಾಗುತ್ತದೆ.
- ಹಂತ 3: ವೈದ್ಯಕೀಯ ತಪಾಸಣೆ (Medical Test): ಸೇನಾ ವೈದ್ಯಕೀಯ ತಂಡವು ಅಭ್ಯರ್ಥಿಗಳ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಿದ್ದು, ದೈಹಿಕ ಮತ್ತು ಮಾನಸಿಕವಾಗಿ ಸದೃಢರಾದ ಅಭ್ಯರ್ಥಿಗಳನ್ನು ಮಾತ್ರ ಅಂತಿಮವಾಗಿ ದೇಶಸೇವೆಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ (Application Fee):
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ (General, OBC, SC/ST) ಒಟ್ಟು ₹250/- ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
- ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು joinindianarmy.nic.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
- ನೋಂದಣಿ (Registration): 'Agnipath' ವಿಭಾಗದಲ್ಲಿ ನಿಮ್ಮ ಆಧಾರ್ ಅಥವಾ 10ನೇ ತರಗತಿ ಅಂಕಪಟ್ಟಿ ಬಳಸಿ ಪ್ರೊಫೈಲ್ ಕ್ರಿಯೇಟ್ ಮಾಡಿ.
- ವಿವರ ಭರ್ತಿ ಮಾಡಿ: ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ನಿಖರವಾಗಿ ನಮೂದಿಸಿ.
- ದಾಖಲೆ ಅಪ್‌ಲೋಡ್: ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿಯನ್ನು (Signature) ಅಪ್‌ಲೋಡ್ ಮಾಡಿ.
- ಶುಲ್ಕ ಪಾವತಿ: ₹250/- ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
- ಪ್ರಿಂಟ್ ತೆಗೆದುಕೊಳ್ಳಿ: ಅರ್ಜಿ ಸಲ್ಲಿಕೆಯಾದ ನಂತರ 'Confirmation Page' ಅನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
- ಅಧಿಕೃತ ಅಧಿಸೂಚನೆ ಪ್ರಕಟಣೆ: 12 ಫೆಬ್ರವರಿ 2026
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 13 ಫೆಬ್ರವರಿ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01 ಏಪ್ರಿಲ್ 2026
- ಪ್ರವೇಶ ಪತ್ರ (Admit Card) ಬಿಡುಗಡೆ: ಮೇ 2024 (ನಿರೀಕ್ಷಿತ)
- ಆನ್‌ಲೈನ್ ಲಿಖಿತ ಪರೀಕ್ಷೆ (CEE): 01 ಜೂನ್ ರಿಂದ 16 ಜೂನ್ 2026
- ನೇಮಕಾತಿ ರ‍್ಯಾಲಿ (ದೈಹಿಕ ಪರೀಕ್ಷೆ): ವಲಯವಾರು ಪ್ರತ್ಯೇಕವಾಗಿ ತಿಳಿಸಲಾಗುವುದು
KPSCvaani ಯಿಂದ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ
Job Overview
- End Date
- 1 ಎಪ್ರಿಲ್ 2026
- Employment Type
- FULL_TIME
- Organization
- Indian Army (Website)
- Location
- KA,

Comments