Others 20 ಮಾರ್ಚ್ 2026 6 months ago
Published by Yallamma G

UCSL Recruitment 2026: ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನೇಮಕಾತಿ! ಮಾಜಿ ನೌಕಾಪಡೆ ಸಿಬ್ಬಂದಿಗೆ ನೇರ ಆಯ್ಕೆ

UCSL Recruitment 2026: ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನೇಮಕಾತಿ! ಮಾಜಿ ನೌಕಾಪಡೆ ಸಿಬ್ಬಂದಿಗೆ ನೇರ ಆಯ್ಕೆ
ಕೇಂದ್ರ ಸರ್ಕಾರದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ 'ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL)' ನಲ್ಲಿ ಭರ್ಜರಿ ಉದ್ಯೋಗಾವಕಾಶ ಒದಗಿಬಂದಿದೆ. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ಕರ್ನಾಟಕದ ಮಲ್ಪೆ ಘಟಕದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ.

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL) ನಲ್ಲಿ ಖಾಲಿ ಇರುವ ಕಮಿಷನಿಂಗ್ ಎಂಜಿನಿಯರ್ ಮತ್ತು ಕಮಿಷನಿಂಗ್ ಅಸಿಸ್ಟೆಂಟ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಉಡುಪಿ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 02-ಏಪ್ರಿಲ್-2026 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು. 

ಮಾಜಿ ಭಾರತೀಯ ನೌಕಾಪಡೆಯ (Ex-Indian Navy) ಸಿಬ್ಬಂದಿಗಾಗಿ ಕಮಿಷನಿಂಗ್ ಇಂಜಿನಿಯರ್ ಹಾಗೂ ಕಮಿಷನಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ 'ನೇರ ಸಂದರ್ಶನ' (Walk-in Selection) ಮೂಲಕ ಆಯ್ಕೆ ಮಾಡಲಾಗುತ್ತಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಯುಸಿಎಸ್ಎಲ್ ಹುದ್ದೆಯ ಅಧಿಸೂಚನೆ
  • ಸಂಸ್ಥೆಯ ಹೆಸರು : ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಯುಸಿಎಸ್‌ಎಲ್)
  • ಹುದ್ದೆಗಳ ಸಂಖ್ಯೆ: 14
  • ಉದ್ಯೋಗ ಸ್ಥಳ: ಉಡುಪಿ – ಕರ್ನಾಟಕ
  • ಹುದ್ದೆ ಹೆಸರು: ಕಮಿಷನಿಂಗ್ ಅಸಿಸ್ಟೆಂಟ್
  • ಸಂಬಳ: ರೂ. 48,000 – 53,045/-
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ. 

ಖಾಲಿ ಇರುವ ಹುದ್ದೆಗಳ ವಿವರ (Vacancy Details)

ಒಟ್ಟು 14 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಹುದ್ದೆಗಳ ವಿಂಗಡಣೆ ಈ ಕೆಳಗಿನಂತಿದೆ:
  • ಕಮಿಷನಿಂಗ್ ಇಂಜಿನಿಯರ್ (ಮೆಕ್ಯಾನಿಕಲ್): 2 ಹುದ್ದೆಗಳು.
  • ಕಮಿಷನಿಂಗ್ ಇಂಜಿನಿಯರ್ (ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್): 1 ಹುದ್ದೆ.
  • ಕಮಿಷನಿಂಗ್ ಅಸಿಸ್ಟೆಂಟ್ (ಎಲೆಕ್ಟ್ರಿಷಿಯನ್/ಶಿಪ್‌ರೈಟ್/ಮೆಕ್ಯಾನಿಶಿಯನ್): 11 ಹುದ್ದೆಗಳು.
ಗಮನಿಸಿ: ಈ ಹುದ್ದೆಗಳು ಸಂಪೂರ್ಣವಾಗಿ ಗುತ್ತಿಗೆ ಆಧಾರಿತವಾಗಿದ್ದು (Contract basis), ಆರಂಭದಲ್ಲಿ 3 ವರ್ಷಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಪ್ರಾಜೆಕ್ಟ್ ಅಗತ್ಯತೆ ಹಾಗೂ ಕಾರ್ಯಕ್ಷಮತೆಯ ಆಧಾರದ ಮೇಲೆ ಗುತ್ತಿಗೆಯನ್ನು ಇನ್ನೂ 2 ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿದೆ.

ವಿದ್ಯಾರ್ಹತೆ ಮತ್ತು ಅನುಭವ (Education & Experience)
  • ಕಮಿಷನಿಂಗ್ ಇಂಜಿನಿಯರ್ ಹುದ್ದೆಗಳಿಗೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್, ಮರೈನ್, ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಜೊತೆಗೆ ಸಂಬಂಧಪಟ್ಟ ವಿಭಾಗದಲ್ಲಿ (ಮರೈನ್ ಉಪಕರಣಗಳು/ಸಿಸ್ಟಮ್ಸ್ ಕಾರ್ಯಾಚರಣೆ ಮತ್ತು ನಿರ್ವಹಣೆ) ಕನಿಷ್ಠ 10 ವರ್ಷಗಳ ಅನುಭವ ಕಡ್ಡಾಯ.
  • ಕಮಿಷನಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ: ಕನಿಷ್ಠ 10ನೇ ತರಗತಿ (X Std) ಪಾಸಾಗಿರಬೇಕು. ಜೊತೆಗೆ ಮರೈನ್ ಎಕ್ವಿಪ್‌ಮೆಂಟ್/ಆಪರೇಷನ್ಸ್ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
ವಯೋಮಿತಿ (Age Limit)
  • 2ನೇ ಏಪ್ರಿಲ್ 2026 ರ ವೇಳೆಗೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷ ಮೀರಿರಬಾರದು.
  • ವಯೋಮಿತಿ ಸಡಿಲಿಕೆ: ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಮಾನದಂಡಗಳ ಪ್ರಕಾರ.
ತಿಂಗಳ ವೇತನ ಎಷ್ಟು? (Monthly Salary)
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಕನ್ಸಾಲಿಡೇಟೆಡ್ ವೇತನ ನೀಡಲಾಗುತ್ತದೆ:
  • ಕಮಿಷನಿಂಗ್ ಇಂಜಿನಿಯರ್: ಮೊದಲನೇ ವರ್ಷ ₹50,000/-, ಎರಡನೇ ವರ್ಷ ₹51,500/-, ಹಾಗೂ ಮೂರನೇ ವರ್ಷ ₹53,045/- ಪ್ರತಿ ತಿಂಗಳಿಗೆ.
  • ಕಮಿಷನಿಂಗ್ ಅಸಿಸ್ಟೆಂಟ್: ಮೊದಲನೇ ವರ್ಷ ₹48,000/-, ಎರಡನೇ ವರ್ಷ ₹49,440/-, ಹಾಗೂ ಮೂರನೇ ವರ್ಷ ₹50,924/- ಪ್ರತಿ ತಿಂಗಳಿಗೆ.
ಆಯ್ಕೆ ಪ್ರಕ್ರಿಯೆ ಮತ್ತು ವಾಕ್-ಇನ್ ವಿವರ (Selection & Walk-in Details)
ಅರ್ಹ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.cochinshipyard.in ಅಥವಾ www.udupicsl.com ನಿಂದ ಅರ್ಜಿ ನಮೂನೆಯನ್ನು (Annexure-I) ಡೌನ್‌ಲೋಡ್ ಮಾಡಿ, ಸಂಪೂರ್ಣವಾಗಿ ಭರ್ತಿ ಮಾಡಿಕೊಂಡು ನೇರ ಸಂದರ್ಶನಕ್ಕೆ ಹಾಜರಾಗಬೇಕು. ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ (Certificate Verification) ನಡೆಸಿ ಆಯ್ಕೆ ಮಾಡಲಾಗುತ್ತದೆ.
  • ನೇರ ಸಂದರ್ಶನದ ದಿನಾಂಕ: 2ನೇ ಏಪ್ರಿಲ್ 2026.
  • ಸಮಯ: ಬೆಳಗ್ಗೆ 08:30 ರಿಂದ ಮಧ್ಯಾಹ್ನ 14:00 ಗಂಟೆಯವರೆಗೆ.
  • ಸಂದರ್ಶನದ ಸ್ಥಳ: ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL), ಮಲ್ಪೆ ಹಾರ್ಬರ್ ಕಾಂಪ್ಲೆಕ್ಸ್, ಮಲ್ಪೆ, ಉಡುಪಿ - 576108, ಕರ್ನಾಟಕ.
KEA ಇಂದ ನಡೆದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು practice ಮಾಡಲು ಇಲ್ಲಿ ಕ್ಲಿಕ್ ಮಾಡಿ (To Practice Old KEA Question Papers)

ತೆಗೆದುಕೊಂಡು ಹೋಗಬೇಕಾದ ದಾಖಲೆಗಳು:

  • ಭರ್ತಿ ಮಾಡಿದ ಅರ್ಜಿ ನಮೂನೆ
  • ಇತ್ತೀಚಿನ ಪಾಸ್‌ಪೋರ್ಟ್ ಫೋಟೋ
  • ಅಸಲಿ ಆಧಾರ್ ಕಾರ್ಡ್
  • ಶೈಕ್ಷಣಿಕ ದಾಖಲೆಗಳು
  • ಅನುಭವದ ಪ್ರಮಾಣಪತ್ರಗಳು ಹಾಗೂ
  • ನೌಕಾಪಡೆಯಿಂದ ಬಿಡುಗಡೆಯಾದ ದಾಖಲೆಗಳನ್ನು (Discharge Certificate/Pension Payment Order) ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.
ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿರುವ ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ಈ ಉಪಯುಕ್ತ ಮಾಹಿತಿಯನ್ನು ಕಡ್ಡಾಯವಾಗಿ ಶೇರ್ ಮಾಡಿ! ಉದ್ಯೋಗದ ನಿಖರ ಮಾಹಿತಿಗಾಗಿ KPSCVaani ಓದುತ್ತಿರಿ.

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments