ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅಂತಿಮ ನಿಯಮಗಳ ಕರಡು ಅಧಿಸೂಚನೆ ಪ್ರಕಟ
Published by: Basavaraj Halli | Date:14 ಡಿಸೆಂಬರ್ 2021

ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಕರ ನೇಮಕಾತಿಯ ಕರಡು ನಿಯಮಗಳ ತಿದ್ದುಪಡಿಗಾಗಿ ದಿನಾಂಕ 01 ಜನೆವರಿ 2021 ರಂದು ರಾಜ್ಯಪತ್ರದಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಿತ್ತು, ಸದರಿ ಸಾರ್ವಜನಿಕರಿಂದ ಸ್ವೀಕರಿಸಲಾದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಇದೀಗ ಪರಿಗಣಿಸಿ, ಪರಿಷ್ಕೃತ ನಿಯಮಗಳನ್ನು ರಚಿಸಿ ರಾಜ್ಯಪತ್ರದಲ್ಲಿ ಪ್ರಕಟಣೆಯನ್ನು ಹೊರಡಿಸಿದೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಸ್ತುತ ವೃಂದ ಹಾಗೂ ನೇಮಕಾತಿಯಾ ಅಂತಿಮ ನಿಯಮಗಳನ್ನು ರೂಪಿಸಿ ದಿನಾಂಕ 10 ಡಿಸೆಂಬರ್ 2021 ರಂದು ರಾಜ್ಯಪತ್ರದಲ್ಲಿ ಪ್ರಕಟಣೆಯನ್ನು ಹೊರಡಿಸಿದೆ, ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಇಲಾಖೆ ಪ್ರಕಟಿಸಿದ ಅಧಿಕೃತ ಗೆಜೆಟ್ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ.

Comments