Loading..!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ISRO NRSC)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Bhagya R K | Date:28 ಮೇ 2025
not found

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ISRO NRSC) 2025ನೇ ಸಾಲಿನಲ್ಲಿ ವಿಜ್ಞಾನಿ/ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತರು ಮತ್ತು ಅರ್ಹತೆಯನ್ನು ಪೂರೈಸುವ ಅಭ್ಯರ್ಥಿಗಳು 2025ರ ಮೇ 30ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ನೇಮಕಾತಿ ವಿವರಗಳು :
ಸಂಸ್ಥೆ ಹೆಸರು : ISRO - National Remote Sensing Centre (NRSC)
ಹುದ್ದೆಯ ಹೆಸರು : ವಿಜ್ಞಾನಿ / ಎಂಜಿನಿಯರ್
ಒಟ್ಟು ಹುದ್ದೆಗಳು : 31
ಅರ್ಜಿ ವಿಧಾನ : ಆನ್‌ಲೈನ್

ಶೈಕ್ಷಣಿಕ ಅರ್ಹತೆ :
ISRO NRSC ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ B.Sc, BE/ B.Tech, ME/ M.Tech, M.Sc ಪೂರ್ಣಗೊಳಿಸಿರಬೇಕು.

ವಯೋಮಿತಿ (31-05-2025 ರ ಅನ್ವಯ) :
ಕನಿಷ್ಠ : 18 ವರ್ಷ
ಗರಿಷ್ಠ : 30 ವರ್ಷ

ಅರ್ಜಿ ಶುಲ್ಕ :
ಇತರ ಅಭ್ಯರ್ಥಿಗಳು : ₹750/-
SC/ST/PwBD/ಮಹಿಳೆಯರು/ಮಾಜಿ ಸೈನಿಕರು : ಶುಲ್ಕವಿಲ್ಲ
ಪಾವತಿ ವಿಧಾನ : ಆನ್‌ಲೈನ್

ವೇತನ ಶ್ರೇಣಿ :
ಅಧಿಕೃತ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ಮಾಸಿಕ ವೇತನ ನೀಡಲಾಗುತ್ತದೆ. (ವೈದ್ಯಕೀಯ ಮತ್ತು ಇತರ ಸೌಲಭ್ಯಗಳು ಸೇರಿದಂತೆ)

ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ
ವೈಯಕ್ತಿಕ ಸಂದರ್ಶನ

ಅರ್ಜಿಸಲ್ಲಿಸುವ ವಿಧಾನ :
1. ಅಧಿಕೃತ ವೆಬ್‌ಸೈಟ್ [https://www.nrsc.gov.in](https://www.nrsc.gov.in) ಗೆ ಭೇಟಿ ನೀಡಿ.
2. “Recruitments” ವಿಭಾಗದಲ್ಲಿ ವಿಜ್ಞಾನಿ/ಎಂಜಿನಿಯರ್ ಹುದ್ದೆಗಳ ಅಧಿಸೂಚನೆಯನ್ನು ಓದಿ.
3. ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
4. ಅರ್ಜಿ ಶುಲ್ಕ ಪಾವತಿ ಮಾಡಿ (ಅವಶ್ಯಕವಿದ್ದರೆ).
5. ಕೊನೆಗೆ ಅರ್ಜಿ ಸಲ್ಲಿಸಿ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಆರಂಭ : 10-ಮೇ-2025
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-ಮೇ-2025

ವೈಜ್ಞಾನಿಕ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ತಾಕಲಾಟದಲ್ಲಿರುವ ಅಭ್ಯರ್ಥಿಗಳಿಗೆ ISRO NRSC ಒದಗಿಸುತ್ತಿರುವ ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಈಗಲೇ ಅರ್ಜಿ ಸಲ್ಲಿಸಿ.

Application End Date:  30 ಮೇ 2025
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download Official Notification

Comments