Loading..!

DHFWS ಯಾದಗಿರಿ ನೇಮಕಾತಿ 2026: 32 ವೈದ್ಯಾಧಿಕಾರಿ, ನರ್ಸ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree
Published by: Yallamma G | Date:7 ಮೇ 2026
not found
ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ! ಯಾದಗಿರಿ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಲು ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಯಾದಗಿರಿ (DHFWS Yadgiri) ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ವಿವಿಧ 32 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  

ಹುದ್ದೆಗಳ ಸಂಪೂರ್ಣ ವಿವರ (Vacancy Details)
ಒಟ್ಟು 32 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದದೆ. 
1 ಮಕ್ಕಳ ತಜ್ಞ ವೈದ್ಯರು (Pediatrician) : 01
2 ಕಿವಿ, ಮೂಗು, ಗಂಟಲು ತಜ್ಞರು (ENT Surgeon) : 02
3 ಫಿಜಿಶಿಯನ್ (Physician) : 01
4 ವೈದ್ಯಾಧಿಕಾರಿಗಳು (Medical Officers - NCD/NUHM/Child Health) : 07
5 ಕ್ವಾಲಿಟಿ ಮ್ಯಾನೇಜರ್ (DHQM) : 01
6 ಎಪಿಡೆಮೋಲೊಜಿಸ್ಟ್ (Epidemiologist) : 01
7 ಡೆಂಟಲ್ ಹೈಜೆನಿಸ್ಟ್ (Dental Hygienist) : 01
8 ಡೆಂಟಲ್ ಟೆಕ್ನಿಷಿಯನ್ (Dental Technician) : 01
9 ಆಡಿಯೊಮೆಟ್ರಿಕ್ ಸಹಾಯಕರು (Audiometric Asst.) : 01
10 ಶ್ರವಣದೋಷವುಳ್ಳ ಮಕ್ಕಳ ಬೋಧಕರು : 01
11 ಶುಶ್ರೂಷಕರು (Staff Nurse - Namma Clinic & NPPC) : 02
12 ಲ್ಯಾಬ್ ಟೆಕ್ನಿಷಿಯನ್ (Lab Technician) : 02
13 ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು (Primary Health Safety Officer) : 11

ಇದನ್ನು ಓದಿ : ಬ್ರೇಕಿಂಗ್: ರೈಲ್ವೆ ಇಲಾಖೆಯಲ್ಲಿ ಬೃಹತ್ ಉದ್ಯೋಗಾವಕಾಶ! 11,127 ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ (Educational Qualification)

ಪ್ರತಿಯೊಂದು ಹುದ್ದೆಗೂ ನಿರ್ದಿಷ್ಟ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ:
  • ತಜ್ಞ ವೈದ್ಯರು ಹಾಗೂ ಫಿಜಿಶಿಯನ್: ಎಂಬಿಬಿಎಸ್ (MBBS) ಜೊತೆಗೆ ಸಂಬಂಧಪಟ್ಟ ವಿಭಾಗದಲ್ಲಿ ಸ್ನಾತಕೋತ್ತರ ಪದವಿ/ಡಿಪ್ಲೊಮಾ (MD/MS/DNB/DCH) ಮತ್ತು ಮೆಡಿಕಲ್ ಕೌನ್ಸಿಲ್ ನಲ್ಲಿ ನೋಂದಣಿಯಾಗಿರಬೇಕು.  
  • ವೈದ್ಯಾಧಿಕಾರಿಗಳು: ಎಂಬಿಬಿಎಸ್ (MBBS) ಪೂರ್ಣಗೊಳಿಸಿ, ಕಡ್ಡಾಯ ಇಂಟರ್ನ್‌ಶಿಪ್ ಮುಗಿಸಿ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು.  
  • ಸ್ಟಾಫ್ ನರ್ಸ್: ಜಿಎನ್ಎಂ (GNM) ಅಥವಾ ಬಿ.ಎಸ್ಸಿ ನರ್ಸಿಂಗ್ (B.Sc Nursing) ಪೂರ್ಣಗೊಳಿಸಿರಬೇಕು.  
  • ಲ್ಯಾಬ್ ಟೆಕ್ನಿಷಿಯನ್: ಪ್ಯಾರಾಮೆಡಿಕಲ್ ಬೋರ್ಡ್‌ನಿಂದ ಡಿಪ್ಲೊಮಾ (DMLT) ಅಥವಾ ಬಿ.ಎಸ್ಸಿ ಎಂ.ಎಲ್.ಟಿ (B.Sc MLT) ಉತ್ತೀರ್ಣರಾಗಿರಬೇಕು.  
  • ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು: ಮಾನ್ಯತೆ ಪಡೆದ ಸಂಸ್ಥೆಯಿಂದ ಎ.ಎನ್.ಎಂ (ANM) ತರಬೇತಿ ಪಡೆದು ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು. 
ಮಾಸಿಕ ವೇತನ : 
1 ಮಕ್ಕಳ ತಜ್ಞ ವೈದ್ಯರು (Pediatrician) : ₹1,30,000/-
2 ಕಿವಿ, ಮೂಗು, ಗಂಟಲು ತಜ್ಞರು (ENT Surgeon) : ₹1,10,000/-
3 ಫಿಜಿಶಿಯನ್ (Physician) : ₹1,10,000/-
4 ವೈದ್ಯಾಧಿಕಾರಿಗಳು (Medical Officers - NCD/NUHM/Child Health) : ₹60,000/-
5 ಕ್ವಾಲಿಟಿ ಮ್ಯಾನೇಜರ್ (DHQM) : ₹35,000/-
6 ಎಪಿಡೆಮೋಲೊಜಿಸ್ಟ್ (Epidemiologist) : ₹30,000/-
7 ಡೆಂಟಲ್ ಹೈಜೆನಿಸ್ಟ್ (Dental Hygienist) : ₹15,000/-
8 ಡೆಂಟಲ್ ಟೆಕ್ನಿಷಿಯನ್ (Dental Technician) : ₹15,000/-
9 ಆಡಿಯೊಮೆಟ್ರಿಕ್ ಸಹಾಯಕರು (Audiometric Asst.) :₹15,114/-
10 ಶ್ರವಣದೋಷವುಳ್ಳ ಮಕ್ಕಳ ಬೋಧಕರು : ₹15,114/-
11 ಶುಶ್ರೂಷಕರು (Staff Nurse - Namma Clinic & NPPC) : ₹14,000 - ₹16,067/-
12 ಲ್ಯಾಬ್ ಟೆಕ್ನಿಷಿಯನ್ (Lab Technician) : ₹16,100 - ₹17,435/-
13 ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು (Primary Health Safety Officer) : ₹15,924 - ₹16,994/-

ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ (How to Apply)
ಯಾದಗಿರಿ ಜಿಲ್ಲಾ ಆರೋಗ್ಯ ಇಲಾಖೆಯ (DHFWS Yadgiri) ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ (On-Line) ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಸಂಪೂರ್ಣ ನಿಯಮಗಳು ಮತ್ತು ಹಂತಗಳು ಈ ಕೆಳಗಿನಂತಿವೆ:  
  1. ಅಧಿಕೃತ ವೆಬ್‌ಸೈಟ್ ಭೇಟಿ: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾದಗಿರಿ ಜಿಲ್ಲೆಯ ಅಧಿಕೃತ ವೆಬ್‌ಸೈಟ್‌ಗಳಾದ https://yadgiri.nic.in ಅಥವಾ https://zpyadgiri.karnataka.gov.in  ಗೆ ಭೇಟಿ ನೀಡಬೇಕು.  
  2. ಅರ್ಜಿ ಸಲ್ಲಿಕೆ ದಿನಾಂಕಗಳು: ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ 05/05/2026 ರಿಂದ ಪ್ರಾರಂಭವಾಗಲಿದ್ದು, 20/05/2026 ರವರೆಗೆ ಅರ್ಜಿಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.  
  3. ಪ್ರತ್ಯೇಕ ಅರ್ಜಿ ಸಲ್ಲಿಕೆ: ಅಭ್ಯರ್ಥಿಯು ಒಂದು ಹುದ್ದೆಗಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ, ಪ್ರತಿಯೊಂದು ಹುದ್ದೆಗೂ ಪ್ರತ್ಯೇಕವಾಗಿ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.  
  4. ಅವಧಿ ಮೀರಿದ ಅರ್ಜಿಗಳ ತಿರಸ್ಕಾರ: ನಿಗದಿತ ಸಮಯದ (ದಿನಾಂಕ ಮುಗಿದ ನಂತರ) ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ.  
  5. ವಾಕ್-ಇನ್ ಇಂಟರ್ವ್ಯೂ (Walk-in Interview) ನಿಯಮ: ತಜ್ಞವೈದ್ಯರು ಹಾಗೂ ಎಂಬಿಬಿಎಸ್ ವೈದ್ಯರ ಹುದ್ದೆಗಳಿಗೆ ಮತ್ತು ಅಧಿಸೂಚನೆಯ ಕ್ರಮಸಂಖ್ಯೆ 8 ರಿಂದ 12 ರ ವರೆಗಿನ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳು ಸ್ವೀಕೃತವಾಗದೇ ಇದ್ದರೆ, ಅಂತಹ ಹುದ್ದೆಗಳನ್ನು ಎನ್.ಹೆಚ್.ಎಮ್ (NHM) ನಿಯಮಾನುಸಾರ ನೇರ ಸಂದರ್ಶನದ (Walk-in Interview) ಮುಖಾಂತರ ಭರ್ತಿ ಮಾಡಿಕೊಳ್ಳಲಾಗುವುದು. 
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ

ಅರ್ಜಿ ಸಲ್ಲಿಸುವಾಗ ಬೇಕಾಗುವ ಪ್ರಮುಖ ದಾಖಲೆಗಳು:

  • ವಿದ್ಯಾರ್ಹತೆಯ ಅಂಕಪಟ್ಟಿಗಳು ಹಾಗೂ ಪ್ರಮಾಣ ಪತ್ರಗಳು.  
  • ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರಗಳು (1 ರಿಂದ 10ನೇ ತರಗತಿ).  
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ.  
  • ಅಂಗವಿಕಲತೆ ಪ್ರಮಾಣ ಪತ್ರ (ಅನ್ವಯಿಸಿದಲ್ಲಿ).  
  • ಆಧಾರ್ ಕಾರ್ಡ್ (Aadhar Card) ಮತ್ತು ಇತ್ತೀಚಿನ ಭಾವಚಿತ್ರಗಳು. 
ಪ್ರಮುಖ ದಿನಾಂಕಗಳು (Important Dates)
  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 05-05-2026   
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-05-2026  
ಸೂಚನೆ: ನಿಗದಿತ ದಿನಾಂಕ ಮುಗಿದ ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ.

ಪ್ರಮುಖ ಷರತ್ತುಗಳು ಮತ್ತು ಗಮನಿಸಬೇಕಾದ ಅಂಶಗಳು (Important Conditions)
  • 371J ಮೀಸಲಾತಿ: ಈ ಮೇಲ್ಕಂಡ ಹುದ್ದೆಗಳು ಕಲ್ಯಾಣ ಕರ್ನಾಟಕ ವೃಂದಕ್ಕೆ ಸೇರಿದ್ದಾಗಿದ್ದು, ಅಭ್ಯರ್ಥಿಗಳು ಕಡ್ಡಾಯವಾಗಿ 371ಜೆ (371J) ಪ್ರಮಾಣ ಪತ್ರವನ್ನು ಹೊಂದಿರಬೇಕು.  
  • ನೇಮಕಾತಿ ವಿಧಾನ: ಇದು ಮೆರಿಟ್ ಕಂ ರೋಸ್ಟರ್ (Merit cum Roster) ಆಧಾರದ ಮೇಲೆ ನಡೆಯುವ ಗುತ್ತಿಗೆ ಆಧಾರಿತ ನೇಮಕಾತಿಯಾಗಿದೆ.  
  • ನೇರ ಸಂದರ್ಶನ (Walk-in Interview): ತಜ್ಞ ವೈದ್ಯರು, ಎಂಬಿಬಿಎಸ್ ವೈದ್ಯರು, ಎಪಿಡೆಮೋಲೊಜಿಸ್ಟ್ ಮತ್ತು ಇತರೆ ಕೆಲವು ತಾಂತ್ರಿಕ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳು ಬಾರದೇ ಇದ್ದಲ್ಲಿ, NHM ನಿಯಮಾನುಸಾರ ನೇರ ಸಂದರ್ಶನದ (Walk-in-Interview) ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು.  
  • ಒಂದಕ್ಕಿಂತ ಹೆಚ್ಚು ಅರ್ಜಿ: ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದರೆ, ಪ್ರತಿಯೊಂದು ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಬೇಕು. 
ನಿರಂತರ ಸರ್ಕಾರಿ ಉದ್ಯೋಗದ ಮಾಹಿತಿಗಾಗಿ KPSCVaani.com ಪೋರ್ಟಲ್ ಅನ್ನು ಅನುಸರಿಸಿ!
Application End Date:  20 ಮೇ 2026
Work Location:  Yadgiri
Employment Type: FULL_TIME
Hiring Organization: DHFWS Yadgiri https://yadgir.nic.in/
Job Location: District General Hospital, Behind Old ZP Office, Yadgiri, KA, 585201
To Download Official Notification
Related Tags: Degree

Comments