Loading..!

🏥 ಕೊಪ್ಪಳ ಜಿಲ್ಲೆಯ ಆರೋಗ್ಯ ಇಲಾಖೆಯ ಭರ್ಜರಿ ನೇಮಕಾತಿ – ಕೂಡಲೇ ಅರ್ಜಿ ಹಾಕಿ|ಸರ್ಕಾರಿ ಉದ್ಯೋಗದ ಸುವರ್ಣಾವಕಾಶ!

Tags: Degree
Published by: Yallamma G
|
🏥 ಕೊಪ್ಪಳ ಜಿಲ್ಲೆಯ ಆರೋಗ್ಯ ಇಲಾಖೆಯ ಭರ್ಜರಿ ನೇಮಕಾತಿ – ಕೂಡಲೇ ಅರ್ಜಿ ಹಾಕಿ|ಸರ್ಕಾರಿ ಉದ್ಯೋಗದ ಸುವರ್ಣಾವಕಾಶ!

              🏥 ಕೊಪ್ಪಳ ಜಿಲ್ಲೆಯ ಆರೋಗ್ಯ ಇಲಾಖೆಯ ಈ ನೇಮಕಾತಿ ಅವಕಾಶ ನಿಮ್ಮ ಕ್ಯಾರಿಯರ್‌ಗೆ ಹೊಸ ದಿಕ್ಕು ಕೊಡುವ ಚಿನ್ನದ ಅವಕಾಶ. ಅರ್ಹತಾ ಮಾಪದಂಡಗಳನ್ನು ಚೆನ್ನಾಗಿ ತಿಳಿದುಕೊಂಡು, ಅರ್ಜಿ ಪ್ರಕ್ರಿಯೆಯನ್ನು ಸರಿಯಾಗಿ ಅನುಸರಿಸಿ, ಮುಖ್ಯ ದಿನಾಂಕಗಳನ್ನು ಮರೆಯದೆ ಇರಿ. ಈ ಉದ್ಯೋಗವು ನಿಮಗೆ ಉತ್ತಮ ಸಂಬಳ, ಸ್ಥಿರ ಆದಾಯ ಮತ್ತು ಭವಿಷ್ಯದಲ್ಲಿ ಮುನ್ನಡೆಯುವ ಅನೇಕ ಅವಕಾಶಗಳನ್ನು ನೀಡುತ್ತದೆ.

                       2025-26ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಕೊಪ್ಪಳ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದಲ್ಲಿ ಖಾಲಿ ಇರುವ 14 ನರ್ಸಿಂಗ್ ಅಧಿಕಾರಿ, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞ ಮತ್ತು ಔಷಧಿಕಾರರು ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ನವೆಂಬರ್ 2025.    

                ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವುದು ಕೇವಲ ಉದ್ಯೋಗವಲ್ಲ, ಸಮಾಜ ಸೇವೆಯ ಒಂದು ಮಾರ್ಗ. ಈಗಲೇ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ. ಈ ಅವಕಾಶ ಕೈತಪ್ಪಿದರೆ ಮುಂದೆ ಪಶ್ಚಾತ್ತಾಪ ಬರಬಹುದು. ಯಶಸ್ಸಿಗೆ ಮೊದಲ ಹೆಜ್ಜೆ ಹಾಕುವ ಸಮಯ ಬಂದಿದೆ!

📌 ಕೋಲಾರ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2025

ಒಟ್ಟು ಹುದ್ದೆ : 14
ನೇಮಕಾತಿ ಪ್ರಕಾರ : ಗುತ್ತಿಗೆ (Contract Basis)
ಉದ್ಯೋಗ ಸ್ಥಳ:  ಕೊಪ್ಪಳ – ಕರ್ನಾಟಕ
ಅಧಿಕೃತ ವೆಬ್‌ಸೈಟ್ : Koppal.nic.in
ಅರ್ಜಿ ಸಲ್ಲಿಸುವ ಬಗೆ:  ಆನ್ ಲೈನ್ 

Job Overview
End Date
20 ನವೆಂಬರ್ 2025
Employment Type
FULL_TIME
Organization
KPSC Vaani (Website)
Location
KA,
Selection Procedure:

📌 ಹುದ್ದೆಗಳ ವಿವರ : 14
ನರ್ಸಿಂಗ್ ಅಧಿಕಾರಿ : 12
ಪ್ರಯೋಗಾಲಯ ತಂತ್ರಜ್ಞ : 1
ಔಷಧಿಕಾರ : 1


🎓ಅರ್ಹತಾ ಮಾನದಂಡ : ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ಹೊಂದಿರಬೇಕು. 
🔹 ನರ್ಸಿಂಗ್ ಅಧಿಕಾರಿ : ಮಾನ್ಯತೆ ಪಡೆದ ಸಂಸ್ಥೆಯಿಂದ ಜಿ.ಎನ್.ಎಂ/ಬಿಎಸ್‌ಸಿ ನರ್ಸಿಂಗ್ ಪದವಿಯನ್ನು ಹೊಂದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.
🔹 ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು :
1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ ಮೂರು ವರ್ಷದ ಡಿಪ್ಲೋಮಾದಲ್ಲಿ ಉತ್ತೀರ್ಣ ಹೊಂದಿರಬೇಕು. ಅಥವಾ
2. ದ್ವಿತೀಯಾ ಪಿ.ಯು.ಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯು ನಡೆಸುವ 2 ವರ್ಷಗಳ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಪಡೆದಿರಬೇಕು.
3. ಪ್ರಯೋಗಶಾಲಾ ತಂತ್ರಜ್ಞರು ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯ ನೋಂದಣಿ ಹೊಂದಿರಬೇಕು.
🔹 ಫಾರ್ಮಸಿಸ್ಟ : ಔಷಧ ವಿತರಕರು ಹುದ್ದೆಗೆ ಅಗತ್ಯ ವಿದ್ಯಾರ್ಹತೆ ಹೊಂದಿದೆ ಮತ್ತು ರಾಜ್ಯದ ಫಾರ್ಮಸಿ ನೋಂದಣಿಯಾಗಿರಬೇಕು. ಸ್ಥಳೀಯ ರಾಜ್ಯ ಭಾಷೆ ತಿಳಿದಿರುವ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸತಕ್ಕದ್ದು.
🔹 ಅಭ್ಯರ್ಥಿಗಳು ಕನಿಷ್ಠ 2 ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. 


🎂 ವಯೋಮಿತಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಗರಿಷ್ಠ 45 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ : ನೇಮಕಾತಿ  ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ. 


💼ಆಯ್ಕೆ ಪ್ರಕ್ರಿಯೆ : ನೇಮಕಾತಿ ಪ್ರಕ್ರಿಯೆ NHM ಮಾರ್ಗಸೂಚಿ ಮತ್ತು ರೋಸ್ಟರ್ ಕಂ ಮೆರಿಟ್ ನಿಯಮಗಳಂತೆ ನಡೆಯುತ್ತದೆ.


💰 ಸಂಬಳದ ವಿವರ : ರೂ. 16,067/- ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.  


🌐 ಅರ್ಜಿ ಸಲ್ಲಿಸುವ ವಿಧಾನ : 
- ಮೊದಲನೆಯದಾಗಿ DHFWS ಕೊಪ್ಪಳ ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
- ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
- DHFWS ಕೊಪ್ಪಳ ನರ್ಸಿಂಗ್ ಆಫೀಸರ್, ಫಾರ್ಮಸಿಸ್ಟ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ – ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- DHFWS ಕೊಪ್ಪಳ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್‌ಲೋಡ್ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- DHFWS ಕೊಪ್ಪಳ ನೇಮಕಾತಿ 2025 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯದಾಗಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಬಹು ಮುಖ್ಯವಾಗಿ ಅರ್ಜಿ ಸಂಖ್ಯೆ ಅಥವಾ ಹೆಚ್ಚಿನ ಉಲ್ಲೇಖಕ್ಕಾಗಿ ವಿನಂತಿ ಸಂಖ್ಯೆಯನ್ನು ಸೆರೆಹಿಡಿಯಿರಿ.


📅 ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆ ದಿನಾಂಕ: 31-10-2025
ವಾಕ್-ಇನ್ ದಿನಾಂಕ: 20-ನವೆಂಬರ್-2025


🌐 ಪ್ರಮುಖ ಸೂಚನೆಗಳು :ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

KAS FDA SDA RRB PSI PC KTET & GPSTR...ಹಾಗೂ ಇನ್ನಿತರ ಪ್ರಶ್ನೆ ಪತ್ರಿಕೆಗಳನ್ನು PDF ರೊಪದಲ್ಲಿ  ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

To Download Official Notification
ಕೊಪ್ಪಳ ಜಿಲ್ಲೆ ಆರೋಗ್ಯ ಇಲಾಖೆ ನೇಮಕಾತಿ,
ಕೊಪ್ಪಳ ಆರೋಗ್ಯ ಇಲಾಖೆ ಭರ್ಜರಿ,
ಕೊಪ್ಪಳ ಜಿಲ್ಲೆ ನೇಮಕಾತಿ 2025,
ಆರೋಗ್ಯ ಇಲಾಖೆ ಉದ್ಯೋಗ,
ಕೊಪ್ಪಳ ಸರ್ಕಾರಿ ನೇಮಕಾತಿ,
ಆರೋಗ್ಯ ಇಲಾಖೆ ಅರ್ಜಿ ಪ್ರಕ್ರಿಯೆ,
ಕೊಪ್ಪಳ ಜಿಲ್ಲೆ ಉದ್ಯೋಗಾವಕಾಶ,
ಆರೋಗ್ಯ ಇಲಾಖೆ ಅರ್ಹತಾ ಮಾಪದಂಡಗಳು
Related Tags: Degree

Comments