DHFWS ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2026: 55 ಶುಶೂಷಣಾಧಿಕಾರಿ (Nursing Officer) ಹುದ್ದೆಗಳಿಗೆ ನೇರ ಸಂದರ್ಶನ
Published by Yallamma G
16 ಮಾರ್ಚ್ 2026
Health and Family Welfare Services
🏥 ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 55 ಶುಶೂಷಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು ಅರ್ಹ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ವೃತ್ತಿಪರ ಅನುಭವ ಮತ್ತು ಸ್ಥಿರ ಉದ್ಯೋಗ ದೊರಕಿಸಿಕೊಳ್ಳಲು ಅವಕಾಶ ನೀಡುತ್ತದೆ.
🩺ಆಸಕ್ತರು ಇಂದೇ ನಿಮ್ಮ ಅರ್ಜಿಯನ್ನು ಸಿದ್ಧಪಡಿಸಿ, ಅಗತ್ಯ ದಾಖಲೆಗಳೊಂದಿಗೆ ಸಮಯಮಿತಿಯೊಳಗೆ ಸಲ್ಲಿಸಿ. ಆರೋಗ್ಯ ಸೇವೆಯಲ್ಲಿ ಮುಂದಿನ ಹೆಜ್ಜೆ ಇಡಲು ಮತ್ತು ಸಮುದಾಯದ ಆರೋಗ್ಯ ಸುಧಾರಣೆಗೆ ಕೊಡುಗೆ ನೀಡಲು ಇದು ಉತ್ತಮ ಅವಕಾಶವಾಗಿದೆ. ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ!
ಈ ಲೇಖನದಲ್ಲಿ ನಾವು ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅರ್ಹತಾ ಮಾನದಂಡಗಳು ಮತ್ತು ಕೊನೆಯ ದಿನಾಂಕದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕೂಡಲೇ ಅರ್ಜಿ ಸಲ್ಲಿಸಿ ಈ ಉದ್ಯೋಗಾವಕಾಶವನ್ನು ಬಳಸಿಕೊಳ್ಳಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 16-ಮಾರ್ಚ್-2026 ರೊಳಗಾಗಿ ಅರ್ಜಿಸಲ್ಲಿಸಬಹುದಾಗಿದೆ.
📌DHFWS ಬೆಂಗಳೂರು ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೆಂಗಳೂರು ( DHFWS ಬೆಂಗಳೂರು )
ಹುದ್ದೆಗಳ ಸಂಖ್ಯೆ: 55
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಯ ಹೆಸರು: ನರ್ಸಿಂಗ್ ಅಧಿಕಾರಿ
ವೇತನ: ತಿಂಗಳಿಗೆ ರೂ. 18,714/-
📌 ಹುದ್ದೆಗಳ ವಿವರ ಮತ್ತು ಸ್ಥಳ ನಿಯೋಜನೆ (Vacancy Details) :
ಒಟ್ಟು 55 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಬೆಂಗಳೂರಿನ ವಿವಿಧ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಭರ್ತಿ ಮಾಡಲಾಗುತ್ತದೆ:
ಕೆ.ಸಿ ಜನರಲ್ ಆಸ್ಪತ್ರೆ (KC General Hospital): 21 ಹುದ್ದೆಗಳು
ಸಾರ್ವಜನಿಕ ಆಸ್ಪತ್ರೆ, ಜಯನಗರ (General Hospital Jayanagar): 19 ಹುದ್ದೆಗಳು
ಸಿ.ವಿ ರಾಮನ್ ಆಸ್ಪತ್ರೆ (CV Raman Hospital): 08 ಹುದ್ದೆಗಳು
ಸಾರ್ವಜನಿಕ ಆಸ್ಪತ್ರೆ, ಕೆ.ಆರ್ ಪುರಂ (General Hospital KR Puram): 03 ಹುದ್ದೆಗಳು
ಸಾರ್ವಜನಿಕ ಆಸ್ಪತ್ರೆ, ಆನೇಕಲ್ (General Hospital Anekal): 02 ಹುದ್ದೆಗಳು
ಸಾರ್ವಜನಿಕ ಆಸ್ಪತ್ರೆ, ಯಲಹಂಕ (General Hospital Yelahanka): 02 ಹುದ್ದೆಗಳು
🎓ಅರ್ಹತಾ ಮಾನದಂಡ : ಅಭ್ಯರ್ಥಿಗಳು ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಿಂದ ಜಿಎನ್ಎಂ (GNM) ಅಥವಾ ಬಿಎಸ್ಸಿ ನರ್ಸಿಂಗ್ (B.Sc Nursing) ಪದವಿಯನ್ನು ಹೊಂದಿರಬೇಕು. ಜೊತೆಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್ (KNC) ನಲ್ಲಿ ನೋಂದಣಿ ಮಾಡಿರಬೇಕು ಮತ್ತು ಕಂಪ್ಯೂಟರ್ ಸಾಕ್ಷರತೆ ಹೊಂದಿರಬೇಕು.
⏳ ವಯಸ್ಸಿನ ಮಿತಿ: ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷಗಳು ಮಿರಬಾರದು.
📝 ನೇರ ಸಂದರ್ಶನದ ವಿವರಗಳು (Walk-in Interview Schedule)
ಆಸಕ್ತ ಅಭ್ಯರ್ಥಿಗಳು ಕೆಳಕಂಡ ದಿನಾಂಕಗಳಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 01:00 ಗಂಟೆಯೊಳಗೆ ತಮ್ಮ ಮೂಲ ದಾಖಲೆಗಳು ಮತ್ತು ನಕಲು ಪ್ರತಿಗಳೊಂದಿಗೆ ಹಾಜರಾಗಬೇಕು.
ಸಂದರ್ಶನದ ದಿನಾಂಕಗಳು:
27-01-2026
02-02-2026
09-02-2026
16-02-2026
23-02-2026
02-03-2026
09-03-2026
16-03-2026
ಸಂದರ್ಶನ ನಡೆಯುವ ಸ್ಥಳ (Venue): ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣ, ಹಳೇ ಟಿ.ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು - 560038.
⭐ ಪ್ರಮುಖ ಸೂಚನೆಗಳು (Important Notes)
- ಇದು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (NHM) ಗುತ್ತಿಗೆ ಆಧಾರಿತ ಹುದ್ದೆಗಳಾಗಿವೆ.
- ಆಯ್ಕೆಯನ್ನು ಮೆರಿಟ್ ಕಮ್ ರೋಸ್ಟರ್ (Merit cum Roster) ಅನ್ವಯ ಮಾಡಲಾಗುತ್ತದೆ.
- ಅಭ್ಯರ್ಥಿಗಳು ಮಹಿಳೆಯರಿಗೆ ಮಾತ್ರ (ಕೆಲವು ನಿರ್ದಿಷ್ಟ ಮೀಸಲಾತಿ ಅನ್ವಯಿಸಬಹುದು, ದಯವಿಟ್ಟು ನೋಟಿಫಿಕೇಶನ್ ಪರಿಶೀಲಿಸಿ).
📝 Required Documents: ಅಭ್ಯರ್ಥಿಗಳು ತಮ್ಮ SSLC ಅಂಕಪಟ್ಟಿ, ನರ್ಸಿಂಗ್ ಅಂಕಪಟ್ಟಿಗಳು, ಪದವಿ ಪ್ರಮಾಣ ಪತ್ರ, KNC ನೋಂದಣಿ ಪತ್ರ, ಜಾತಿ ಪ್ರಮಾಣ ಪತ್ರ, ಮತ್ತು ಕನ್ನಡ ಮಾಧ್ಯಮ/ಗ್ರಾಮೀಣ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ತರತಕ್ಕದ್ದು.
Job Overview
- End Date
- 16 ಮಾರ್ಚ್ 2026
- Employment Type
- FULL_TIME
- Organization
- KPSC Vaani (Website)
- Location
- KA,
Related Tags:
Degree
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.