ಬ್ಯಾಂಕ್ ಕೆಲಸ ಹುಡುಕುತ್ತಿದ್ದೀರಾ? ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 4500 ಹುದ್ದೆಗಳ ಭರ್ತಿ; ಪ್ರತಿ ತಿಂಗಳು ₹15,000 ಸ್ಟೈಫಂಡ್!
Published by: Yallamma G | Date:15 ಜೂನ್ 2026

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ದೇಶಾದ್ಯಂತ ಒಟ್ಟು 4500 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಕರ್ನಾಟಕದ ಪದವೀಧರರಿಗೆ 105 ಹುದ್ದೆಗಳು ಲಭ್ಯವಿದ್ದು, ₹15,000 ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಜೂನ್ 22, 2026 ಕೊನೆಯ ದಿನಾಂಕ. ಸಂಪೂರ್ಣ ಮಾಹಿತಿ ಮತ್ತು ಲಿಂಕ್ ಇಲ್ಲಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ದೇಶದ ಪದವೀಧರ ಯುವಕ-ಯುವತಿಯರಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್ ಆದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ಭರ್ಜರಿ ಸಿಹಿಜಿಸುದ್ದಿ ನೀಡಿದೆ. 2026-27ರ ಹಣಕಾಸು ವರ್ಷಕ್ಕಾಗಿ ದೇಶಾದ್ಯಂತ ಒಟ್ಟು 4,500 ಅಪ್ರೆಂಟಿಸ್ (Apprentices) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಜೂನ್ 2026 ರ ಅಧಿಕೃತ ಅಧಿಸೂಚನೆಯ ಮೂಲಕ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 22-ಜೂನ್-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಅಭ್ಯರ್ಥಿಗಳಿಗೆ ಈ ನೇಮಕಾತಿಯಲ್ಲಿ ಅವಕಾಶವಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಈ ಲೇಖನದಲ್ಲಿ ಹುದ್ದೆಗಳ ವಿವರ, ವಯೋಮಿತಿ, ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಒಟ್ಟು ಹುದ್ದೆಗಳ ವಿವರ ಮತ್ತು ಕರ್ನಾಟಕದ ಪಾಲು
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ಒಟ್ಟು 4,500 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ಒಟ್ಟು 105 ಹುದ್ದೆಗಳನ್ನು ಮೀಸಲಿಡಲಾಗಿದೆ.
ಕರ್ನಾಟಕದ ವರ್ಗಾವಾರು ಹುದ್ದೆಗಳ ಹಂಚಿಕೆ:
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಹತಾ ಮಾನದಂಡಗಳು (Eligibility Criteria)
ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು 31.05.2026 ರ ಕಟ್-ಆಫ್ ದಿನಾಂಕಕ್ಕೆ ಅನ್ವಯಿಸುವಂತೆ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
1. ವಿದ್ಯಾರ್ಹತೆ (Educational Qualification)
ಅಭ್ಯರ್ಥಿಗಳನ್ನು ಎರಡು ಪ್ರಮುಖ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
ಹಂತ 1: ಆನ್‌ಲೈನ್ ಲಿಖಿತ ಪರೀಕ್ಷೆ (Online Test)
BFSI SSC ವತಿಯಿಂದ 100 ಅಂಕಗಳ ವಸ್ತುನಿಷ್ಠ (Objective Type) ಆನ್‌ಲೈನ್ ಪರೀಕ್ಷೆ ನಡೆಯಲಿದ್ದು, ಒಟ್ಟು 60 ನಿಮಿಷಗಳ ಕಾಲಾವಕಾಶ ಇರಲಿದೆ. ಈ ಪರೀಕ್ಷೆಯಲ್ಲಿ ಯಾವುದೇ ನೆಗೆಟಿವ್ ಅಂಕಗಳು ಇರುವುದಿಲ್ಲ.
ಪರೀಕ್ಷೆಯ ಪಠ್ಯಕ್ರಮ (Exam Pattern):
ಅರ್ಜಿ ಶುಲ್ಕದ ವಿವರ (Application Fees)
ಅರ್ಜಿ ಶುಲ್ಕವನ್ನು ಕೇವಲ ಆನ್‌ಲೈನ್ ಮೋಡ್ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ, ನೆಟ್ ಬ್ಯಾಂಕಿಂಗ್) ಮೂಲಕ ಮಾತ್ರ ಪಾವತಿಸಬೇಕು.

ಅರ್ಜಿ ಸಲ್ಲಿಸುವ ಹಂತ ಹಂತದ ವಿಧಾನ (How to Apply)
ಅರ್ಜಿ ಪ್ರಕ್ರಿಯೆಯು ಎರಡು ಭಾಗಗಳಲ್ಲಿ ನಡೆಯುತ್ತದೆ:
1. ಮೊದಲ ಹಂತ (NATS ನೋಂದಣಿ): ಅಭ್ಯರ್ಥಿಗಳು ಮೊದಲು ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ತರಬೇತಿ ಯೋಜನೆ (NATS) ಅಧಿಕೃತ ಪೋರ್ಟಲ್ https://nats.education.gov.in ಗೆ ಭೇಟಿ ನೀಡಿ "Student Register" ಮಾಡಿಕೊಳ್ಳಬೇಕು ಮತ್ತು ಅಲ್ಲಿ 'Central Bank of India' ಜಾಹೀರಾತನ್ನು ಹುಡುಕಿ ಅಪ್ಲೈ ಮಾಡಬೇಕು.
2. ಎರಡನೇ ಹಂತ (BFSI ಬಿಇಇಪಿ ಪೋರ್ಟಲ್): NATS ನಲ್ಲಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ನಂತರ, ಅಭ್ಯರ್ಥಿಗಳಿಗೆ BFSI SSC ಯಿಂದ ಇಮೇಲ್ ಬರಲಿದೆ. ಆ ಬಳಿಕ https://beep.bfsissc.com ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ ನಿಮ್ಮ ಜಾತಿ ಪ್ರಮಾಣಪತ್ರ, ಜಿಲ್ಲಾ ಆಯ್ಕೆಗಳನ್ನು ನಮೂದಿಸಿ ಅರ್ಜಿ ಶುಲ್ಕ ಪಾವತಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಪ್ರಮುಖ ದಿನಾಂಕಗಳು (Important Dates)
ಅಭ್ಯರ್ಥಿಗಳು ಕೊನೆಯ ದಿನದವರೆಗೂ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
NATS ಪೋರ್ಟಲ್:nats.education.gov.in
ಅರ್ಜಿ ಸಲ್ಲಿಕೆ ಲಿಂಕ್: beep.bfsissc.com
ಅಧಿಕೃತ ವೆಬ್‌ಸೈಟ್:centralbank.bank.in
ಅಭ್ಯರ್ಥಿಗಳ ಗಮನಕ್ಕೆ ಮುಖ್ಯ ಸೂಚನೆ :ಈ ಹುದ್ದೆಗಳು ಕೇವಲ 1 ವರ್ಷದ ತಾತ್ಕಾಲಿಕ ತರಬೇತಿ ಅವಧಿಯಾಗಿದ್ದು, ತರಬೇತಿ ಮುಗಿದ ನಂತರ ಬ್ಯಾಂಕಿನಲ್ಲಿ ಕಾಯಂ ಉದ್ಯೋಗವನ್ನು ಪಡೆಯಲು ಯಾವುದೇ ಹಕ್ಕು ಇರುವುದಿಲ್ಲ. ಆದರೆ ಬ್ಯಾಂಕಿಂಗ್ ವಲಯದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮತ್ತು ಮುಂದಿನ ಐಬಿಪಿಎಸ್ (IBPS) ಪರೀಕ್ಷೆಗಳಿಗೆ ಅನುಭವದ ಪ್ರಮಾಣಪತ್ರ ಪಡೆಯಲು ಇದು ಅತ್ಯುತ್ತಮ ಅವಕಾಶವಾಗಿದೆ.
ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಉದ್ಯೋಗ ಮಾಹಿತಿ, ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಸದಾ KPSC Vaani ವೆಬ್‌ಸೈಟ್ ಫಾಲೋ ಮಾಡಿ!

- ಪರಿಶಿಷ್ಟ ಜಾತಿ (SC): 17
- ಪರಿಶಿಷ್ಟ ಪಂಗಡ (ST): 07
- ಇತರ ಹಿಂದುಳಿದ ವರ್ಗಗಳು (OBC): 28
- ಆರ್ಥಿಕವಾಗಿ ಹಿಂದುಳಿದ ವರ್ಗ (EWS): 11
- ಸಾಮಾನ್ಯ ವರ್ಗ (UR): 42
- ವಿಕಲಚೇತನರು (PwBD): ತಲಾ 1 ಹುದ್ದೆ (VI, HI, OH, ID ವಿಭಾಗಗಳಲ್ಲಿ)
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಹತಾ ಮಾನದಂಡಗಳು (Eligibility Criteria)
ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು 31.05.2026 ರ ಕಟ್-ಆಫ್ ದಿನಾಂಕಕ್ಕೆ ಅನ್ವಯಿಸುವಂತೆ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
1. ವಿದ್ಯಾರ್ಹತೆ (Educational Qualification)
- ಅಭ್ಯರ್ಥಿಯು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ಶಿಸ್ತಿನಲ್ಲಿ ಪದವಿ (Graduation Degree) ಮುಗಿಸಿರಬೇಕು.
- ಅತಿ ಮುಖ್ಯ ನಿಯಮ: ಅಭ್ಯರ್ಥಿಗಳು 01.01.2022 ರ ನಂತರವೇ ಪದವಿ ಪೂರ್ಣಗೊಳಿಸಿರಬೇಕು. ಅದಕ್ಕಿಂತ ಮೊದಲು ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
- ಅಭ್ಯರ್ಥಿಗಳು ಕಡ್ಡಾಯವಾಗಿ ಭಾರತ ಸರ್ಕಾರದ NATS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರಬೇಕು.
- ಕನಿಷ್ಠ ವಯಸ್ಸು: 20 ವರ್ಷಗಳು
- ಗರಿಷ್ಠ ವಯಸ್ಸು: 28 ವರ್ಷಗಳು (ಅಭ್ಯರ್ಥಿಯು 31.05.1998 ಮತ್ತು 31.05.2006 ರ ನಡುವೆ ಜನಿಸಿರಬೇಕು).
- ಸರ್ಕಾರದ ನಿಯಮಾವಳಿಗಳನ್ವಯ ವಯೋಮಿತಿ ಸಡಿಲಿಕೆ:
- SC / ST ಅಭ್ಯರ್ಥಿಗಳಿಗೆ: 5 ವರ್ಷಗಳು
- OBC (Non-Creamy Layer) ಅಭ್ಯರ್ಥಿಗಳಿಗೆ: 3 ವರ್ಷಗಳು
- PwBD ಅಭ್ಯರ್ಥಿಗಳಿಗೆ: 10 ರಿಂದ 15 ವರ್ಷಗಳು
- ವಿಧವೆಯರು/ವಿಚ್ಛೇದಿತ ಮಹಿಳೆಯರಿಗೆ: ಸಾಮಾನ್ಯ ವರ್ಗಕ್ಕೆ 35 ವರ್ಷ, OBC ಗೆ 38 ವರ್ಷ ಹಾಗೂ SC/ST ಗೆ 40 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ.
- ತರಬೇತಿ ಅವಧಿ: ಒಟ್ಟು 12 ತಿಂಗಳು (1 ವರ್ಷ).
- ಮಾಸಿಕ ಸ್ಟೈಫಂಡ್: ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 15,000/- ಸ್ಟೈಫಂಡ್ ನೀಡಲಾಗುತ್ತದೆ. ಇದಲ್ಲದೆ ಯಾವುದೇ ಹೆಚ್ಚುವರಿ ಭತ್ಯೆಗಳು ಅಥವಾ ವಸತಿ ಸೌಕರ್ಯಗಳನ್ನು ಬ್ಯಾಂಕ್ ಒದಗಿಸುವುದಿಲ್ಲ.
- ರಜೆಗಳು: ತಿಂಗಳಿಗೆ 1 ಕ್ಯಾಶುಯಲ್ ಲೀವ್ (CL) ಪಡೆಯಲು ಅರ್ಹರಾಗಿರುತ್ತಾರೆ ಮತ್ತು ಬ್ಯಾಂಕಿನ ಅಧಿಕೃತ ರಜೆಗಳು ಅನ್ವಯಿಸುತ್ತವೆ.
ಅಭ್ಯರ್ಥಿಗಳನ್ನು ಎರಡು ಪ್ರಮುಖ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
ಹಂತ 1: ಆನ್‌ಲೈನ್ ಲಿಖಿತ ಪರೀಕ್ಷೆ (Online Test)
BFSI SSC ವತಿಯಿಂದ 100 ಅಂಕಗಳ ವಸ್ತುನಿಷ್ಠ (Objective Type) ಆನ್‌ಲೈನ್ ಪರೀಕ್ಷೆ ನಡೆಯಲಿದ್ದು, ಒಟ್ಟು 60 ನಿಮಿಷಗಳ ಕಾಲಾವಕಾಶ ಇರಲಿದೆ. ಈ ಪರೀಕ್ಷೆಯಲ್ಲಿ ಯಾವುದೇ ನೆಗೆಟಿವ್ ಅಂಕಗಳು ಇರುವುದಿಲ್ಲ.
ಪರೀಕ್ಷೆಯ ಪಠ್ಯಕ್ರಮ (Exam Pattern):
- ಜನರಲ್ / ಫೈನಾನ್ಶಿಯಲ್ ಅವೇರ್ನೆಸ್: 20 ಪ್ರಶ್ನೆಗಳು (20 ಅಂಕ)
- ಕ್ವಾಂಟಿಟೇಟಿವ್, ರೀಸನಿಂಗ್ ಮತ್ತು ಆಪ್ಟಿಟ್ಯೂಡ್: 20 ಪ್ರಶ್ನೆಗಳು (20 ಅಂಕ)
- ಕಂಪ್ಯೂಟರ್ ಜ್ಞಾನ (Computer Knowledge): 20 ಪ್ರಶ್ನೆಗಳು (20 ಅಂಕ)
- ಜನರಲ್ ಇಂಗ್ಲಿಷ್ (General English): 20 ಪ್ರಶ್ನೆಗಳು (20 ಅಂಕ)
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಉತ್ಪನ್ನಗಳು ಮತ್ತು ಸೇವೆಗಳು: 20 ಪ್ರಶ್ನೆಗಳು (20 ಅಂಕ)
- ಆನ್‌ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.
- ಕರ್ನಾಟಕದ ಅಭ್ಯರ್ಥಿಗಳಿಗೆ "ಕನ್ನಡ" ಭಾಷೆಯ ಜ್ಞಾನ ಕಡ್ಡಾಯ.
- ಯಾರು ತಮ್ಮ 10ನೇ ಅಥವಾ 12ನೇ ತರಗತಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದಿದ್ದಾರೋ ಮತ್ತು ಅಂಕಪಟ್ಟಿ ಹೊಂದಿದ್ದಾರೋ ಅವರಿಗೆ ಭಾಷಾ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ.
ಅರ್ಜಿ ಶುಲ್ಕದ ವಿವರ (Application Fees)
ಅರ್ಜಿ ಶುಲ್ಕವನ್ನು ಕೇವಲ ಆನ್‌ಲೈನ್ ಮೋಡ್ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ, ನೆಟ್ ಬ್ಯಾಂಕಿಂಗ್) ಮೂಲಕ ಮಾತ್ರ ಪಾವತಿಸಬೇಕು.

ಅರ್ಜಿ ಸಲ್ಲಿಸುವ ಹಂತ ಹಂತದ ವಿಧಾನ (How to Apply)
ಅರ್ಜಿ ಪ್ರಕ್ರಿಯೆಯು ಎರಡು ಭಾಗಗಳಲ್ಲಿ ನಡೆಯುತ್ತದೆ:
1. ಮೊದಲ ಹಂತ (NATS ನೋಂದಣಿ): ಅಭ್ಯರ್ಥಿಗಳು ಮೊದಲು ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ತರಬೇತಿ ಯೋಜನೆ (NATS) ಅಧಿಕೃತ ಪೋರ್ಟಲ್ https://nats.education.gov.in ಗೆ ಭೇಟಿ ನೀಡಿ "Student Register" ಮಾಡಿಕೊಳ್ಳಬೇಕು ಮತ್ತು ಅಲ್ಲಿ 'Central Bank of India' ಜಾಹೀರಾತನ್ನು ಹುಡುಕಿ ಅಪ್ಲೈ ಮಾಡಬೇಕು.
2. ಎರಡನೇ ಹಂತ (BFSI ಬಿಇಇಪಿ ಪೋರ್ಟಲ್): NATS ನಲ್ಲಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ನಂತರ, ಅಭ್ಯರ್ಥಿಗಳಿಗೆ BFSI SSC ಯಿಂದ ಇಮೇಲ್ ಬರಲಿದೆ. ಆ ಬಳಿಕ https://beep.bfsissc.com ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ ನಿಮ್ಮ ಜಾತಿ ಪ್ರಮಾಣಪತ್ರ, ಜಿಲ್ಲಾ ಆಯ್ಕೆಗಳನ್ನು ನಮೂದಿಸಿ ಅರ್ಜಿ ಶುಲ್ಕ ಪಾವತಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಪ್ರಮುಖ ದಿನಾಂಕಗಳು (Important Dates)
ಅಭ್ಯರ್ಥಿಗಳು ಕೊನೆಯ ದಿನದವರೆಗೂ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 12 ಜೂನ್ 2026
- ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ: 22 ಜೂನ್ 2026
- ಆನ್‌ಲೈನ್ ಪರೀಕ್ಷೆ ನಡೆಯುವ ಅಂದಾಜು ದಿನಾಂಕ: ಜುಲೈ 2026ರ ಮೊದಲ ವಾರ
NATS ಪೋರ್ಟಲ್:nats.education.gov.in
ಅರ್ಜಿ ಸಲ್ಲಿಕೆ ಲಿಂಕ್: beep.bfsissc.com
ಅಧಿಕೃತ ವೆಬ್‌ಸೈಟ್:centralbank.bank.in
ಅಭ್ಯರ್ಥಿಗಳ ಗಮನಕ್ಕೆ ಮುಖ್ಯ ಸೂಚನೆ :ಈ ಹುದ್ದೆಗಳು ಕೇವಲ 1 ವರ್ಷದ ತಾತ್ಕಾಲಿಕ ತರಬೇತಿ ಅವಧಿಯಾಗಿದ್ದು, ತರಬೇತಿ ಮುಗಿದ ನಂತರ ಬ್ಯಾಂಕಿನಲ್ಲಿ ಕಾಯಂ ಉದ್ಯೋಗವನ್ನು ಪಡೆಯಲು ಯಾವುದೇ ಹಕ್ಕು ಇರುವುದಿಲ್ಲ. ಆದರೆ ಬ್ಯಾಂಕಿಂಗ್ ವಲಯದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮತ್ತು ಮುಂದಿನ ಐಬಿಪಿಎಸ್ (IBPS) ಪರೀಕ್ಷೆಗಳಿಗೆ ಅನುಭವದ ಪ್ರಮಾಣಪತ್ರ ಪಡೆಯಲು ಇದು ಅತ್ಯುತ್ತಮ ಅವಕಾಶವಾಗಿದೆ.
ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಉದ್ಯೋಗ ಮಾಹಿತಿ, ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಸದಾ KPSC Vaani ವೆಬ್‌ಸೈಟ್ ಫಾಲೋ ಮಾಡಿ!
Application End Date: 22 ಜೂನ್ 2026
Employment Type: FULL_TIME
Hiring Organization: Central Bank of India https://centralbank.bank.in/en
Work Location: handermukhi Building, Nariman Point, Mumbai, Mumbai, MA, 400021
To Download Official Notification
Related Tags: Degree

Comments