ಬ್ಯಾಂಕ್ ಆಫ್ ಬರೋಡಾದಲ್ಲಿ ಭರ್ಜರಿ ನೇಮಕಾತಿ: 5,000 ಅಪ್ರೆಂಟಿಸ್ ಹುದ್ದೆಗಳಿಗೆ ಇಂದೇ ಅಪ್ಲೈ ಮಾಡಿ!
ಬ್ಯಾಂಕ್ ಆಫ್ ಬರೋಡಾ (Bank of Baroda) ತನ್ನ ವಿವಿಧ ಶಾಖೆಗಳಲ್ಲಿ 'ಅಪ್ರೆಂಟಿಸ್ ಕಾಯ್ದೆ 1961' ರ ಅಡಿಯಲ್ಲಿ ತರಬೇತಿ ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 5000 ಹುದ್ದೆಗಳು ಖಾಲಿ ಇದ್ದು, ಯಾವುದೇ ಮಾನ್ಯತೆ ಪಡೆದ ಪದವಿ (Graduation) ಹೊಂದಿರುವ ಅಭ್ಯರ್ಥಿಗಳಿಗೆ ಇದು ಬ್ಯಾಂಕಿಂಗ್ ವಲಯದಲ್ಲಿ ಅನುಭವ ಪಡೆಯಲು ಒಂದು ಉತ್ತಮ ಅವಕಾಶವಾಗಿದೆ.
ಬ್ಯಾಂಕ್ ಆಫ್ ಬರೋಡಾ ಮೇ 2026 ರ BOB ಅಧಿಕೃತ ಅಧಿಸೂಚನೆಯ ಮೂಲಕ ಒಟ್ಟು 5000 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ದಿನಾಂಕ ಅಥವಾ ಅದಕ್ಕೂ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-ಜೂನ್-2026.
ಈ ನೇಮಕಾತಿಯು ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ, ನೇರ ನೇಮಕಾತಿ ಪ್ರಕ್ರಿಯೆಯ ಮೂಲಕ ನಡೆಯಲಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ, ಅರ್ಹತೆಗಳು, ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಕರ್ನಾಟಕದಲ್ಲಿಯೂ ಹೆಚ್ಚಿನ ಸಂಖ್ಯೆಯ ಹುದ್ದೆಗಳಿದ್ದು, ಅಭ್ಯರ್ಥಿಗಳು ಈ ಕೆಳಗಿನ ಸಂಪೂರ್ಣ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.
visit official website : https://bankofbaroda.bank.in/
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜೂನ್ 08, 2026 ರಿಂದ 15-ಜೂನ್-2026 ರವರೆಗೆ ವಿಸ್ತರಿಸಲಾಗಿದೆ.
ಹುದ್ದೆಗಳ ವಿವರ (Vacancy Details)
- ಒಟ್ಟು ಹುದ್ದೆಗಳ ಸಂಖ್ಯೆ: 5000
- ಕರ್ನಾಟಕದಲ್ಲಿರುವ ಹುದ್ದೆಗಳು: 483 ಹುದ್ದೆಗಳು (SC-77, ST-33, OBC-130, EWS-48, UR-195)

ವಿದ್ಯಾರ್ಹತೆ ಮತ್ತು ವಯೋಮಿತಿ (Eligibility Criteria)
- ಶೈಕ್ಷಣಿಕ ಅರ್ಹತೆ: ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Graduation Degree) ಪೂರ್ಣಗೊಳಿಸಿರಬೇಕು.
- ವಯೋಮಿತಿ (01.05.2026 ಕ್ಕೆ ಅನ್ವಯವಾಗುವಂತೆ): ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷಗಳ ಒಳಗಿರಬೇಕು.
- ವಯೋಮಿತಿ ಸಡಿಲಿಕೆ:
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇರುತ್ತದೆ.
- ಇತರೆ ಹಿಂದುಳಿದ ವರ್ಗಗಳ (OBC-NCL) ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಇರುತ್ತದೆ.
- ವಿಕಲಚೇತನ (PwBD) ಅಭ್ಯರ್ಥಿಗಳಿಗೆ ನಿಯಮಾನುಸಾರ 10 ರಿಂದ 15 ವರ್ಷಗಳ ಸಡಿಲಿಕೆ ನೀಡಲಾಗಿದೆ.
- ತರಬೇತಿಯ ಅವಧಿ: ಅಭ್ಯರ್ಥಿಗಳಿಗೆ 12 ತಿಂಗಳ (1 ವರ್ಷ) ಆನ್-ದಿ-ಜಾಬ್ ತರಬೇತಿ (On-the Job Training) ನೀಡಲಾಗುತ್ತದೆ.
- ಸ್ಟೈಪೆಂಡ್: ಈ ಅವಧಿಯಲ್ಲಿ ಆಯ್ಕೆಯಾದ ಅಪ್ರೆಂಟಿಸ್‌ಗಳಿಗೆ ಪ್ರತಿ ತಿಂಗಳು ₹15,000/- ಸ್ಟೈಪೆಂಡ್ (ಶಿಷ್ಯವೇತನ) ನೀಡಲಾಗುವುದು.
- ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಮೂರು ಹಂತಗಳನ್ನು ಒಳಗೊಂಡಿರುತ್ತದೆ:
- ಆನ್‌ಲೈನ್ ಪರೀಕ್ಷೆ (Online Examination): ಸಾಮಾನ್ಯ ಜ್ಞಾನ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಕಂಪ್ಯೂಟರ್ ಜ್ಞಾನ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯಗಳ ಮೇಲೆ 100 ಅಂಕಗಳಿಗೆ ಪರೀಕ್ಷೆ ಇರುತ್ತದೆ. ತಪ್ಪು ಉತ್ತರಗಳಿಗೆ ಯಾವುದೇ ನೆಗೆಟಿವ್ ಅಂಕಗಳು (No negative marks) ಇರುವುದಿಲ್ಲ.
- ದಾಖಲಾತಿ ಪರಿಶೀಲನೆ (Document Verification): ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ.
- ಸ್ಥಳೀಯ ಭಾಷಾ ಪರೀಕ್ಷೆ (Test of Local Language): ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಕರ್ನಾಟಕಕ್ಕೆ ಅರ್ಜಿ ಸಲ್ಲಿಸುವವರು 'ಕನ್ನಡ' (Kannada) ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. (10ನೇ ಅಥವಾ 12ನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಓದಿದ್ದರೆ ಈ ಪರೀಕ್ಷೆ ಇರುವುದಿಲ್ಲ).
ಅರ್ಜಿ ಶುಲ್ಕದ ವಿವರ (Application Fee)
- SC / ST / PwBD ಅಭ್ಯರ್ಥಿಗಳಿಗೆ : ₹200/- + GST
- ಸಾಮಾನ್ಯ, EWS, OBC (ಪುರುಷರಿಗೆ) : ₹800/- + GST
- ಸಾಮಾನ್ಯ, EWS, OBC (ಮಹಿಳೆಯರು/ತೃತೀಯ ಲಿಂಗಿಗಳಿಗೆ) : ₹600/- + GST
- ಮೊದಲಿಗೆ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗಳಾದ NATS (nats.education.gov.in) ಅಥವಾ NAPS (apprenticeshipindia.gov.in) ನಲ್ಲಿ ಕಡ್ಡಾಯವಾಗಿ ನೋಂದಣಿ (Register) ಮಾಡಿಕೊಳ್ಳಬೇಕು.
- ನಂತರ 'Bank of Baroda' ಹುದ್ದೆಗಳನ್ನು ಹುಡುಕಿ ಅಪ್ಲೈ ಮಾಡಬೇಕು.
- ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ, ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಅರ್ಜಿ ಮತ್ತು ಪರೀಕ್ಷಾ ಶುಲ್ಕವನ್ನು (BFSI SSC ಮೂಲಕ) ಪಾವತಿಸಲು ಲಿಂಕ್ ಕಳುಹಿಸಲಾಗುತ್ತದೆ.
- ಶುಲ್ಕ ಪಾವತಿಸಿದ ಮೇಲಷ್ಟೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಂತೆ ಪರಿಗಣಿಸಲಾಗುತ್ತದೆ.

ಪ್ರಮುಖ ದಿನಾಂಕಗಳು (Important Dates)
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19 ಮೇ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಜೂನ್ 2026
KAS, PSI, PC, FDA, SDA, RRB, PDO UPSC ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ
Job Overview
- No. of posts
- 5000
- Start Date
- 19 ಮೇ 2026
- End Date
- 15 ಜೂನ್ 2026
- Employment Type
- FULL_TIME
- Organization
- BOB (Website)
- Location
- Building 16, Baroda Bhawan, Sansad Marg (Parliament Street), New Delhli, ನವದೆಹಲಿ, DL, 110001
Apply online Bank of Baroda Apprentice Recruitment 2026
To Buy: ನಿಮ್ಮ ಸ್ಪರ್ಧಾತ್ಮಕ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ
Related Tags:
Degree
Comments