ರೈಲ್ವೆ ನೇಮಕಾತಿ ಮಂಡಳಿ ಪ್ಯಾರಾಮೆಡಿಕಲ್ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರಗಳು ಪ್ರಕಟ

ರೈಲ್ವೆ ನೇಮಕಾತಿ ಮಂಡಳಿ ಪ್ಯಾರಾಮೆಡಿಕಲ್ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರಗಳು ಪ್ರಕಟ
05 ಆಗಸ್ಟ್ 2019 Indian Railway
ರೈಲ್ವೆ ನೇಮಕಾತಿ ಮಂಡಳಿ(RRB)ಗಳು ದಿನಾಂಕ 19-07-2019 ರಿಂದ 21-07-2019 ರವರೆಗೆ ನಡೆಸಿದಂತಹ ಪ್ಯಾರಾ ಮೆಡಿಕಲ್ ಹುದ್ದೆಗಳ ನೇಮಕಾತಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಿತ್ತು. ಈ ಹುದ್ದೆಗಳಿಗೆ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ RRB ಯು ತಮ್ಮ ತಮ್ಮ ಪ್ರಶ್ನೆಪತ್ರಿಕೆಯನ್ನು ನೋಡಲು ಹಾಗೂ ಕೀ ಉತ್ತರಗಳನ್ನು ಪರೀಕ್ಷಿಸಲು ಅವಕಾಶ ಒದಗಿಸಿದ್ದು, ದಿನಾಂಕ 05-08-2019 ರಿಂದ 08-08-2019 ರವರೆಗೆ ಅರ್ಜಿಗಳ ಜಾಲತಾಣದಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಕೀ ಉತ್ತರಗಳು ಲಭ್ಯವಿರಲಿವೆ. RRB ಗಳು ನೀಡಿದಂತಹ ಕೀ ಉತ್ತರಗಳಲ್ಲಿ ಏನಾದರೂ ತಪ್ಪು ಕಂಡು ಬಂದಲ್ಲಿ ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು ಪ್ರತಿ ಪ್ರಶ್ನೆಗೆ ರೂಪಾಯಿ 50/- ಶುಲ್ಕ ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಕೀ ಉತ್ತರ ಹಾಗೂ ತಮ್ಮ ಪ್ರಶ್ನೆ ಪತ್ರಿಕೆಗಳನ್ನು ನೋಡಬಹುದು.
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.