ಕರ್ನಾಟಕದ ವಿವಿಧ ಜಿಲ್ಲೆಯ ಪೊಲೀಸ್ ಇಲಾಖೆಯಿಂದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ವಿವಿಧ ಆಯ್ಕೆಪಟ್ಟಿಗಳು ಪ್ರಕಟ
Published by Surekha Halli
19 ಮೇ 2020
Karnataka State Police
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕೈಗೊಂಡ ವಿವಿಧ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಕೈಗೊಂಡ ನೇಮಕಾತಿ ಪ್ರಕಿಯೆಗಳ ವಿವಿಧ ಆಯ್ಕೆ ಪಟ್ಟಿಗಳನ್ನು ಇಲಾಖೆಯು ಪ್ರಕಟಿಸಿದೆ.
- ಈ ಕೆಳಗೆ ನೀಡಿರುವ ವಿವಿಧ ಪಟ್ಟಿಗಳು ಪ್ರಕಟಗೊಂಡಿವೆ.
* ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ (Civil PC) ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ದಿನಾಂಕ : 17-11-2019 ರಂದು ಲಿಖಿತ ಪರೀಕ್ಷೆ ನಡೆಸಿತ್ತು, ಹಾಗೂ 18-3-2020 ರಂದು ಯಶಸ್ವಿಯಾಗಿ ದೈಹಿಕ ಪರೀಕ್ಷೆಗಳನ್ನೂ ಕೂಡ ನಡೆಸಿದೆ.
* ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸ್ಟೇಬಲ್ (APC) Non-Hk ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ದಿನಾಂಕ : 01-12-2019 ರಂದು ಲಿಖಿತ ಪರೀಕ್ಷೆ ಕೂಡನಡೆಸಿದೆ, ಹಾಗೂ ಯಶಸ್ವಿಯಾಗಿ ದೈಹಿಕ ಪರೀಕ್ಷೆಗಳನ್ನೂ ಕೂಡ ನಡೆಸಿದೆ.
* 12 PSI (ಸಿವಿಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್) ಹುದ್ದೆಗಳ (ಪುರುಷ & ಮಹಿಳಾ, HK) ನೇಮಕಾತಿಗೆ ಸಂಬಂಧಿಸಿದಂತೆ 1:1 ತಾತ್ಕಾಲಿಕ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.
* ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ (ಕೆ.ಎಸ್.ಆರ್.ಪಿ) (ಪುರುಷ)-2019(HK-NHK) (Post 218)
ಕಲ್ಯಾಣ ಕರ್ನಾಟಕ/ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಖಾಲಿ ಇದ್ದ 218 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:1 ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಇದೀಗ ಪ್ರಕಟಗೊಂಡಿದೆ.
- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಈ ಎಲ್ಲ ಆಯ್ಕೆಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.