ಕರ್ನಾಟಕ ರಾಜ್ಯ ಪೊಲೀಸ್ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 8176 ಹುದ್ದೆಗಳ ಬೃಹತ್ ನೇಮಕಾತಿಗೆ ಚಾಲನೆ
Published by: Yallamma G | Date:5 ಮಾರ್ಚ್ 2026

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ (KSP) ಸೇವೆ ಸಲ್ಲಿಸಿ, ನಾಡಿನ ರಕ್ಷಣೆ ಮಾಡಬೇಕು ಎಂದು ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದೆ. ಹೌದು, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಬರೋಬ್ಬರಿ8176 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಹಾಗೂ ವಿವಿಧ ಕಾನ್ಸ್‌ಟೇಬಲ್ (PC) ಹುದ್ದೆಗಳ ಭರ್ತಿಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅಧಿಕೃತ ಅಧಿಸೂಚನೆ (Notification) ಪ್ರಕಟವಾಗುವ ಸಾಧ್ಯತೆಯಿದೆ.
ಈ ಬೃಹತ್ ನೇಮಕಾತಿಯ ಕುರಿತಾದ ಸಂಪೂರ್ಣ ವಿವರ, ಹುದ್ದೆಗಳ ಹಂಚಿಕೆ ಮತ್ತು ಮುಂಬರುವ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಹೇಗೆ ಸಿದ್ಧರಾಗಬೇಕು ಎಂಬ ಡೀಟೇಲ್ಸ್ ಅನ್ನು KPSCVaani ಇಲ್ಲಿ ನಿಮಗೆ ನೀಡುತ್ತಿದೆ.
ಈಗಾಗಲೇ ಅಧಿಸೂಚಿದ PC ಮತ್ತು PSI ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ
ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ (Vacancy Breakdown) :
ಈ ಬಾರಿ ಒಂದೇ ವಿಭಾಗದಲ್ಲಿ ಅಲ್ಲದೆ, ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಬೃಹತ್ ಪ್ರಮಾಣದಲ್ಲಿ ನೇಮಕಾತಿ ನಡೆಯಲಿದೆ. 8,176 ಹುದ್ದೆಗಳ ವಿಂಗಡಣೆ ಈ ಕೆಳಗಿನಂತಿದೆ:
ಅಧಿಕೃತ ಅಧಿಸೂಚನೆ ಪ್ರಕಟವಾದ ಬಳಿಕ ನಿಖರ ಮಾಹಿತಿ ಲಭ್ಯವಾಗಲಿದ್ದರೂ, ಪೊಲೀಸ್ ಇಲಾಖೆಯ ಹಿಂದಿನ ನೇಮಕಾತಿ ನಿಯಮಾವಳಿಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಈ ಕೆಳಗಿನಂತಿರಲಿದೆ:
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ? (Selection Process)
ಕರ್ನಾಟಕ ಪೊಲೀಸ್ ಇಲಾಖೆಯ ನೇಮಕಾತಿ ಪ್ರಕ್ರಿಯೆಯು ಅತ್ಯಂತ ಪಾರದರ್ಶಕ ಹಾಗೂ ಕಟ್ಟುನಿಟ್ಟಾಗಿರುತ್ತದೆ. ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಯಶಸ್ವಿಯಾಗಿ ಪೂರೈಸಬೇಕಾಗುತ್ತದೆ:

- ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ (Detective PSI): 20 ಹುದ್ದೆಗಳು
- ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (Armed Police - CAR/DAR): 1,650 ಹುದ್ದೆಗಳು
- ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable): 4110 ಹುದ್ದೆಗಳು
- ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (KSRP Constable): 2,032 ಹುದ್ದೆಗಳು
- ಕೆಎಸ್‌ಐಎಸ್‌ಎಫ್ ಕಾನ್ಸ್‌ಟೇಬಲ್ (KSISF Police Constable): 364 ಹುದ್ದೆಗಳು
ಅಧಿಕೃತ ಅಧಿಸೂಚನೆ ಪ್ರಕಟವಾದ ಬಳಿಕ ನಿಖರ ಮಾಹಿತಿ ಲಭ್ಯವಾಗಲಿದ್ದರೂ, ಪೊಲೀಸ್ ಇಲಾಖೆಯ ಹಿಂದಿನ ನೇಮಕಾತಿ ನಿಯಮಾವಳಿಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಈ ಕೆಳಗಿನಂತಿರಲಿದೆ:
- ಕಾನ್ಸ್‌ಟೇಬಲ್ ಹುದ್ದೆಗಳಿಗೆ (Civil, DAR, KSRP, KSISF): ಪಿಯುಸಿ (PUC) (10+2) ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು.
- ಪಿಎಸ್‌ಐ ಹುದ್ದೆಗಳಿಗೆ (PSI): ಯುಜಿಸಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ (Degree) ಅಥವಾ ತತ್ಸಮಾನ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.
ವಯೋಮಿತಿ (Age Limit)
- ಕಾನ್ಸ್‌ಟೇಬಲ್ ಹುದ್ದೆಗಳಿಗೆ: ಕನಿಷ್ಠ 19 ವರ್ಷಗಳು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 25 ವರ್ಷ, ಹಾಗೂ ಮೀಸಲಾತಿ ಕೋರುವ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ (27/30 ವರ್ಷಗಳವರೆಗೆ) ಇರಲಿದೆ.
- ಪಿಎಸ್‌ಐ ಹುದ್ದೆಗಳಿಗೆ: ಕನಿಷ್ಠ 21 ವರ್ಷಗಳು. ಗರಿಷ್ಠ ವಯೋಮಿತಿ 30 ರಿಂದ 32 ವರ್ಷಗಳವರೆಗೆ (ವರ್ಗಾವಾರು ಸಡಿಲಿಕೆ ಅನ್ವಯ) ಇರುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ? (Selection Process)
ಕರ್ನಾಟಕ ಪೊಲೀಸ್ ಇಲಾಖೆಯ ನೇಮಕಾತಿ ಪ್ರಕ್ರಿಯೆಯು ಅತ್ಯಂತ ಪಾರದರ್ಶಕ ಹಾಗೂ ಕಟ್ಟುನಿಟ್ಟಾಗಿರುತ್ತದೆ. ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಯಶಸ್ವಿಯಾಗಿ ಪೂರೈಸಬೇಕಾಗುತ್ತದೆ:
- ಲಿಖಿತ ಪರೀಕ್ಷೆ (Written Examination): ಸಾಮಾನ್ಯ ಜ್ಞಾನ, ಮಾನಸಿಕ ಸಾಮರ್ಥ್ಯ, ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಬಹು ಆಯ್ಕೆಯ (MCQ) ಪ್ರಶ್ನೆಪತ್ರಿಕೆ ಇರಲಿದೆ (PSI ಹುದ್ದೆಗಳಿಗೆ ಪ್ರಬಂಧ ಮತ್ತು ಭಾಷಾಂತರ ಪರೀಕ್ಷೆ ಇರುತ್ತದೆ).
- ದೈಹಿಕ ಸಹಿಷ್ಣುತಾ ಪರೀಕ್ಷೆ (PET) ಹಾಗೂ ದೈಹಿಕ ಮಾಪನ ಪರೀಕ್ಷೆ (PST): ಓಟ, ಉದ್ದ ಜಿಗಿತ/ಎತ್ತರ ಜಿಗಿತ, ಗುಂಡು ಎಸೆತ (Shotput) ಹಾಗೂ ಎತ್ತರ, ಎದೆಯಳತೆ (ಪುರುಷರಿಗೆ) ಮತ್ತು ತೂಕ (ಮಹಿಳೆಯರಿಗೆ) ಪರೀಕ್ಷೆ ನಡೆಯಲಿದೆ.
- ವೈದ್ಯಕೀಯ ಪರೀಕ್ಷೆ (Medical Test): ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಕಣ್ಣಿನ ದೃಷ್ಟಿ, ಶ್ರವಣ ಸಾಮರ್ಥ್ಯ ಸೇರಿದಂತೆ ಸಂಪೂರ್ಣ ವೈದ್ಯಕೀಯ ತಪಾಸಣೆ.
- ಮೂಲ ದಾಖಲಾತಿ ಪರಿಶೀಲನೆ (Document Verification).
ಈಗಿನಿಂದಲೇ ನಿಮ್ಮ ಸಿದ್ಧತೆ ಹೇಗಿರಲಿ? (Preparation Tips)
ಈ ಲೇಖನ ಓದುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಒಂದು ಪ್ರಮುಖ ಸಲಹೆ: "ಅಧಿಸೂಚನೆ ಹೊರಬಿದ್ದ ಮೇಲೆ ಓದುತ್ತೇನೆ" ಎಂಬ ಮನಸ್ಥಿತಿಯಿಂದ ಹೊರಬನ್ನಿ.- ಪ್ರತಿದಿನ ಕನಿಷ್ಠ 1-2 ಗಂಟೆಗಳ ಕಾಲ ಓಡುವ (Running) ಅಭ್ಯಾಸ ಮಾಡಿ. ಫಿಟ್ನೆಸ್ ಕಡೆ ಗಮನ ಕೊಡಿ.
- ಪ್ರತಿದಿನ ಪತ್ರಿಕೆಗಳನ್ನು ಓದುವ ಮೂಲಕ ಪ್ರಚಲಿತ ವಿದ್ಯಮಾನಗಳ (Current Affairs) ಬಗ್ಗೆ ಅಪ್‌ಡೇಟ್ ಆಗಿರಿ.
- ಹಳೆಯ ಪ್ರಶ್ನೆಪತ್ರಿಕೆಗಳನ್ನು (Previous Year Question Papers) ಬಿಡಿಸಿ, ಪರೀಕ್ಷಾ ಮಾದರಿಯನ್ನು ಅರ್ಥಮಾಡಿಕೊಳ್ಳಿ.
- ಶೇ.15ರಷ್ಟು ಎಸ್‌ಸಿ, ಶೇ ಶೇ.3ರಷ್ಟು ಎಸ್ ಷ್ಟು ಎಸ್‌ಟಿ ಮೀಸಲು ಅನ್ವಯ ತಕ್ಷಣಕ್ಕೆ ಇಲಾಖೆಗಳ ನೇಮಕ ಅಧಿಸೂಚನೆ ಪ್ರಕಟ
- ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ ಮೀಸಲು ಶೇ.17, ಎಸ್‌ಟಿ ಮೀಸಲು ಶೇ.7ಕ್ಕೆ ಹೆಚ್ಚಳವಾಗಿತ್ತು. ತಾತ್ಕಾಲಿಕವಾಗಿ ಅದರ ಪರಿಗಣನೆ ಇಲ್ಲ.
- ಶೇ.15ರಷ್ಟು ಎಸ್‌ಸಿ ಮೀಸಲಿಗೆ ಒಳಮೀಸಲು ಹಂಚಿಕೆ ಮಾಡಲಾಗುತ್ತದೆ. ಅಧಿಸೂಚನೆಯಲ್ಲಿ ಅದರ ಸ್ಪಷ್ಟತೆ ಸಿಗಲಿದೆ.
- ಶೇ.6ರಷ್ಟು ಹುದ್ದೆ ಎಸ್‌ಸಿ, ಎಸ್‌ಟಿಗೆ ಮೀಸಲು. ಕೋರ್ಟ್ ತೀರ್ಪಿನ ಬಳಿಕವಷ್ಟೇ ಭರ್ತಿ
ಕೊನೆಯ ಮಾತು: 4,656 ಹುದ್ದೆಗಳು ಎಂದರೆ ಇದು ಸಾಮಾನ್ಯ ನೇಮಕಾತಿಯಲ್ಲ. ಸರ್ಕಾರಿ ನೌಕರಿ ಪಡೆಯಲು ಇದೊಂದು ಅದ್ಭುತ ಅವಕಾಶ. ಶೀಘ್ರದಲ್ಲೇ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇರುವುದರಿಂದ, ನಿಮ್ಮ ಸಿದ್ಧತೆಗೆ ಈಗಲೇ ಚಾಲನೆ ನೀಡಿ.
ಈ ನೇಮಕಾತಿಯ ಅಧಿಕೃತ ಅಧಿಸೂಚನೆ, ಆನ್‌ಲೈನ್ ಅರ್ಜಿ ಸಲ್ಲಿಕೆ ದಿನಾಂಕ, ಪಠ್ಯಕ್ರಮ (Syllabus) ಮತ್ತು ಇತರ ಎಲ್ಲಾ ನಿಖರ ಮಾಹಿತಿಗಳಿಗಾಗಿ
www.kpscvaani.com ಗೆ ನಿರಂತರವಾಗಿ ಭೇಟಿ ನೀಡುತ್ತಿರಿ.
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿwww.kpscvaani.com ಗೆ ನಿರಂತರವಾಗಿ ಭೇಟಿ ನೀಡುತ್ತಿರಿ.

Comments