ರಾಜ್ಯದಲ್ಲಿ 15,000 ಶಿಕ್ಷಕರ ಬೃಹತ್ ನೇಮಕಾತಿ: ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ! ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.
Published by: Yallamma G | Date:17 ಜುಲೈ 2026

ಕರಡು ರಾಜ್ಯಪತ್ರ ಪ್ರಕಟ: ಕರ್ನಾಟಕದಲ್ಲಿ ಶೀಘ್ರದಲ್ಲೇ 15,000 ಶಿಕ್ಷಕರ ಬೃಹತ್ ನೇಮಕಾತಿ! ಹುದ್ದೆಗಳ ವಿವರ, ವಯೋಮಿತಿ ಮತ್ತು ವೇಯ್ಟೇಜ್ ನಿಯಮಗಳು ಇಲ್ಲಿದೆ
ಬೆಂಗಳೂರು: ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ವಿಶೇಷ ಶಿಕ್ಷಕರು ಸೇರಿದಂತೆ ಒಟ್ಟು 15,000 ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಕರಡು ರಾಜ್ಯಪತ್ರವನ್ನು (Draft Gazette) ಹೊರಡಿಸಲಾಗಿದೆ.
ಈ ನೇಮಕಾತಿಯು ಕಲ್ಯಾಣ ಕರ್ನಾಟಕ ಹಾಗೂ ಇತರ ಜಿಲ್ಲೆಗಳ ಸಾವಿರಾರು ನಿರುದ್ಯೋಗಿ ಯುವಕ-ಯುವತಿಯರಿಗೆ ಶಿಕ್ಷಕರಾಗುವ ಸುವರ್ಣ ಅವಕಾಶವನ್ನು ಕಲ್ಪಿಸಲಿದೆ. ಈ ಬೃಹತ್ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವಿವರಗಳು, ಶಾಲಾವಾರು ಹುದ್ದೆಗಳ ಹಂಚಿಕೆ, ಹೊಸ ವೇಯ್ಟೇಜ್ ನಿಯಮಗಳು ಮತ್ತು
ವಯೋಮಿತಿಯ ಸಡಿಲಿಕೆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಗಸ್ಟ್ ಮೊದಲ ವಾರದಲ್ಲಿ ಅಧಿಕೃತ ಅಧಿಸೂಚನೆ?
ಪ್ರಸ್ತುತ ಹೊರಡಿಸಲಾಗಿರುವ ಕರಡು ರಾಜ್ಯಪತ್ರಕ್ಕೆ ಸಾರ್ವಜನಿಕರು ಅಥವಾ ಆಕಾಂಕ್ಷಿಗಳು ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಜುಲೈ 29ಕ್ಕೆ ಈ ಆಕ್ಷೇಪಣೆ ಅವಧಿ ಮುಕ್ತಾಯಗೊಳ್ಳಲಿದ್ದು, ತದನಂತರ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಇಲಾಖೆಯ ಮೂಲಗಳ ಪ್ರಕಾರ, ಆಗಸ್ಟ್ ಮೊದಲ ವಾರದಲ್ಲಿ ಶಿಕ್ಷಕರ ನೇಮಕಾತಿಯ ಅಧಿಕೃತ ಅಂತಿಮ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆಯಿದೆ.
ಪ್ರತಿದಿನದ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
ಜಿಲ್ಲಾವಾರು ಹುದ್ದೆಗಳ ಹಂಚಿಕೆ (ಕಲ್ಯಾಣ ಕರ್ನಾಟಕ Vs ಇತರ ಜಿಲ್ಲೆಗಳು)
ಈ ಬಾರಿಯ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಒಟ್ಟು 15,000 ಹುದ್ದೆಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:
.png)
ಅಭ್ಯರ್ಥಿಗಳ ಆಯ್ಕೆಗೆ ಹೊಸ ವೇಯ್ಟೇಜ್ (Weightage) ನಿಯಮಗಳು
ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಅರ್ಹತೆಗೆ ಆದ್ಯತೆ ನೀಡಲು ಸರ್ಕಾರವು ನಿರ್ದಿಷ್ಟ ವೇಯ್ಟೇಜ್ ಸೂತ್ರವನ್ನು ನಿಗದಿಪಡಿಸಿದೆ:
ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ!
ಕೊರೋನಾ ಅಥವಾ ಇತರ ಕಾರಣಗಳಿಂದಾಗಿ ವಯೋಮಿತಿ ಮೀರಿದ ಅಭ್ಯರ್ಥಿಗಳಿಗೆ ನೆರವಾಗಲು ಸರ್ಕಾರ ಈ ಬಾರಿ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಿದೆ. ಇದರನ್ವಯ ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
ಸ್ಪರ್ಧಾತ್ಮಕ ಪರೀಕ್ಷೆಗಳ ಇತ್ತೀಚಿನ ಅಪ್‌ಡೇಟ್‌ಗಳು, ಉಚಿತ ಸ್ಟಡಿ ಮೆಟೀರಿಯಲ್ಸ್ ಮತ್ತು ನೇಮಕಾತಿ ಮಾಹಿತಿಗಾಗಿ ನಿರಂತರವಾಗಿ KPSCVaani ವೆಬ್‌ಸೈಟ್ ಅನ್ನು ವೀಕ್ಷಿಸುತ್ತಿರಿ.

- ಕಲ್ಯಾಣ ಕರ್ನಾಟಕ (K.K) ಜಿಲ್ಲೆಗಳಿಗೆ: 6,905 ಹುದ್ದೆಗಳು
- ಇತರ ಜಿಲ್ಲೆಗಳಿಗೆ: 8,095 ಹುದ್ದೆಗಳು
ಶಾಲಾವಾರು ಹಾಗೂ ವಿಷಯವಾರು ಹುದ್ದೆಗಳ ವಿವರ
ಒಟ್ಟು 15,000 ಹುದ್ದೆಗಳಲ್ಲಿ ಯಾವ ರಂಗಕ್ಕೆ ಎಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ ಎಂಬ ವಿವರ ಇಲ್ಲಿದೆ:
- ಹಿರಿಯ ಪ್ರಾಥಮಿಕ ಶಾಲೆ (GPT) ಶಿಕ್ಷಕರು: 8,500 ಹುದ್ದೆಗಳು
- ಪ್ರೌಢಶಾಲೆ ಶಿಕ್ಷಕರು: 4,500 ಹುದ್ದೆಗಳು
- ಪ್ರಾಥಮಿಕ ಶಾಲೆ (PST) ಶಿಕ್ಷಕರು: 900 ಹುದ್ದೆಗಳು
- ಕಂಪ್ಯೂಟರ್ ಸೈನ್ಸ್ ಶಿಕ್ಷಕರು: 500 ಹುದ್ದೆಗಳು
- ದೈಹಿಕ ಶಿಕ್ಷಣ ಗ್ರೇಡ್-1 ಶಿಕ್ಷಕರು: 450 ಹುದ್ದೆಗಳು
- ದೈಹಿಕ ಶಿಕ್ಷಣ ಗ್ರೇಡ್-2 ಶಿಕ್ಷಕರು: 150 ಹುದ್ದೆಗಳು
.png)
ಅಭ್ಯರ್ಥಿಗಳ ಆಯ್ಕೆಗೆ ಹೊಸ ವೇಯ್ಟೇಜ್ (Weightage) ನಿಯಮಗಳು
ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಅರ್ಹತೆಗೆ ಆದ್ಯತೆ ನೀಡಲು ಸರ್ಕಾರವು ನಿರ್ದಿಷ್ಟ ವೇಯ್ಟೇಜ್ ಸೂತ್ರವನ್ನು ನಿಗದಿಪಡಿಸಿದೆ:
- ಪ್ರಾಥಮಿಕ ಶಾಲೆ ಶಿಕ್ಷಕರು (PST): CET ಅಂಕಗಳಿಗೆ ಶೇ. 70, TET ಅಂಕಗಳಿಗೆ ಶೇ. 20, PUC ಅಂಕಗಳಿಗೆ ಶೇ. 8 ಮತ್ತು ಡಿ.ಎಡ್ (D.Ed) ಅಂಕಗಳಿಗೆ ಶೇ. 2 ರಷ್ಟು ವೇಯ್ಟೇಜ್ ಪರಿಗಣಿಸಲಾಗುತ್ತದೆ.
- ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು (GPT): CET ಅಂಕಗಳಿಗೆ ಶೇ. 85, ಪದವಿ (Degree) ಅಂಕಗಳಿಗೆ ಶೇ. 13 ಮತ್ತು ಬಿ.ಎಡ್ (B.Ed) ಅಂಕಗಳಿಗೆ ಶೇ. 2 ರಷ್ಟು ವೇಯ್ಟೇಜ್ ನೀಡಲಾಗುತ್ತದೆ.
- ಕಂಪ್ಯೂಟರ್ ಸೈನ್ಸ್ ಶಿಕ್ಷಕರು: CET ಪರೀಕ್ಷೆಗೆ ಶೇ. 70 ರಷ್ಟು ವೇಯ್ಟೇಜ್ ಇದ್ದರೆ, ಉಳಿದ ಶೇ. 30 ರಷ್ಟು ಅಂಕಗಳನ್ನು ಅವರು ಪಡೆದ ನಿಗದಿತ ಪದವಿಯ ಅಂಕಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.
ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ!
ಕೊರೋನಾ ಅಥವಾ ಇತರ ಕಾರಣಗಳಿಂದಾಗಿ ವಯೋಮಿತಿ ಮೀರಿದ ಅಭ್ಯರ್ಥಿಗಳಿಗೆ ನೆರವಾಗಲು ಸರ್ಕಾರ ಈ ಬಾರಿ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಿದೆ. ಇದರನ್ವಯ ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
- ಸಾಮಾನ್ಯ ವರ್ಗ (General Merit): 38 ವರ್ಷಗಳು
- ಒಬಿಸಿ (OBC - 2A/2B/3A/3B): 41 ವರ್ಷಗಳು
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರು (SC/ST/PH): 43 ವರ್ಷಗಳು

Comments