Job Description: ➤ ಜಾಗತಿಕ ಆರ್ಥಿಕತೆಯ ಬೆನ್ನೆಲುಬು ಎಂದು ಕರೆಯಲ್ಪಡುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಅಪಾರ ಕೊಡುಗೆಯನ್ನು ಗುರುತಿಸಲು ಪ್ರತಿ ವರ್ಷ ಜೂನ್ 27 ರಂದು ಜಾಗತಿಕವಾಗಿ ‘ವಿಶ್ವ ಎಂಎಸ್‌ಎಂಇ ದಿನ’ (World MSME Day) ವನ್ನು ಆಚರಿಸಲಾಗುತ್ತದೆ. ಉದ್ಯೋಗ ಸೃಷ್ಟಿ, ನಾವೀನ್ಯತೆ ಹಾಗೂ ಸುಸ್ಥಿರ ಅಭಿವೃದ್ಧಿಯಲ್ಲಿ ಎಂಎಸ್‌ಎಂಇಗಳ ಪಾತ್ರದ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.➤ ವಿಶ್ವ ಎಂಎಸ್‌ಎಂಇ ದಿನ 2026 ರ ಥೀಮ್ (Theme): ನಾವೀನ್ಯತೆ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿಯ ಮೂಲಕ ಎಂಎಸ್‌ಎಂಇಗಳ ಸಬಲೀಕರಣ (Empowering MSMEs through Innovation and Sustainable Industrial Development )➤ ವಿಶ್ವಸಂಸ್ಥೆಯ ಮಹಾಸಭೆಯು (UNGA) 6 ಏಪ್ರಿಲ್ 2017 ರಂದು ತನ್ನ 71 ನೇ ಅಧಿವೇಶನದಲ್ಲಿ ನಿರ್ಣಯ (A/RES/71/279) ಅಂಗೀಕರಿಸುವ ಮೂಲಕ ಪ್ರತಿ ವರ್ಷ ಜೂನ್ 27 ಅನ್ನು ‘ವಿಶ್ವ ಎಂಎಸ್‌ಎಂಇ ದಿನ’ ಎಂದು ಘೋಷಿಸಿತು. ಸುಸ್ಥಿರ ಅಭಿವೃದ್ಧಿಗಾಗಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಇದರ ಪ್ರಮುಖ ಗುರಿಯಾಗಿದೆ.➤ ಎಂಎಸ್‌ಎಂಇಗಳು ಏಕೆ ಮುಖ್ಯ? ಉದ್ಯಮಗಳ ಪ್ರಮಾಣ: ಜಗತ್ತಿನ ಒಟ್ಟು ಉದ್ಯಮಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಭಾಗವನ್ನು ಎಂಎಸ್‌ಎಂಇಗಳೇ ಹೊಂದಿವೆ. ಉದ್ಯೋಗ ಸೃಷ್ಟಿ: ಇವು ಜಾಗತಿಕವಾಗಿ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು (ವಿಶೇಷವಾಗಿ ಮಹಿಳೆಯರು, ಯುವಕರು ಮತ್ತು ದುರ್ಬಲ ವರ್ಗದವರಿಗೆ) ಸೃಷ್ಟಿಸುತ್ತವೆ. ಜಿಡಿಪಿ ಕೊಡುಗೆ: ಅಭಿವೃದ್ಧಿಶೀಲ ರಾಷ್ಟ್ರಗಳ ಒಟ್ಟು ಆಂತರಿಕ ಉತ್ಪನ್ನಕ್ಕೆ (GDP) ಮತ್ತು ಆರ್ಥಿಕ ಬೆಳವಣಿಗೆಗೆ ಇವು ಸಿಂಹಪಾಲು ಕೊಡುಗೆ ನೀಡುತ್ತವೆ. ➤ ಎಂಎಸ್‌ಎಂಇಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳು: ಹಣಕಾಸಿನ ಕೊರತೆ: ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸುಲಭವಾಗಿ ಸಾಲ ಸೌಲಭ್ಯ ಸಿಗದಿರುವುದು. ಡಿಜಿಟಲ್ ಕಂದಕ (Digital Divide): ಗ್ರಾಮೀಣ ಭಾಗದ ಉದ್ಯಮಗಳಿಗೆ ಆಧುನಿಕ ತಂತ್ರಜ್ಞಾನ ಮತ್ತು ಇ-ಕಾಮರ್ಸ್ ವೇದಿಕೆಗಳ ಅರಿವು ಕಡಿಮೆ ಇರುವುದು. ಮೂಲಸೌಕರ್ಯ ಕೊರತೆ: ಸಾಗಣೆ, ವಿದ್ಯುತ್ ಮತ್ತು ದಾಸ್ತಾನು ಮಳಿಗೆಗಳ ಕೊರತೆ. ಅಸಂಘಟಿತ ವಲಯ: ಹೆಚ್ಚಿನ ಸಣ್ಣ ಉದ್ಯಮಗಳು ಇಂದಿಗೂ ಅನೌಪಚಾರಿಕ (Informal) ವಲಯದಲ್ಲೇ ಕಾರ್ಯನಿರ್ವಹಿಸುತ್ತಿರುವುದು. ➤ ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) ಮತ್ತು MSME: ಎಂಎಸ್‌ಎಂಇ ವಲಯದ ಯಶಸ್ಸು ವಿಶ್ವಸಂಸ್ಥೆಯ ಕೆಳಗಿನ ಪ್ರಮುಖ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಸಾಧಿಸಲು ನೇರವಾಗಿ ಸಹಾಯ ಮಾಡುತ್ತದೆ: SDG 1: ಬಡತನ ನಿರ್ಮೂಲನೆ (No Poverty) SDG 5: ಲಿಂಗ ಸಮಾನತೆ (Gender Equality) SDG 8: ಯೋಗ್ಯ ಕೆಲಸ ಮತ್ತು ಆರ್ಥಿಕ ಬೆಳವಣಿಗೆ (Decent Work and Economic Growth) SDG 9: ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯ (Industry, Innovation and Infrastructure) SDG 10: ಅಸಮಾನತೆಯ ಕಡಿತ (Reduced Inequalities)