* ಭಾರತದ ವಿರುದ್ಧ ಶತ್ರು ರಾಷ್ಟ್ರಗಳು ನಡೆಸುವ ವೈಮಾನಿಕ ದಾಳಿಯನ್ನು ಪತ್ತೆಹಚ್ಚಿ ಹಿಮ್ಮೆಟ್ಟಿಸುವ ರಷ್ಯಾದ ಅತ್ಯಾಧುನಿಕ ವೊರೊನೆಜ್ ರಾಡರ್ ವ್ಯವಸ್ಥೆಯು ಶೀಘ್ರವೇ ಕರ್ನಾಟಕದ ಚಿತ್ರದುರ್ಗದಲ್ಲಿ ಸ್ಥಾಪನೆಯಾಗಲಿದೆ.* ವೊರೊನೆಜ್ ಬ್ಯಾಲಿಸ್ಟಿಕ್ ಕ್ಷಿಪಣಿ ಎಚ್ಚರಿಕೆ ರಾಡಾರ್ ಅನ್ನು ಸ್ಥಾಪಿಸುವುದನ್ನು ಒಳಗೊಂಡಿರುವ ರಕ್ಷಣಾ ಒಪ್ಪಂದವನ್ನು ಭಾರತ ಮತ್ತು ರಷ್ಯಾ ಅಂತಿಮಗೊಳಿಸುತ್ತಿವೆ.* ಈ ಸಂಬಂಧ ರಷ್ಯಾ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ನಿಯೋಗ, ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ರನ್ನು ಭೇಟಿ ಮಾಡಿ ರಕ್ಷಣೆ ಸಹಭಾಗಿತ್ವಕ್ಕೆ ಮಾತುಕತೆ ನಡೆಸಿದ್ದಾರೆ.* ರಾಡಾರ್ ಅಂದಾಜು ಒಟ್ಟು 4 ಶತಕೋಟಿ ಡಾಲರ್ (34 ಸಾವಿರ ಕೋಟಿ ರೂ.) ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. US$ 4 ಶತಕೋಟಿ ಮೌಲ್ಯದ್ದಾಗಿದೆ, ಅಲ್ಮಾಜ್-ಆಂಟೆ ಅಭಿವೃದ್ಧಿಪಡಿಸಿದ ಈ ವ್ಯವಸ್ಥೆಯು ಕ್ಷಿಪಣಿ ಪತ್ತೆ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.* ಭಾರತದ ವಾಯು ರಕ್ಷಣಾ ವ್ಯವಸ್ಥೆಯನ್ನು ಆಧುನೀಕರಿಸುವ ಮತ್ತು ಏಷ್ಯಾ ಮತ್ತು ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಕಣ್ಗಾವಲು ಮತ್ತು ಬೆದರಿಕೆ ಪತ್ತೆಹಚ್ಚುವಿಕೆಯನ್ನು ಸಕ್ರಿಯಗೊಳಿಸುವ ಯೋಜನೆಯಾಗಿದೆ.* ಅಲ್ಮಾಜ್-ಆಂಟೆ ಕಾರ್ಪೊರೇಷನ್ ಅಭಿವೃದ್ಧಿಪಡಿಸಿದ ವೊರೊನೆಜ್ ರೇಡಾರ್ ವ್ಯವಸ್ಥೆಯು ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಯುದ್ಧ ವಿಮಾನಗಳು ಮತ್ತು ಖಂಡಾಂತರ ICBM ಗಳಂತಹ ವಸ್ತುಗಳನ್ನು ಒಟ್ಟು 10,000 ಕಿಮೀ ವ್ಯಾಪ್ತಿಯಲ್ಲಿ 8,000 ಕಿ.ಮೀ ಲಂಬ ಶ್ರೇಣಿ ಮತ್ತು 6,000 ಕಿ.ಮೀ. ಸಮತಲ ಶ್ರೇಣಿಯಲ್ಲಿ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ.* ಭಾರತವು ಕನಿಷ್ಠ 60 ಪ್ರತಿಶತದಷ್ಟು ರಾಡಾರ್ ವ್ಯವಸ್ಥೆಯನ್ನು ಸ್ಥಳೀಯವಾಗಿ ತಯಾರಿಸಲು ಯೋಜಿಸಿದೆ. ಸ್ಟಾರ್ಟಪ್ಗಳು ಸೇರಿದಂತೆ 50 ಕ್ಕೂ ಹೆಚ್ಚು ಭಾರತೀಯ ಪಾಲುದಾರರು ಭಾಗವಹಿಸಲಿದ್ದಾರೆ.*ಯೋಜನೆಯನ್ನು DRDO ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (LRDE) ನಿರ್ವಹಿಸುತ್ತದೆ . ಈ ಉಪಕ್ರಮವು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.