* ಗೋಲಾನ್ ಹೈಟ್ಸ್ನಲ್ಲಿ ಮೃತರಾದ ಭಾರತದ ಬ್ರಿಗೇಡಿಯರ್ ಜನರಲ್ ಅಮಿತಾಭ್ ಝಾ ಅವರಿಗೆ ವಿಶ್ವಸಂಸ್ಥೆಯು ಗೌರವ ನಮನ ಸಲ್ಲಿಸಿದೆ. 'ಶಾಂತಿಪಾಲನೆಯ ಕರ್ತವ್ಯದಲ್ಲಿ ತೋರಿದ ಬದ್ಧತೆ ಮತ್ತು ನಾಯಕತ್ವಕ್ಕಾಗಿ ಝಾ ಅವರನ್ನು ಸದಾ ನೆನಪಿಸಿಕೊಳ್ಳಲಾಗುವುದು' ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಅವರು ತಿಳಿಸಿದ್ದಾರೆ.* ವಿಶ್ವಸಂಸ್ಥೆಯ ಡಿಸ್ ಎಂಗೇಜ್ಮೆಂಟ್ ಅಬ್ಸರ್ವರ್ ಅಮಿತಾಭ್ ಫೋರ್ಸ್ (ಯುಎನ್ಡಿಒಎಫ್) ಕಾರ್ಯನಿರ್ವಹಣಾ ಪಡೆಯ ಕಮಾಂಡರ್ ಆಗಿದ್ದ ಝಾ ಅವರು ನಿಧನರಾದರು.* ಅಮಿತಾಭ್ ಝಾ ಅವರು ಇತ್ತೀಚೆಗೆ ಸಿರಿಯಾದಲ್ಲಿ [ಬಷರ್ ಅಲ್-] ಅಸ್ಸಾದ್ ಸರ್ಕಾರದ ಪತನದ ನಂತರ ಸಂಕೀರ್ಣ ಸಂದರ್ಭಗಳಲ್ಲಿ UNDOF ನ ಕಾರ್ಯನಿರ್ವಾಹಕ ಪಡೆ ಕಮಾಂಡರ್ ಆಗಿ ಸೇವೆ ಸಲ್ಲಿಸಿದರು" ಎಂದು ಅವರು ಹೇಳಿದರು.* UNDOF ವೆಬ್ಸೈಟ್ ಪ್ರಕಾರ ಬ್ರಿಗೇಡಿಯರ್ ಝಾ ಅವರು ಏಪ್ರಿಲ್ 14, 2023 ರಂದು UNDOF ಮಿಷನ್ಗೆ ಉಪ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಪದಾತಿ ದಳದ ಅಧಿಕಾರಿಯಾಗಿದ್ದರು ಮತ್ತು UNDOF ಗೆ ನಿಯೋಜನೆಗೊಳ್ಳುವ ಮೊದಲು ಭಾರತದ ಗ್ಲೇಸಿಯೇಟೆಡ್ ಮೌಂಟೇನಸ್ ಟೆರೇನ್ನಲ್ಲಿ ಬ್ರಿಗೇಡ್ಗೆ ಕಮಾಂಡಿಂಗ್ ಆಫೀಸರ್ ಆಗಿ ಮತ್ತು ವಿಶೇಷ ಘಟಕಕ್ಕೆ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು.