* ಸವಿಶ್ವಸಂಸ್ಥೆಯು ಭಾರತದ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಅವರನ್ನು ಆಂತರಿಕ ನ್ಯಾಯದಾನ ಮಂಡಳಿಯ (ಇಂಟರ್ನಲ್ ಜಸ್ಟೀಸ್ ಕೌನ್ಸಿಲ್ನ) (ಐಜೆಸಿ) ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ* ನ್ಯಾ. ಲೋಕೂರ್ ಅವರ ಅವಧಿಯು ನವೆಂಬರ್ 12, 2028ರವರೆಗೆ ಇರಲಿದೆ. 2012ರಲ್ಲಿ ಸುಪ್ರಿಂ ಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. * 2018ರಲ್ಲಿ ಮದನ್ ಅವರು ನಿವೃತ್ತಿಯಾದರು. ಅವರ ನಿವೃತ್ತಿಯ ನಂತರ, 2019ರಲ್ಲಿ ಫಿಜಿ ದೇಶದ ಸುಪ್ರೀಂ ಕೋರ್ಟ್ನ ಅನಿವಾಸಿ ಸಮಿತಿಯ ನ್ಯಾಯಮೂರ್ತಿಯಾಗಿಯೂ ನೇಮಕವಾಗಿದ್ದರು. ಬೇರೆ ದೇಶದ ಅತ್ಯುನ್ನತ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲ ವ್ಯಕ್ತಿ ಮದನ್ ಅವರಾಗಿದ್ದಾರೆ* 1953ರಲ್ಲಿ ಜನಿಸಿದ ನ್ಯಾ.ಲೋಕೂರ್ ಅವರು 2012,ಜೂ.4ರಿಂದ 2018,ಡಿ.30ರವರೆಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು.