* ಪ್ರತಿಷ್ಠಿತ ಫೋರ್ಬ್ಸ್ ಮ್ಯಾಗಜಿನ್ (Forbes Magazine) ಇತ್ತೀಚೆಗೆ ಬಿಡುಗಡೆ ಮಾಡಿದ 2025ರ ಸಾಲಿನ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿ (The World's 100 Most Powerful Women 2025) ಯಲ್ಲಿ ಭಾರತೀಯ ಮಹಿಳೆಯರು ತಮ್ಮ ಅಂತರರಾಷ್ಟ್ರೀಯ ಪ್ರಭಾವವನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ.
* ಈ ಪಟ್ಟಿಯಲ್ಲಿ ಭಾರತದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ದೇಶದ ಮಟ್ಟದಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಭಾರತದ ಆರ್ಥಿಕ ನಿರ್ಧಾರಗಳ ಮೇಲೆ ಅಗಾಧ ಪ್ರಭಾವ ಬೀರಿರುವ ಹಿನ್ನೆಲೆಯಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
* ನಿರಂತರ ಆರ್ಥಿಕ ಸುಧಾರಣೆಗಳು, ಬಜೆಟ್ ನಿರ್ವಹಣೆ, ಹಣಕಾಸು ನೀತಿಗಳ ಸ್ಥಿರತೆ ಹಾಗೂ ಜಾಗತಿಕ ಆರ್ಥಿಕ ಸವಾಲುಗಳ ನಡುವೆ ಭಾರತದ ಆರ್ಥಿಕತೆಯನ್ನು ಸಮರ್ಥವಾಗಿ ಮುನ್ನಡೆಸಿದ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಈ ಪಟ್ಟಿಯಲ್ಲಿ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಭಾರತದ ಇತರ ಪ್ರಮುಖ ಮಹಿಳೆಯರ ಸ್ಥಾನಮಾನ
- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜಾಗತಿಕ ಸ್ಥಾನ (Global Rank) ವನ್ನು ಇನ್ನು ನಿರ್ದಿಷ್ಟಪಡಿಸಲಾಗಿಲ್ಲ, ಆದರೆ ಭಾರತದ ಮಟ್ಟದಲ್ಲಿ ಅಗ್ರಸ್ಥಾನ ಮತ್ತು ಸತತವಾಗಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
- ಎಚ್‌ಸಿಎಲ್ ಟೆಕ್ನಾಲಜೀಸ್ ಸಿಇಒ ರೋಶನಿ ನಾಡಾರ್ ಮಲ್ಹೋತ್ರಾ ಅವರು 76ನೇ ಜಾಗತಿಕ ಸ್ಥಾನಪಡೆದ ಭಾರತದ ಪ್ರಮುಖ ಟೆಕ್ ಕಂಪನಿಯ ಮುಖ್ಯಸ್ಥೆ.
- ಬೆಂಗಳೂರು ಮೂಲದ ಜೈವಿಕ ತಂತ್ರಜ್ಞಾನ (Biotech) ಕ್ಷೇತ್ರದ ದಿಗ್ಗಜರು ಹಾಗೂ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ 83ನೇ ಸ್ಥಾನವನ್ನು ಪಡೆದಿದ್ದಾರೆ.
ಇವರು ತಂತ್ರಜ್ಞಾನ ಮತ್ತು ಜೈವ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತದ ಜಾಗತಿಕ ಹಾಜರಾತಿಯನ್ನು ಬಲಪಡಿಸಿರುವ ಮಹಿಳಾ ಉದ್ಯಮ ನಾಯಕಿಯರಾಗಿದ್ದಾರೆ.
* ಜಾಗತಿಕ ನಾಯಕತ್ವ: ಉರ್ಸುಲಾ ವಾನ್ ಡೆರ್ ಲೇನ್- ಜಾಗತಿಕವಾಗಿ ಈ ಪಟ್ಟಿಯಲ್ಲಿ ಯುರೋಪಿಯನ್ ಕಮಿಷನ್‌ನ (European Commission) ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇನ್ (Ursula von der Leyen) ಅವರು ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಯುರೋಪಿನ ರಾಜಕೀಯ ಮತ್ತು ಆರ್ಥಿಕ ನೀತಿಗಳ ಮೇಲೆ ಅವರ ಪ್ರಭಾವವನ್ನು ಪರಿಗಣಿಸಿ ಅವರಿಗೆ ಮೊದಲ ಸ್ಥಾನ ನೀಡಲಾಗಿದೆ.
ಸೋಮವಾರ, 15 ಡಿಸೆಂಬರ್ 2025
12:25 ಅಪರಾಹ್ನ
Daily PDF
ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ಗೆ ಅಗ್ರಸ್ಥಾನ!
Authored by:
Akshata Halli