Job Description: * ವಿಶ್ವ ಪತ್ರಿಕಾ ಸೂಚ್ಯಂಕದಲ್ಲಿ ಭಾರತವು ಕಳೆದ ವರ್ಷಗಳಿಗಿಂತ ಎಂಟು ಸ್ಥಾನಗಳ ಏರಿಕೆ ಕಂಡಿದ್ದು, 151ನೇ ಸ್ಥಾನದಲ್ಲಿದೆ ಎಂದು 'ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್' ಸಂಶೋಧನಾ ವರದಿ ತಿಳಿಸಿದೆ.* 2025ರಲ್ಲಿ ಪತ್ರಕರ್ತರು ಮತ್ತು ಸುದ್ದಿಸಂಸ್ಥೆಗಳ ಮೇಲೆ ಹೆಚ್ಚುತ್ತಿರುವ ಆರ್ಥಿಕ ಒತ್ತಡಗಳಿಂದ ಜಾಗತಿಕ ಪತ್ರಿಕಾ ಸ್ವಾತಂತ್ರ್ಯಕ್ಕೆ ಬೆದರಿಕೆ ಇದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ಸ್ವಾತಂತ್ರ್ಯ ಜಾಗತಿಕವಾಗಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ.* ಅಧ್ಯಯನವು 180 ದೇಶಗಳನ್ನು ಒಳಗೊಂಡಿತ್ತು. ಈ ಪೈಕಿ 160 ದೇಶಗಳಲ್ಲಿನ ಮಾಧ್ಯಮ ಸಂಸ್ಥೆಗಳು ಆರ್ಥಿಕ ಅಸ್ಥಿರತೆಯನ್ನು ಎದುರಿಸುತ್ತಿವೆ. ವಿಶೇಷವಾಗಿ ಅಮೆರಿಕ (57ನೇ ಸ್ಥಾನ, ಕಳೆದ ವರ್ಷಕ್ಕಿಂತ ಎರಡು ಸ್ಥಾನಗಳ ಕುಸಿತ), ಟುನೀಶಿಯಾ (121ನೇ ಸ್ಥಾನ, 11 ಸ್ಥಾನಗಳ ಕುಸಿತ), ಅರ್ಜೆಂಟೀನಾ (87ನೇ ಸ್ಥಾನ, 21 ಸ್ಥಾನಗಳ ಕುಸಿತ) ಈ ರಾಷ್ಟ್ರಗಳಲ್ಲಿನ ರಾಜಕೀಯ ಅಸ್ಥಿರತೆಯು ಮಾಧ್ಯಮ ಆರ್ಥಿಕತೆಯನ್ನು ಪಾತಾಳಕ್ಕಿಳಿಸಿವೆ. ಇವುಗಳ ಜತೆಗೆ ಯುದ್ಧಪೀಡಿತ ರಾಷ್ಟ್ರಗಳಾದ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಮಾಧ್ಯಮಗಳು ಗಂಭೀರವಾದ ಆರ್ಥಿಕ ಸಮಸ್ಯೆ ಎದುರಿಸುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.* ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 2023ರಲ್ಲಿ 161ನೇ ಸ್ಥಾನದಲ್ಲಿದ್ದ ಭಾರತವು 2024ರಲ್ಲಿ 159ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ 151ನೇ ಸ್ಥಾನಕ್ಕೆ ಇಳಿದಿದೆ. ಆದರೂ, ತನ್ನ ನೆರೆಯ ರಾಷ್ಟ್ರಗಳಾದ ನೇಪಾಳ (90ನೇ ಸ್ಥಾನ), ಮಾಲ್ಮೀಮ್ಸ್ (104ನೇ ಸ್ಥಾನ), ಶ್ರೀಲಂಕಾ (139ನೇ ಸ್ಥಾನ)ಕ್ಕಿಂತ ಕಡಿಮೆಯಿದೆ. ಆದರೆ, ಪಾಕಿಸ್ತಾನ (158ನೇ ಸ್ಥಾನ), ಚೀನಾಕ್ಕಿಂತ (178ನೇ ಸ್ಥಾನ) ಉತ್ತಮವಾಗಿವೆ.* ವಿಶ್ವ ಪತ್ರಿಕಾ ಸೂಚ್ಯಂಕದ ಅಗ್ರ ಹತ್ತು ರಾಷ್ಟ್ರಗಳು: ನಾರ್ವೆ, ಈಸ್ಟೋನಿಯಾ, ನೆದರ್ಲೆಂಡ್, ಸ್ವೀಡನ್, ಫಿನ್ಸೆಂಡ್, ಡೆನ್ಮಾರ್ಕ್, ಐರ್ಲೆಂಡ್, ಪೋರ್ಚುಗಲ್, ಸ್ವಿಟ್ಟಲೆಂಡ್, ಚೆಹಿಯಾ* ವಿಶ್ವ ಪತ್ರಿಕಾ ಸೂಚ್ಯಂಕದ ಕಳಪೆ ಹತ್ತು ರಾಷ್ಟ್ರಗಳು: ಎರಿಟ್ರಿಯಾ, ಉತ್ತರ ಕೊರಿಯಾ, ಚೀನಾ, ಸಿರಿಯಾ, ಇರಾನ್, ಅಫ್ಘಾನಿಸ್ತಾನ, ಟರ್ಕ್ ಮೆನಿಸ್ತಾನ್, ವಿಯೆಟ್ನಾಂ, ನಿಕಾರಾಗುವಾ, ರಷ್ಯಾ.