* ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ, ಅವಳಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಧರಿಸಿದ್ದ ಟೀ ಶರ್ಟ್ ಸ್ಪರ್ಧಾತ್ಮಕ ಕಲಾಕೃತಿಗಳ ವಿಶ್ವ ಅಥ್ಲೆಟಿಕ್ಸ್ ಪಾರಂಪರಿಕ ಸಂಗ್ರಹಾಲಯದಲ್ಲಿ(World Athletic Heritage Collection) ಪ್ರದರ್ಶನಕ್ಕಿರಿಸಲಾಗಿದೆ.* ಈ ವಿಶೇಷ ಗೌರವಕ್ಕೆ ಪಾತ್ರರಾದ ವಿಶ್ವದ 23 ಅಥ್ಲೀಟ್ಗಳಲ್ಲಿ ನೀರಜ್ ಒಬ್ಬರೆನಿಸಿದ್ದಾರೆ.* 2021ರ ಟೋಕಿಯೋ ಗೇಮ್ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್, ಹಾಲಿ ವರ್ಷ ಪ್ಯಾರಿಸ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಧರಿಸಿದ್ದ ಟೀ ಶರ್ಟ್ ಅನ್ನು MOWಗೆ ಕೊಡುಗೆಯಾಗಿ ನೀಡಿದ್ದರು.* ಎಂಒಡಬ್ಲ್ಯುಎ ಮ್ಯೂಸಿಯಂನಲ್ಲಿ ಇದುವರೆಗೆ ನೀರಜ್ ಸೇರಿ ಒಟ್ಟು 23 ಅಥ್ಲೆಟ್ಗಳ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಈ ವರ್ಷ ಚೋಪ್ರಾ ಜೊತೆ ಉಕ್ರೇನ್ನ ಅಲ್ಲೀಟ್ ಯಾರೋಸ್ಲಾವಾ ಮಹುಚಿಖ್ ಹಾಗೂ ಡೊಮಿನಿಕಾದ ಥಿಯಾ ಲಾಂಡ್ ಕೂಡಾ ತಮ್ಮ ವಸ್ತುಗಳನ್ನು ಮ್ಯೂಸಿಯಂಗೆ ಕೊಟ್ಟಿದ್ದಾರೆ.* ವಿಶ್ವ ಅಥ್ಲೆಟಿಕ್ಸ್ ಹೆರಿಟೇಜ್ನ ಆನ್ಲೈನ್ 3D ಪ್ಲಾಟ್ಫಾರ್ಮ್ನಲ್ಲಿ 23 ಆಟಗಾರರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಇದು 3D ಪ್ಲಾಟ್ ಫಾರ್ಮ್ನಲ್ಲಿರದೆ.