* ರಾಜ್ಯದಲ್ಲೇ ಅತಿ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ಉತ್ತರ ಕನ್ನಡದಲ್ಲಿ ಸಂಭವಿಸುತ್ತಿವೆ ಎಂದು ವರದಿಯಾಗಿವೆ.* ಕಳೆದ ಎರಡು ವರ್ಷಗಳಲ್ಲಿ 2,598 ಕಡೆಗಳಲ್ಲಿ ಕಾಡಿಗೆ ಬೆಂಕಿ ತಗುಲಿದ ಘಟನೆಗಳು ನಡೆದಿವೆ ಎಂದು ಅರಣ್ಯ ಮತ್ತು ಕೇಂದ್ರ ಪರಿಸರ ಹವಾಮಾನ ಬದಲಾವಣೆ ಸಚಿವಾಲಯವು ಇತ್ತೀಚಿಗೆ ಬಿಡುಗಡೆ ಮಾಡಿರುವ ಭಾರತೀಯ ಅರಣ್ಯ ವರದಿ (ಐಎಸ್ಎಫ್) ತಿಳಿಸಿದೆ.* ದೇಶದ ವಿವಿಧೆಡೆ ನಡೆದ ಕಾಳಿಚ್ಚು ಘಟನೆಗಳ ಅಂಕಿ- ಅಂಶ ಪ್ರಕಟಿಸಿರುವ ಐಎಸ್ಎಫ್, 2022-23ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 2,162 ಮತ್ತು 2023-24 ಸಾಲಿನಲ್ಲಿ 436 ಕಾಳ್ಳಿಚ್ಚು ಪ್ರಕರಣಗಳು ವರದಿಯಾಗಿರುವುದಾಗಿ ಉಲ್ಲೇಖಿಸಿದೆ.* ಜನವರಿಯಿಂದ ಮೇ ತಿಂಗಳ ಅವಧಿಯಲ್ಲಿ ಕಾಡ್ಗಿಚ್ಚು ಘಟನೆಗಳು ಸಂಭವಿಸುತ್ತಿವೆ. ಎರಡು ವರ್ಷಗಳಲ್ಲಿ ಕಾಡ್ಗಿಚ್ಚಿನಿಂದ ನೂರಾರು ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಹಾನಿಯುಂಟಾಗಿದೆ.* 2023ರಲ್ಲಿ ತೀವು ಬರಗಾಲದ ಸ್ಥಿತಿ ಇದ್ದ ಕಾರಣ ಹೆಚ್ಚು ಬೆಂಕಿ ಅವಘಡ ಸಂಭವಿಸಿದೆ. ರಾಜ್ಯದಲ್ಲಿ ಈ ವೇಳೆ 14 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ ಕೆನರಾ ಅರಣ್ಯ ಪ್ರದೇಶದಲ್ಲಿ 2 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಸಂಭವಿಸಿವೆ.* ಅರೆಮಲೆನಾಡು ಪ್ರದೇಶಗಳಾಗಿರುವ ಹಳಿಯಾಳ, ಮುಂಡಗೋಡ, ಶಿರದಿ ಆಲೂಕಿನ ಗಡಿ ಭಾಗಗಳಲ್ಲಿ ಕುರುಚಲು ಅರಣ್ಯಗಳಿಗೆ ಬೆಂಕಿ ಘಟನೆ ಹಾಗೂ ಧಾರವಾಡ, ಹಾವೇರಿ ಜಿಲ್ಲೆಯಲ್ಲಿ ಕಾಡಿಚ್ಚಿನ ಘಟನೆ ಹೆಚ್ಚಿದ್ದರಿಂದ ಪರಿಣಾಮ ಜಿಲ್ಲೆಯ ಮೇಲು ಬೀರಿದೆ.