* ಶಿಕ್ಷಣ, ಆರ್ಥಿಕ ಕ್ರೋಢೀಕರಣ ಸಹಿತ ವಿವಿಧ ವಿಷಯ ಗಳಲ್ಲಿನ ವಿಶೇಷ ಸಾಧನೆಗಾಗಿ ಕೇಂದ್ರ ಸರಕಾರದ ಪಂಚಾಯತ್‌ರಾಜ್ ಇಲಾಖೆಯ ರಾಷ್ಟ್ರೀಯ ಪುರಸ್ಕಾರಕ್ಕೆ ಉಡುಪಿ ಜಿಲ್ಲಾ ಪಂಚಾಯತ್ ಆಯ್ಕೆಯಾಗಿದೆ.
* ಡಿಸೆಂಬರ್ 11ರಂದು ದಿಲ್ಲಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್ ಅವರು 2 ಕೋಟಿ ನಗದು ಬಹುಮಾನ ಪ್ರಶಸ್ತಿಯನ್ನು ಸ್ವೀಕರಿಸುವರು.ಈ ಹಣವನ್ನು ಯಾವ ಉದ್ದೇಶಕ್ಕೆ ಬಳಸಬೇಕು ಎಂಬುದರ ಮಾರ್ಗ ಸೂಚಿಯನ್ನು ಇಲಾಖೆ ನೀಡಲಿದೆ. ಈ ಮೂಲಕ ಉಡುಪಿಯು ದೇಶದ ಸರ್ವೋತ್ತಮ ಜಿ.ಪಂ. ಹೆಗ್ಗಳಿಕೆಗೆ ಪಾತ್ರವಾಗಿದೆ.
* ಉಡುಪಿಯು 155 ಗ್ರಾಮ ಪಂಚಾಯತ್ ಗಳನ್ನೂ ಹೊಂದಿದ್ದು, ಪ್ರತಿ ಸೋಮವಾರ ಜಿಪಂ ಸಿಇಒ ಗ್ರಾ.ಪಂ. ಗಳ ನೀರು ಪೂರೈಕೆ ಸಹಿತ ವಿವಿಧ ಕಾರ್ಯಯೋಜನೆ ಅನುಷ್ಠಾನ ಏಜೆನ್ಸಿಗಳೊಂದಿಗೆ ಪ್ರಗತಿ ಪರಿಶೀಲಿಸುತ್ತಿದ್ದರು. ಬಳಿಕ ಸಮಸ್ಯೆಗಳ ಪರಿಹಾರಕ್ಕೆ ತಿಂಗಳಿಗೆ 2 ಬಾರಿ ಜಿಲ್ಲಾಧಿಕಾರಿಗಳ ಜೊತೆ ಸಭೆ, ಇಲಾಖೆಗಳ ಜೊತೆ ಸಮನ್ವಯ, ಅಭಿವೃದ್ಧಿಗಾಗಿ ಕಳೆದ ವರ್ಷದ ಸೂಚ್ಯಂಕದ ಆಧಾರದಲ್ಲಿ ಯೋಜನೆ ರೂಪಿಸಿ ಅನುಷ್ಠಾನ,ವಾರ್ಡ್ ಸಭೆ, ಗ್ರಾಮ ಸಭೆ, ಜಮಾಬಂದಿಗೆ ಒತ್ತು, ಶಾಲಾಭಿವೃದ್ಧಿಗೆ ಪ್ರತ್ಯೇಕ ಸಮಿತಿ ರಚನೆ, ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನ ಗುಣಮಟ್ಟ ಪರಿಶೀಲನೆ, ಶಿಶು, ಗರ್ಭಿಣಿ ಮರಣ ಸಂಭವಿಸ ದಂತೆ ನಿಗಾ, ಅಪೌಷ್ಟಿಕತೆ ನಿವಾರಣೆ, ಸಾಂಕ್ರಾಮಿಕ ರೋಗಗಳ ಸಮರ್ಥ ನಿರ್ವಹಣೆ ಇತ್ಯಾದಿ ಕ್ರಮಗಳಿಗೆ ಈ ಪ್ರಶಸ್ತಿ ಸಂದಿದೆ.
* ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿ ಶೇ.90ಕ್ಕೂ ಜಾಸ್ತಿ ತೆರಿಗೆ ವಸೂಲು, ಆನ್‌ಲೈನ್ ತೆರಿಗೆ ಪಾವತಿಗೆ ಕ್ರಮ, ತ್ಯಾಜ್ಯ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿ, ಗ್ರಾಮೀಣ ಭಾಗದಲ್ಲಿ ಎಂಆರ್‌ಎಫ್ ಘಟಕ ಸ್ಥಾಪನೆ, ಆನ್‌ಲೈನ್ ಮೂಲಕ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ಕೋಚಿಂಗ್ ಮೂಲಕ ಎಸೆಸೆಲ್ಸಿ, ಪಿಯುಸಿಯಲ್ಲಿ ಅಗ್ರಸ್ಥಾನ ಪಡೆದದ್ದು, ಸಂಜೀವಿನಿ ಸಂಘಗಳ ಮೂಲಕ ಹಡಿಲು ಭೂಮಿ ಕೃಷಿ, ಇತ್ಯಾದಿ ಕ್ರಮಗಳಿಗೆ ನಾನಾಜಿ ದೇಶ್‌ಮುಖ್ ಸರ್ವೋತ್ತಮ ಪಂಚಾಯತ್ ಪ್ರಶಸ್ತಿಗೆ 3ನೇ ಅತ್ಯುತ್ತಮ ಜಿಲ್ಲೆಯಾಗಿ ಆಯ್ಕೆಯಾಗಿದೆ ಎಂದು ಜಿ.ಪಂ. ಸಹಾಯಕ ಕಾರ್ಯದರ್ಶಿ ಪ್ರಶಾಂತ್ ಅವರು ಮಾಹಿತಿ ನೀಡಿದರು.
* ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯತ್ ಪ್ರಥಮ ಸ್ಥಾನದಲ್ಲಿದ್ದು, ಇದು 1 ಕೋಟಿ.ರೂ. ಬಹುಮಾನ ಪಡೆಯಲಿದೆ.
ಬುಧವಾರ, 11 ಡಿಸೆಂಬರ್ 2024
10:44 ಪೂರ್ವಾಹ್ನ
Daily PDF
ಉಡುಪಿ ಜಿಲ್ಲಾ ಪಂಚಾಯತ್ ಗೆ ದೇಶದ ಸರ್ವೋತ್ತಮ ಜಿ.ಪಂ. ಪ್ರಶಸ್ತಿ ಪ್ರಧಾನ
Authored by:
Yallamma G