* ಸೌರಾಷ್ಟ್ರದ ಮಾಜಿ ದಿಗ್ಗಜ ಸಿತಾಂಶು ಕೋಟಕ್ ಅವರನ್ನು ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (Board of Control for Cricket in India - BCCI) 2025 ಜನವರಿ 16 ರಂದು ನಿರ್ಧರಿಸಿದೆ.* ಮಾರ್ನೆ ಮಾರ್ಕೆಲ್ ಅವರು ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬ್ಯಾಟಿಂಗ್ ಕೋಚ್ ಎಂದು ನಿರ್ದಿಷ್ಟವಾಗಿ ಯಾರೂ ಇಲ್ಲ. ಸಹಾಯಕ ಕೋಚ್ ಗಳಲ್ಲಿ ಒಬ್ಬರಾಗಿರುವ ಅಭಿಷೇಕ್ ನಾಯರ್ ಆ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು.* ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಅಭಿಷೇಕ್ ನಾಯರ್ (ಸಹಾಯಕ ಕೋಚ್), ರಿಯಾನ್ ಟೆನ್ ಡೊಸ್ಚಾಟ್ (ಸಹಾಯಕ ಕೋಚ್), ಮಾರ್ನೆ ಮಾರ್ಕೆಲ್ (ಬೌಲಿಂಗ್ ಕೋಚ್) ಮತ್ತು ಟಿ ದಿಲೀಪ್ (ಫೀಲ್ಡಿಂಗ್ ಕೋಚ್) ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.* 52 ವರ್ಷದ ಸಿತಾಂಶು ಕೋಟಕ್ ಅವರು 2019 ರಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.* ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಐದು ಟಿ20 ಪಂದ್ಯಗಳ ಸರಣಿ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಗಳಲ್ಲಿ ಆಡಲಿದೆ. * ಸಿತಾಂಶು ಕೋಟಕ್ ಅವರು ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಭಾರತ-ಎ ತಂಡವನ್ನು ಮೇಲ್ವಿಚಾರಣೆ ಜವಾಬ್ದಾರಿ ನಿರ್ವಹಿಸಿದ್ದರು. ಐಪಿಎಲ್ 2017 ರಲ್ಲಿ ಗುಜರಾತ್ ಲಯನ್ಸ್ ತಂಡಕ್ಕೆ ಸಹಾಯಕ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭ ಕೂಡ ಇದೆ.