➤ ಬೆಂಗಳೂರು: ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಉತ್ತಮ ಪೊಲೀಸ್ ಸೇವೆ ಒದಗಿಸಲು ಕರ್ನಾಟಕ ಸರ್ಕಾರವು 2026ರ ಬಜೆಟ್‌ನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 12 ಹೊಸ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಲಾಗಿದೆ.
➤ ಹೊಸ ಪೊಲೀಸ್ ಠಾಣೆಗಳು: ಸರ್ಕಾರದ ಈ ಘೋಷಣೆಯು ಕೈಗಾರಿಕಾ ವಲಯ, ಗ್ರಾಮಾಂತರ ಪ್ರದೇಶ ಮತ್ತು ಸಂಚಾರ ದಟ್ಟಣೆ ಇರುವ ನಗರ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ.
1. ದಕ್ಷಿಣ ಕನ್ನಡ: ಮಾಣಿ ಮತ್ತು ಸಜಿಪನಡು ಪೊಲೀಸ್ ಠಾಣೆ
2. ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ಸಂಚಾರ (Traffic)
3. ಬೆಳಗಾವಿ: ಯರಗಟ್ಟಿ ಪೊಲೀಸ್ ಠಾಣೆ 
4.ಯಾದಗಿರಿ: ಕಕ್ಕೇರಾ ಪೊಲೀಸ್ ಠಾಣೆ
5. ಚಿತ್ರದುರ್ಗ: ಹಿರಿಯೂರು ಸಂಚಾರ (Traffic) ಪೊಲೀಸ್ ಠಾಣೆ
6. ದಾವಣಗೆರೆ: ಆನಗೋಡು ಪೊಲೀಸ್ ಠಾಣೆ
7. ಹಾವೇರಿ: ತಿಳುವಳ್ಳಿ ಪೊಲೀಸ್ ಠಾಣೆ 
8. ಮೈಸೂರು: ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ
9. ವಿಜಯಪುರ: ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆ 
10. ಕೋಲಾರ: ನರಸಾಪುರ ಕೈಗಾರಿಕಾ ವಲಯ ಪೊಲೀಸ್ ಠಾಣೆ
11. ಚಾಮರಾಜನಗರ: ಗುಂಡ್ಲುಪೇಟೆ ಸಂಚಾರ (Traffic) ಪೊಲೀಸ್ ಠಾಣೆ
➤ ರಾಜ್ಯದ ಆಯ್ದ ಭಾಗಗಳಲ್ಲಿ ಸಂಚಾರ ನಿಯಂತ್ರಣ, ಕೈಗಾರಿಕಾ ಭದ್ರತೆ, ಗ್ರಾಮೀಣ ಸುರಕ್ಷತೆ ಮತ್ತು ಆಡಳಿತಾತ್ಮಕ ಸೌಲಭ್ಯಕ್ಕಾಗಿ ಪೊಲೀಸ್ ವ್ಯಾಪ್ತಿಯನ್ನು ವಿಸ್ತರಿಸುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ.