* ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಭಾರತವನ್ನು ಸ್ನೇಹಿ ರಾಷ್ಟ್ರವೆಂದು ಪರಿಗಣಿಸಿದರಾದರೂ ವ್ಯಾಪಾರದ ವಿಷಯಕ್ಕೆ ಬಂದರೆ ನಿಷ್ಠುರವಾದ ಮಂಡಿಸುತ್ತಾರೆ.* ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುವ ಉತ್ಪನ್ನಗಳ ಮೇಲೆ ಭಾರತ ತೆರಿಗೆ ಹೇರುವುದರ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದು, ತಮ್ಮ ದೇಶವೂ ಭಾರತೀಯ ಉತ್ಪನ್ನಗಳ ಮೇಲೆ ತೆರಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.* ಅಮೇರಿಕಾದ ಕೆಲ ವಸ್ತುಗಳ ಆಮದಿಗೆ ಭಾರತವು ವಿಧಿಸಿರುವ ಹೆಚ್ಚಿನ ಸುಂಕಕ್ಕೆ ಪ್ರತಿಯಾಗಿ ಅಷ್ಟೇ ಮೊತ್ತದ ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.* ಬಹುತೇಕ ಭಾರತವು ಎಲ್ಲ ಸಂದರ್ಭದಲ್ಲಿ ನಮಗೆ ಸುಂಕ ವಿಧಿಸಿದ್ದಾರೆ. ಆದರೆ ನಾವು ಸುಂಕ ವಿಧಿಸಿರಲಿಲ್ಲ. ಎಂದು ಟ್ರಂಪ್ ಸುದ್ಧಿಗಾರರಿಗೆ ತಿಳಿಸಿದ್ದಾರೆ.* ಐದಾರು ವರ್ಷದ ಪೂರ್ವದಲ್ಲಿ ಅಮೆರಿಕದ ಹಾರ್ಲೀ ಡೇವಿಡ್ಸನ್ ಬೈಕುಗಳ ಮೇಲೆ ಭಾರತ ಶೇ. 100ರಷ್ಟು ಸುಂಕ ವಿಧಿಸುತ್ತಿತ್ತು. ಬಳಿಕ ಅದನ್ನು ಶೇ. 50ರಷ್ಟು ಕಡಿತಗೊಳಿಸಲಾಯಿತು. ಆದರೂ ಕೂಡ ಅದು ಅತಿಯಾಯಿತು ಎನ್ನುವುದು ಟ್ರಂಪ್ ಅನಿಸಿಕೆ.* ಕೆಲ ತಿಂಗಳ ಹಿಂದೆ ಭಾರತದ ಸಚಿವರು ಹಾರ್ಲೀ ಡೇವಿಡ್ಸನ್ ಬೈಕುಗಳ ಮೇಲಿನ ಆಮದು ಸುಂಕವನ್ನು ಮತ್ತಷ್ಟು ಇಳಿಸುವ ಕುರಿತು ಮಾತುಗಳನ್ನಾಡಿದ್ದರು.* 'ಕ್ರಿಯೆಗೆ ಸಮನಾದ ಪ್ರತಿಕ್ರಿಯೆ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಲಕ್ಷಣವಾಗಿರುತ್ತದೆ. ನಾವು ನಿಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ಬಯಸುತ್ತಿರೋ ಅದಕ್ಕೆ ಸರಿಯಾಗಿ ನೀವು ಕೂಡ ನಮ್ಮೊಂದಿಗೆ ನಡೆದುಕೊಳ್ಳಬೇಕು' ಎಂದು ಟ್ರಂಪ್ ಅವರ ವಾಣಿಜ್ಯ ಕಾರ್ಯದರ್ಶಿ ಪಿಕ್ ಹಾವರ್ಡ್ ಲುಟ್ಟಿಕ್ ಅವರು ಹೇಳಿದ್ದಾರೆ.