➤ ಭಾರತವು 2024 ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಜಯಿಸಿದ ನಂತರ, ಈ ಬಾರಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಫೈನಲ್‌ನಲ್ಲಿ ಭಾರತ ತಂಡದ ವೈಭವವು ಪ್ರೇಕ್ಷಕರ ಮನಸ್ಸನ್ನು ರಂಜಿಸಿದೆ.
➤ ಈ ಗೆಲುವು ಭಾರತದ ತಂಡಕ್ಕೆ ಅನನ್ಯ ದಾಖಲೆ ನೀಡಿದೆ:
- ಟಿ20 ವಿಶ್ವಕಪ್ ಇತಿಹಾಸದಲ್ಲಿ ಹಾಲಿ ಚಾಂಪಿಯನ್ ತಂಡವು ಪ್ರಶಸ್ತಿಯನ್ನು ಉಳಿಸಿಕೊಂಡಿರುವ ಮೊದಲ ತಂಡ ಭಾರತ.
- ಆತಿಥೇಯ ತಂಡವಾಗಿಯೂ ಭಾರತ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಮೊದಲ ದೇಶ.
- ನ್ಯೂಜಿಲೆಂಡ್ ವಿರುದ್ಧ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮೊದಲ ಬಾರಿಗೆ ಜಯ ಸಾಧಿಸಿದೆ, ಹಳೆಯ ಸೋಲು ಸರಣಿಯನ್ನು ಮುರಿದುಕೊಂಡಿತು.
- ಇದುವರೆಗೆ ನ್ಯೂಜಿಲೆಂಡ್ 2007, 2016 ಮತ್ತು 2021 ರ ಟಿ20 ವಿಶ್ವಕಪ್ ಫೈನಲ್‌ಗಳಲ್ಲಿ ಭಾರತವನ್ನು ಸೋಲಿಸಿದ್ದು, 2026 ರ ಫೈನಲ್‌ನಲ್ಲಿ ಕಿವೀಸ್ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ. ಭಾರತ ತಂಡದ ಈ ಗೆಲುವು ಕ್ರಿಕೆಟ್ ಪ್ರೇಕ್ಷಕರಿಗೆ ಮತ್ತೊಂದು ಮಹತ್ವಪೂರ್ಣ ಕ್ಷಣವಾಗಿದೆ.
- ಭಾರತವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಎರಡು ಬಾರಿ ಜಯಿಸುವ ಸಾಧನೆಯನ್ನು ಮಾಡಿದ ಮೂಲಕ, ಕ್ರಿಕೆಟ್ ಲೋಕದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.
➤ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮೂರನೇ ಅತಿ ಹೆಚ್ಚು ರನ್ ಗಳಿಸಿತು. ಸ್ಯಾಮ್ಸನ್ 46 ಎಸೆತಗಳಲ್ಲಿ 89 ರನ್, ಅಭಿಷೇಕ್ 21 ಎಸೆತಗಳಲ್ಲಿ 52 ರನ್ ಮತ್ತು ಇಶಾನ್ ಕಿಶನ್ 25 ಎಸೆತಗಳಲ್ಲಿ 54 ರನ್ ಗಳಿಸಿದರು.
➤ ಪ್ರಸಕ್ತ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದವರು
383 ಸಾಹಿಬ್ಬಾದಾ ಫರ್ಹಾನ್ (ಪಾಕಿಸ್ತಾನ)
326 ಟಿಮ್ ಸಿಫರ್ಟ್ (ನ್ಯೂಜಿಲೆಂಡ್)
321 ಸಂಜು ಸ್ಯಾಟ್ಸನ್ (ಭಾರತ)
➤ ಪ್ರಸಕ್ತ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಗಳಿಸಿದವರು
14 ಜಸ್ ಪ್ರಿತ್ ಬುಮ್ರಾ (ಭಾರತ)
14 ವರುಣ್ ಚಕ್ರವರ್ತಿ (ಭಾರತ)
13 ಶ್ಯಾಡ್ಲಿವ್ಯಾನ್ (ಅಮೆರಿಕ)
➤ ಭಾರತ ಪರ ಶ್ರೇಷ್ಠ ಪ್ರದರ್ಶನ ನೀಡಿದವರು
ಸಂಜು ಸ್ಯಾಟ್ಸನ್ : 321 ರನ್
ಇಶಾನ್ ಕಿಶಾನ್ : 317 ರನ್
ಸೂರ್ಯಕುಮಾರ್ : 242 ರನ್
ಜಸ್‌ಪ್ರಿತ್ ಬುಮ್ರಾ : 14 ವಿಕೆಟ್
ವರುಣ್ ಚಕ್ರವರ್ತಿ : 14 ವಿಕೆಟ್
ಅಕ್ಷರ್ ಪಟೇಲ್ : 11 ವಿಕೆಟ್
➤