* ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ 'ಸ್ಪೇಸ್ ಎಕ್ಸ್' ಸಂಸ್ಥೆಯು ಬುಧವಾರ (ಜನವರಿ 15) ಅಮೆರಿಕ ಮತ್ತು ಜಪಾನ್ ಕಂಪನಿಗಳ ಎರಡು ಲ್ಯಾಂಡರ್ಗಳನ್ನು ಉಡಾವಣೆ ಮಾಡಿದೆ.* ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತ ಮೂಲದ ಎರಡು ಖಾಸಗಿ ಸ್ಟಾರ್ಟಪ್ ಕಂಪನಿಗಳ ಉಪಗ್ರಹಗಳನ್ನು ಹೊತ್ತ ರಾಕೆಟ್ಅನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.* ಪಿಕ್ಸೆಲ್ ಹಾಗೂ ದಿಗಂತರಾ ಎಂಬ ಕಂಪನಿಗಳ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಪಿಕ್ಸೆಲ್ ತನ್ನದೇ ಉಪಗ್ರಹಗಳ ಗುಂಪನ್ನು ಹೊಂದಿದ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಶ್ರೇಯಕ್ಕೆ ಪಾತ್ರವಾಗಿದೆ.* ಆರ್ಥಿಕ ಸುಧಾರಣೆಯ ಕ್ರಮವಾಗಿ ಹಣ ಉಳಿತಾಯದ ಉದ್ದೇಶದಿಂದ ಒಂದೇ ರಾಕೆಟ್ನಿಂದ ಏಕಕಾಲದಲ್ಲಿ ಎರಡು ಲ್ಯಾಂಡರ್ಗಳನ್ನು ಉಡಾವಣೆ ಮಾಡಲಾಗಿದೆ, ಆದರೆ ಅವುಗಳು ಬೇರೆ ಬೇರೆ ಸಮಯಗಳಲ್ಲಿ ಚಂದ್ರನ ಅಂಗಳವನ್ನು ತಲುಪಲಿವೆ.* ಟೋಕಿಯೊ ಮೂಲದ ಕಂಪನಿ 'ಐ-ಸ್ಪೇಸ್' ಎರಡು ವರ್ಷಗಳ ಹಿಂದೆ ಸಹ ಚಂದ್ರನ ಅಂಗಳಕ್ಕೆ ಲ್ಯಾಂಡರ್ ಅನ್ನು ಕಳುಹಿಸಿತ್ತು.* ಈ ಬಾರಿ ಕಳುಹಿಈ ಬಾರಿ ಕಳುಹಿಸಲಾದ ಲ್ಯಾಂಡರ್ನ ರೋವರ್ದಲ್ಲಿ ಚಂದ್ರನ ಮೇಲ್ಮೈನಲ್ಲಿನ ಮಣ್ಣು ಸಂಗ್ರಹಿಸಲು ಸಲಕರಣೆಯು ಅಳವಡಿಸಲಾಗಿದೆ. ಇದರಿಂದ ಚಂದ್ರನ ಮಣ್ಣು, ಆಹಾರ ಮತ್ತು ಜಲಮೂಲಗಳ ಬಗ್ಗೆ ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ.