* ಭಾರತದ ಚೆಸ್ ತಾರೆ ಕೊನೇರು ಹಂಪಿ ಮಹಿಳಾ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಕೊನೇರು ಹಂಪಿ ಎರಡನೇ ಸಲ ವಿಶ್ವ ರಯಾಪಿಡ್ ಚೆಸ್ ಚಾಂಪಿಯನ್ಷಿಪ್ ಗೆದ್ದ ಸಾಧನೆ ಮಾಡಿದ್ದಾರೆ.* ನ್ಯೂಯಾರ್ಕ್ನಲ್ಲಿ ನಡೆದ ಈ ಟೂರ್ನಿಯಲ್ಲಿ ಭಾರತದ ಆಟಗಾರ್ತಿ ಫೈನಲ್ನಲ್ಲಿ ಇಂಡೋನೇಷ್ಯಾದ ಐರಿನ್ ಸುಖಂದರ್ ಅವರನ್ನು ಸೋಲಿಸಿದರು. 37 ವರ್ಷ ವಯಸ್ಸಿನ ಹಂಪಿ 11 ರಲ್ಲಿ 8.5 ಅಂಕಗಳೊಂದಿಗೆ ಪಂದ್ಯಾವಳಿಯನ್ನು ಪೂರ್ಣಗೊಳಿಸಿದರು.* ವಿಶ್ವ ರಯಾಪಿಡ್ ಚೆಸ್ ಚಾಂಪಿಯನ್ಷಿಪ್ ಪುರುಷರ ವಿಭಾಗದಲ್ಲಿ 18 ವರ್ಷದ ರಷ್ಯಾದ ವೊಲೊಡರ್ ಮುರ್ಜಿನ್ ಪ್ರಶಸ್ತಿ ಜಯಿಸಿದ್ದಾರೆ. ಆ ಮೂಲಕ ಈ ಪ್ರಶಸ್ತಿ ಗೆದ್ದ ಎರಡನೇ ಕಿರಿಯ ಆಟಗಾರ ಎನಿಸಿದ್ದಾರೆ.* ಗ್ರ್ಯಾಂಡ್ ಮಾಸ್ಟರ್ ಆದ ಭಾರತದ ಮೊದಲ ಮಹಿಳಾ ಆಟಗಾರ್ತಿ ಹಂಪಿ, ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಈಗಾಗಲೇ ವಿಶ್ವ ಟೆಸ್ಟ್ ಲೋಕದಲ್ಲಿ ತಮ್ಮ ಛಾಪು ಮೂಡಿಸಿರುವ ಕೋನೇರು ಹಂಪಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದರು.* ಇತ್ತೀಚಿಗೆ ಸಿಂಗಾಪುರದಲ್ಲಿ ನಡೆದ ಕ್ಲಾಸಿಕಲ್ ಚೆಸ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸಿದ ಭಾರತದ ಡಿ ಗುಕೇಶ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಇದಾದ ಬಳಿಕ ಈಗ ಕೊನೇರು ಹಂಪಿ ರ್ಯಾಪಿಡ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಅಬ್ಬರಿಸಿದರು.