* 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಮೂರೂ ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ ಫೈನಲ್ನಲ್ಲಿ ಹರ್ಯಾಣ ಸ್ಟೀಲರ್ಸ್ 32-23 ಅಂಕಗಳಿಂದ ಗೆದ್ದು, ಚೊಚ್ಚಲ ಕಿರೀಟ ತನ್ನದಾಗಿಸಿಕೊಂಡಿತು.* ಡಿಸೆಂಬರ್ 29(ಭಾನುವಾರ) ರಂದು ನಡೆದ ಫೈನಲ್ ಪಂದ್ಯದಲ್ಲಿ ಶಿವಂ ಪತಾರೆ ಅವರ 9 ಅಂಕಗಳ ಅಮೋಘ ರೈಡಿಂಗ್ ಬಲದಿಂದ ತಂಡವನ್ನು ಗೆಲುವಿನತ್ತ ಕೊರೆದೋಯ್ದರು.* ಮೊದಲಾರ್ಧದಲ್ಲಿ 15-12 ಅಂಕಗಳಿಂದ ಮುನ್ನಡೆಯಲ್ಲಿದ್ದ ಹರ್ಯಾಣ, ಕೊನೆಯಲ್ಲಿ ಮತ್ತಷ್ಟು ಅಂಕ ಗಳಿಸಿತು. 2ನೇ ಅವಧಿಯಲ್ಲಿ ಆಲೌಟ್ ಜೊತೆ 17 ಅಂಕ ಗಳಿಸಿ ಹರ್ಯಾಣ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.* ಹರ್ಯಾಣ ಪರ ಶಿವಂ 9, ಮೊಹಮದ್ರೆಜಾ ಶಾದ್ಲೂ 7, ವಿನಯ್ 6 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 3 ಬಾರಿ ಚಾಂಪಿಯನ್ ಪಾಟ್ನಾ ಪರ ಗುರುದೀಪ್ 6, ದೇವಾಂಕ್ 5 ಅಂಕ ಗಳಿಸಿದರು.* ಪಾಟ್ನಾ ತಂಡದ ಪರ ದೇವಾಂಕ ಮತ್ತು ಗುರ್ ದೀಪ್ ಕ್ರಮವಾಗಿ 5 ಮತ್ತು 6 ಅಂಕಗಳನ್ನು ಗಳಿಸಿ ತಂಡದ ಹೋರಾಟಕ್ಕೆ ಸಾಕ್ಷಿಯಾದರು. ಪಂದ್ಯ ಮುಕ್ತಾಯಕ್ಕೆ 8 ಅಂಕಗಳ (27-19) ಅಂತರ ಕಾಯ್ದುಕೊಂಡ ಹರಿಯಾಣ ಮೊದಲ ಸಲ ಟ್ರೋಫಿ ಎತ್ತಿ ಹಿಡಿಯಿತು.* ಕಳೆದ ಬಾರಿಯ ಫೈನಲ್ನಲ್ಲಿ 25-28ರಿಂದ ಪುಣೇರಿ ಪಲ್ಟನ ತಂಡಕ್ಕೆ ಮಣಿದು ರನ್ನರ್ಸ್ ಅಪ್ ಆಗಿದ್ದ ಸ್ಟೀಲರ್ಸ್ ತಂಡವು ಈ ಬಾರಿ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿತ್ತು. ಗುಂಪು ಹಂತದಲ್ಲಿ 22 ಪಂದ್ಯಗಳ ಪೈಕಿ 16 ರಲ್ಲಿ ಗೆದ್ದು (84 ಅಂಕ) ಅಗ್ರಸ್ಥಾನದೊಂದಿಗೆ ಸ್ಟೀಲರ್ಸ್ ನೇರವಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ನಾಲ್ಕರ ಘಟ್ಟದಲ್ಲಿ 28-25ರಿಂದ ಯು.ಪಿ ಯೋಧಾಸ್ ತಂಡವನ್ನು ಹಿಮ್ಮೆಟ್ಟಿಸಿ ಫೈನಲ್ ತಲುಪಿತ್ತು.* ಮೂರರಿಂದ ಐದು ಆವೃತ್ತಿವರೆಗೆ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದ್ದ ಪಾಟ್ನಾ ಪೈರೇಟ್ಸ್ ತಂಡಕ್ಕೆ ಇದು ಐದನೇ ಫೈನಲ್ ಪಂದ್ಯವಾಗಿತ್ತು. ಸೆಮಿಫೈನಲ್ನಲ್ಲಿ ಡೆಲ್ಲಿ ದಬಾಂಗ್ ತಂಡವನ್ನು ಮಣಿಸಿ ಫೈನಲ್ ಸುತ್ತಿಗೆ ಮುನ್ನಡೆದಿತ್ತು.