* ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೆಕ್ಸಿಕೊ ಕೊಲ್ಲಿಯ ಮರುನಾಮಕರಣಕ್ಕಾಗಿ ಇತ್ತೀಚಿಗೆ ಕಾರ್ಯಕಾರಿ ಆದೇಶವನ್ನು ಹೊರಡಿಸಿದ್ದು, ಫೆ.9ನ್ನು ಮೊದಲ ‘ಗಲ್ಫ್ ಆಫ್ ಅಮೆರಿಕ ಡೇ(ಅಮೆರಿಕ ಕೊಲ್ಲಿ ದಿನ)’ ಎಂಬ ಘೋಷಣೆಗೆ ಸಹಿ ಹಾಕಿದ್ದಾರೆ.* ಗಲ್ಫ್ ಆಫ್ ಮೆಕ್ಸಿಕೊದ ಹೆಸರನ್ನು ಟ್ರಂಪ್ ಅಧ್ಯಕ್ಷರಾದ ಬಳಿಕ ಗಲ್ಫ್ ಆಫ್ ಅಮೆರಿಕ ಎಂದು ಮರುನಾಮಕರಣ ಮಾಡಲಾಗಿದೆ.* ಟ್ರಂಪ್ ಸೂಪರ್ಬೌಲ್ಗೆ ಏರ್ಫೋರ್ಸ್ ಒನ್ನಲ್ಲಿ ತೆರಳುತ್ತಿದ್ದಾಗ ಘೋಷಣೆಗೆ ಸಹಿ ಹಾಕಿದರು. ನ್ಯೂ ಒರ್ಲಿಯನ್ಸ್ ಕೊಲ್ಲಿ ಪ್ರದೇಶದಲ್ಲಿದ್ದು, ಘೋಷಣೆಗೆ ಇದು ಸೂಕ್ತ ಸಮಯವೆಂದರು. ಮರುನಾಮಕರಣದ ಬಳಿಕ ಇದು ಗಲ್ಫ್ ಆಫ್ ಅಮೆರಿಕಕ್ಕೆ ಅವರ ಮೊದಲ ಭೇಟಿಯಾಗಿದೆ ಎಂದು ಶ್ವೇತಭವನ ಪ್ರಕಟಿಸಿತು.* ಜ.20ರಂದು ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರವಹಿಸಿಕೊಂಡ ಬಳಿಕ ಹಲವು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದರು. ಅದರಲ್ಲಿ ಗಲ್ಫ್ ಆಫ್ ಮೆಕ್ಸಿಕೊ ಹೆಸರನ್ನು ಗಲ್ಫ್ ಆಫ್ ಅಮೆರಿಕ ಎಂದು ಬದಲಾಯಿಸುವುದು ಕೂಡ ಒಂದಾಗಿತ್ತು.