* ದೇಶದ 1.80 ಕೋಟಿ ವಿದ್ಯಾರ್ಥಿಗಳು, ಬೋಧಕರು, ಸಂಶೋಧಕರು ಹಾಗೂ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಗೆ ಪ್ರಯೋಜನವಾಗಲಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಒಂದು ದೇಶ ಒಂದು ಚಂದಾದಾರಿಕೆ' (ಒನ್ ನೇಷನ್ ಒನ್ ಸಬ್ಸ್ಕ್ರಿಪ್ಪನ್) ಯೋಜನೆಗೆ ಹೊಸ ವರ್ಷದ ಮೊದಲ ದಿನ(ಜನವರಿ 01-2025) ಚಾಲನೆ ದೊರೆತಿದೆ. * ಈ ಯೋಜನೆಯು ಎರಡು ವರ್ಷಗಳ ಹಿಂದೆ ರೂಪುಗೊಂಡಿತ್ತು. ಸಂಪುಟ ಕಾರ್ಯದರ್ಶಿ ನೇತೃತ್ವದ ಕಾರ್ಯದರ್ಶಿಗಳ ಸಮಿತಿಯು 2022ರಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಿತ್ತು.* ಒಟ್ಟಾರೆ ಯೋಜನೆಗೆ ಕೇಂದ್ರ ಸಂಪುಟ ಸಭೆಯು ಕಳೆದ ನವೆಂಬರ್ನಲ್ಲಿ ಅನುಮೋದನೆ ನೀಡಿತ್ತು. ಪ್ರಸ್ತುತ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೊದಲ ಹಂತದಲ್ಲಿ ಯೋಜನೆ ಲಭ್ಯವಾಗಿದೆ.* ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು, ಸಂಶೋಧನೆ ಹಾಗೂ ಅಭಿವೃದ್ಧಿ ಪ್ರಯೋಗಾಲಯಗಳಿಗಾಗಿ ರೂಪಿಸಲಾಗಿರುವ ಈ ಯೋಜನೆ 2025, 2026, 2027 ಮೂರೂ ವರ್ಷಗಳ ಅವಧಿಗೆ ಅನುಷ್ಠಾನಗೊಳಿಸಲಾಗಿದೆ.* ಈ ಯೋಜನೆಯು 6000 ಕೋಟಿ) ರೂ. ವೆಚ್ಚದಾಗಿದ್ದು, ಮೊದಲ ಹಂತದಲ್ಲಿ ದೇಶಿಯ ಹಾಗೂ ವಿವಿಧ ದೇಶಗಳ 30 ಪ್ರಕಾಶಕರ ಸಂಶೋಧನಾ ನಿಯತಕಾಲಿಕೆಗಳು ಈ ಯೋಜನೆಯಡಿಯಲ್ಲಿ ಲಭ್ಯವಾಗಲಿದೆ.