➤ ಒಲಿಂಪಿಕ್ ದಿನ 2026 ರ ಧ್ಯೇಯವಾಕ್ಯ (Theme): "ಕ್ರೀಡೆ: ಸೇತುವೆಗಳ ನಿರ್ಮಾಣ, ಅಡೆತಡೆಗಳ ನಿವಾರಣೆ" (Sport: Building Bridges, Breaking Barriers)
➤ ಒಲಿಂಪಿಕ್ ದಿನದ ಇತಿಹಾಸ:
- ಐಒಸಿ ಸ್ಥಾಪನೆ: 1894 ಜೂನ್ 23 ರಂದು ಫ್ರಾನ್ಸ್‌ನ ಶಿಕ್ಷಣ ತಜ್ಞ ಬ್ಯಾರನ್ ಪಿಯರೆ ಡಿ ಕೌಬರ್ಟಿನ್ (Baron Pierre de Coubertin) ಅವರ ನೇತೃತ್ವದಲ್ಲಿ ಪ್ಯಾರಿಸ್‌ನಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಯನ್ನು ಸ್ಥಾಪಿಸಲಾಯಿತು. ಇವರನ್ನು 'ಆಧುನಿಕ ಒಲಿಂಪಿಕ್ ಕ್ರೀಡಾಕೂಟದ ಪಿತಾಮಹ' ಎಂದು ಕರೆಯಲಾಗುತ್ತದೆ.
- ಮೊದಲ ಆಧುನಿಕ ಒಲಿಂಪಿಕ್ಸ್: ಐಒಸಿ ಸ್ಥಾಪನೆಯಾದ ನಂತರ, ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾಕೂಟವು 1896 ರಲ್ಲಿ ಗ್ರೀಸ್‌ನ ಅಥೆನ್ಸ್‌ನಲ್ಲಿ ಯಶಸ್ವಿಯಾಗಿ ನಡೆಯಿತು.
- ಆಚರಣೆಯ ಆರಂಭ: ಐಒಸಿ ಸ್ಥಾಪನೆಯ ನೆನಪಿಗಾಗಿ ಒಲಿಂಪಿಕ್ ದಿನವನ್ನು ಆಚರಿಸುವ ನಿರ್ಣಯವನ್ನು 1947 ರಲ್ಲಿ ಕೈಗೊಳ್ಳಲಾಯಿತು. ಇದರಂತೆ, ಮೊದಲ ಬಾರಿಗೆ ಅಂತರರಾಷ್ಟ್ರೀಯ ಒಲಿಂಪಿಕ್ ದಿನವನ್ನು 1948 ಜೂನ್ 23 ರಂದು ಆಚರಿಸಲಾಯಿತು. ಆರಂಭದಲ್ಲಿ ಕೇವಲ 9 ದೇಶಗಳು ಭಾಗವಹಿಸಿದ್ದವು, ಆದರೆ ಇಂದು 200 ಕ್ಕೂ ಹೆಚ್ಚು ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳು (NOCs) ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ
- ಚಲಿಸು (Move): ವಯಸ್ಸಿನ ಮಿತಿಯಿಲ್ಲದೆ ಪ್ರತಿಯೊಬ್ಬರೂ ಓಟ, ನಡಿಗೆ, ಸೈಕ್ಲಿಂಗ್ ಅಥವಾ ಯೋಗದಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು.
- ಕಲಿ (Learn): ಒಲಿಂಪಿಕ್ ಇತಿಹಾಸ, ಕ್ರೀಡಾ ಮನೋಭಾವ (Sportsmanship), ಶಿಸ್ತು ಮತ್ತು ನ್ಯಾಯಸಮ್ಮತ ಆಟದ (Fair play) ಮೌಲ್ಯಗಳ ಬಗ್ಗೆ ಸಮಾಜಕ್ಕೆ ಶಿಕ್ಷಣ ನೀಡುವುದು.
- ಶೋಧಿಸು (Discover): ಸಾರ್ವಜನಿಕರು ತಮ್ಮ ಆಸಕ್ತಿ ಹಾಗೂ ಪ್ರತಿಭೆಯನ್ನು ಗುರುತಿಸಲು ಹೊಸ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಅನ್ವೇಷಿಸುವಂತೆ ಮಾಡುವುದು.
- ಉತ್ಕೃಷ್ಟತೆ (Excellence): ಕ್ರೀಡೆಯಲ್ಲಿ ಮತ್ತು ಜೀವನದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನೀಡುವುದು.
- ಸ್ನೇಹತ್ವ (Friendship): ಕ್ರೀಡೆಯ ಮೂಲಕ ಜಗತ್ತಿನಾದ್ಯಂತ ಪರಸ್ಪರ ಸಾಮರಸ್ಯ ಮತ್ತು ಏಕತೆಯನ್ನು ಬೆಳೆಸುವುದು.
- ಗೌರವ (Respect): ನಿಯಮಗಳು, ಎದುರಾಳಿಗಳು, ಸಹ ಆಟಗಾರರು ಮತ್ತು ತನ್ನನ್ನು ತಾನು ಗೌರವಿಸುವುದು.