Job Description: * ರಾಷ್ಟ್ರಪತಿ ಭವನದಲ್ಲಿ ಜನವರಿ 17ರಂದು ನಡೆದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಲ್ವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.* 18 ವರ್ಷದ ಚೆಸ್ ಚಾಂಪಿಯನ್ ಗುಕೇಶ್ ಡಿ, ಹಾಕಿ ನಾಯಕ ಹರ್ಮನ್‌ಪ್ರೀತ್ ಸಿಂಗ್, ಡಬಲ್ ಒಲಂಪಿಕ್ ವಿಜೇತೆ ಶೂಟರ್ ಮನು ಭಾಕರ್ ಮತ್ತು ಪ್ಯಾರಾಲಿಂಪಿಕ್ಸ್ ಹೈಜಂಪರ್ ಪ್ರವೀಣ್ ಕುಮಾರ್ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದರು.* ಭಾಕರ್‌ 22 ವರ್ಷ ವಯಸ್ಸಿನಲ್ಲಿ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟುವಾಗಿ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಜಯಿಸಿದರು. ಅವರು ಆಗಸ್ಟ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ 10 ಮೀ. ಏರ್‌ ಪಿಸ್ತೂಲ್‌ ವೈಯಕ್ತಿಕ ಮತ್ತು ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಪಡೆದರು.* ‘ದೃಢಚಿತ್ತ ಮತ್ತು ಸ್ಥಿರ ಪ್ರದರ್ಶನದಿಂದ ಸ್ಪರ್ಧೆ ಗೆಲ್ಲಬಹುದು ಎಂಬುದು ನನ್ನ ವಿಶ್ವಾಸ. ಖೇಲ್‌ ರತ್ನ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದು. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಆಭಾರಿ’ ಎಂದು ಭಾಕರ್‌ ಪಿಟಿೈ ವಿಡಿಯೋಸ್‌ಗೆ ತಿಳಿಸಿದರು.* ಟೋಕಿಯೊ ಮತ್ತು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡಕ್ಕೆ ಹರ್ಮನ್‌ಪ್ರೀತ್ ನಾಯಕರಾಗಿದ್ದರು. ಪ್ಯಾರಾ ಅಥ್ಲೀಟ್‌ ಪ್ರವೀಣ್, ಟೋಕಿಯೊದಲ್ಲಿ ಬೆಳ್ಳಿ ಗೆದ್ದರೆ, ನಾಲ್ಕು ವರ್ಷಗಳ ನಂತರ ಚಿನ್ನ ಗೆದ್ದಿದ್ದರು. ಅವರ ಎಡಗಾಲಿನ ಉದ್ದ ಕಡಿಮೆಯಿದೆ.* ಗುಕೇಶ್ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ.\* 32 ಮಂದಿ ಅಥ್ಲೀಟುಗಳಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರಲ್ಲಿ 17 ಮಂದಿ ಪ್ಯಾರಾ ಅಥ್ಲೀಟುಗಳು ಇದ್ದಿದ್ದು, ಪ್ಯಾರಿಸ್‌ ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಆಟಗಾರರಿಗೆ ಪ್ರಶಸ್ತಿ ನೀಡ ಗೌರವಿಸಲಾಗಿದೆ.* ‌ಪ್ಯಾರಿಸ್‌ನಲ್ಲಿ ಪದಕ ಗೆದ್ದ ಅಮನ್‌ ಸೆಹ್ರಾವತ್ (ಕುಸ್ತಿ), ಶೂಟರ್‌ಗಳಾದ ಸ್ವಪ್ನಿಲ್ ಕುಸಳೆ ಮತ್ತು ಸರಬ್ಜೋತ್ ಸಿಂಗ್ (ಭಾಕರ್ ಜೊತೆ ಶೂಟಿಂಗ್ ಮಿಶ್ರ ವಿಭಾಗದಲ್ಲಿ ಪದಕ), ಕಂಚು ಗೆದ್ದ ಹಾಕಿ ತಂಡದಲ್ಲಿದ್ದ ಜರ್ಮನ್‌ಪ್ರೀತ್, ಸುಖಜೀತ್‌, ಸಂಜಯ್ ಮತ್ತು ಅಭಿಷೇಕ್ ಇವರಲ್ಲಿ ಒಳಗೊಂಡಿದ್ದಾರೆ.* ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 29 ಪದಕಗಳನ್ನು ಗೆದ್ದು ಅಮೋಘ ಸಾಧನೆ ಸಾಧಿಸಿದೆ.* ಖೇಲ್‌ ರತ್ನ ಪ್ರಶಸ್ತಿಯು ₹25 ಲಕ್ಷ ನಗದು, ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿಯು ₹15 ಲಕ್ಷ ನಗದು ಬಹುಮಾನ ಹೊಂದಿವೆ.* ಅರ್ಜುನ ಪ್ರಶಸ್ತಿ (ಜೀವಮಾನ ಸಾಧನೆ) ಪಡೆದ 80 ವರ್ಷ ವಯಸ್ಸಿನ ಮುರಳಿಕಾಂತ ಪೇಟ್ಕರ್ ಅವರು ಪ್ರಶಸ್ತಿ ಸ್ವೀಕರಿಸುವಾಗ.* ಯುದ್ಧವೀರರಾದ ಪೇಟ್ಕರ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟುವಾಗಿದ್ದಾರೆ. 1972ರಲ್ಲಿ ಹಿಡೆಲ್‌ಬರ್ಗ್‌ ಕೂಟದ 50 ಮೀ. ಫ್ರೀಸ್ಟೈಲ್‌ ಈಜಿನಲ್ಲಿ ಅವರು ವಿಶ್ವದಾಖಲೆಯೊಡನೆ ಚಿನ್ನ ಗೆದ್ದಿದ್ದರು.