* ಮನು ಭಾಕರ್ (ಮಹಿಳಾ ಶೂಟರ್) ಡಿ.ಗುಕೇಶ್ (ಚೆಸ್ ಆಟಗಾರ), ಹರ್ಮನ್ಪ್ರೀತ್ ಸಿಂಗ್ (ಹಾಕಿ ಆಟಗಾರ), ಪ್ರವೀಣ್ ಕುಮಾರ್(ಪ್ಯಾರಾಲಿಂಪಿಯನ್) ಅವರಿಗೆ ಜನವರಿ 02 ರಂದು ಭಾರತ ಸರ್ಕಾರವು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. * ಜನವರಿ 17 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.* ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 2 ಚಿನ್ನ ಗೆದ್ದ ಶೂಟರ್ ಮನು ಭಾಕರ್, ಸತತ ಎರಡನೇ ಬಾರಿಗೆ ಕಂಚು ಗೆದ್ದ ಭಾರತ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್, ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಹೈಜಂಪರ್ ಪ್ರವೀಣ್ ಕುಮಾರ್ ಹಾಗೂ ಕಳೆದ ತಿಂಗಳು ಚೆಸ್ ವಿಶ್ವಚಾಂಪಿಯನ್ಶಿಪ್ ಗೆದ್ದ ಗುಕೇಶ್ .ಡಿ ಅವರಿಗೆ ಖೇಲ್ ರತ್ನ ಪ್ರಶಸ್ತಿಯನ್ನ ನೀಡಲಾಗುತ್ತಿದೆ.