* ತಮ್ಮ ಅಭಿನಯದಿಂದ ಮನೆಮಾತಾಗಿದ್ದ ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಮೀನಾ ಗಣೇಶ್ ಅವರನ್ನು ಶೋರ್ನೂರ್ನ ಪಿಕೆ ದಾಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 81ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.* 1976ರಲ್ಲಿ ಮಣಿಮುಳಕಂ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಮೀನಾ ಅವರಿಗೆ 1991ರಲ್ಲಿ ಬಂದ ಮುಖಚಿತ್ರಂ ಅಪಾರ ಹೆಸರನ್ನು ತಂದು ಕೊಟ್ಟಿತ್ತು. * ರಂಗಭೂಮಿಯಿಂದ ಚಿತ್ರರಂಗವನ್ನು ಪ್ರವೇಶಿಸಿದ್ದ ಮೀನಾ 100ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಆ ಪೈಕಿ ವಸಂತಿಯುಂ ಲಕ್ಷ್ಮಿಯುಂ ಪಿನ್ನೆ ನಾನುಂ, ವಲ್ಕನ್ನಡಿ, ನಂದನಂ, ಮೀಸಮಾಧವನ್, ಕರುಮಾಡಿಕುಟ್ಟನ್, ಪ್ರಮುಖವಾದವು.* ಇನ್ನು ಪಾಂಚಜನ್ಯಂ, ಫಸಹ್, ಮಯೂಖಂ, ಸಿಂಹಾಸನಂ, ಸ್ವರ್ಣ ಮಯೂರಂ, ಆಯರಂ ನಾವುಲ್ಲ ಮೌನಂ, ರಾಗಂ, ಕಾಲಂ, ಹೀಗೆ ಹಲವಾರು ನಾಟಕಗಳಲ್ಲಿ ಕೂಡ ಮೀನಾ ಅಭಿನಯಿಸಿದ್ದರು. ಇವರ ಪಾಂಚಜನ್ಯಂ ನಾಟಕವನ್ನು ಸತತ ಮೂರು ವರ್ಷಗಳ ಕಾಲ ಪ್ರದರ್ಶಿಸಲಾಗಿತ್ತು. ಫಸಾ ಎಂಬ ನಾಟಕದಲ್ಲಿ ಇವರು ನಿರ್ವಹಿಸಿದ್ದ ಕುಲಸುಂಬಿ ಪಾತ್ರ ಅಪಾರ ಜನಪ್ರಿಯತೆಯನ್ನು ಕೂಡ ಗಳಿಸಿತ್ತು.