* ಇತ್ತೀಚೆಗೆ ಒಂದೇ ಮಿಷನ್ನಲ್ಲಿ ನಾನಾ ಕಕ್ಷೆಗಳಲ್ಲಿ ಉಪಗ್ರಹಗಳನ್ನು ಇರಿಸುವ ಎಲ್ ವಿಎಂ ರಾಕೆಟ್ ಉಡಾವಣೆಯು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಹತ್ವದ ಸಾಧನೆಯಾಗಿದೆ.* "ಮಲ್ಟಿ-ಎಲಿಮೆಂಟ್ ಆಟ್ರೈಟರ್" ಅಭಿವೃದ್ಧಿ, ನೂತನ ಇಗೈಟರ್ ಬಾಹ್ಯಾಕಾಶದಲ್ಲಿ ಸಿಇ-20 ಎಂಜಿನ್ ಪುನಾರಂಭಿಸಲು (ರೀಸ್ಟಾರ್ಟ್) ನೆರವಾಗುತ್ತದೆ. ಹೆಚ್ಚುವರಿ ಉಡಾವಣೆಯ ಅಗತ್ಯವಿಲ್ಲದೆ ಉಪಗ್ರಹಗಳನ್ನು ನಾನಾ ಕಕ್ಷೆಗಳಲ್ಲಿ ಇರಿಸಲು ಅದು ನೆರವಾಗುತ್ತದೆ.* ಸಿಇ-20 ಕ್ರಿಯಾಜಿತ ಎಂಜಿನ್ ಎಲ್ ವಿಎಂ3ರ ಅಂತಿಮ ಘಟ್ಟಕ್ಕೆ ಅವಿಭಾಜ್ಯ ಭಾಗವಾಗಿದೆ. ಉಪಗ್ರಹಗಳನ್ನು ಅವುಗಳ ನಿಯೋಜಿತ ಕಕ್ಷೆಗಳಲ್ಲಿ ನಿಖರವಾಗಿ ಇರಿಸುವಲ್ಲಿ ಅದು ತುಂಬಾ ಮಹತ್ವದ ಪಾತ್ರ ವಹಿಸುತ್ತದೆ.* ಇಚ್ಛೆಯಂತೆ ಎಂಜಿನ್ ಕಾರ್ಯಾಚರಿಸಿರುವುದನ್ನು ಯಶಸ್ವಿ ಪರೀಕ್ಷೆ ದೃಢಪಡಿಸಿದ್ದು, ಇಸ್ರೋ ಕ್ರಯೋಜೆನಿಕ್ ಎಂಜಿನ್ಗೆ 'ಸಮುದ್ರ ಮಟ್ಟದ ಪರೀಕ್ಷೆಯನ್ನು' ಮಾಡಲಾಗಿತ್ತು.* ಈ ವಿಧಾನವನ್ನು ಪೂರ್ಣ ಕಾರ್ಯಾಚರಣೆ ಅವಧಿಯನ್ನು ಸ್ಟಿಮ್ಯುಲೇಟ್ ಮಾಡಲು ಅಳವಡಿಸಲಾಗುತ್ತದೆ. ನಾಝಲ್ ಪ್ರೊಟೆಕ್ಷನ್ ಸಿಸ್ಟಂ ಪರೀಕ್ಷೆಯ ಪರಿಣಾಮಕಾರತ್ವವನ್ನು ಮತ್ತು ವೆಚ್ಚ-ದಕ್ಷತೆಯನ್ನು ಇನ್ನಷ್ಟು ಹೆಚ್ಚಿಸಿದೆ.* ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ ಎಲ್ ವಿ) ಇಸ್ರೋಗೆ ಬಹು-ಕಕ್ಷೆಯ ಅನುಭವವಿದೆ. 2019ರಲ್ಲಿ ಪಿಎಸ್ಎಲ್ವಿ-ಸಿ 45ಅನ್ನು ಯಶಸ್ವಿಯಾಗಿ ನಿಯೋಜಿಸಲಾಗಿತ್ತು.* ಭವಿಷ್ಯದ ಮಿಷನ್ಗಳಲ್ಲಿ ಸಿಇ-20 ಎಂಜಿನ್ನ ಎರಡು ಅಥವಾ ಮೂರು ರೀಸ್ಟಾರ್ಟ್ಗಳನ್ನು ಬಳಸಲು ಇಸ್ರೋ ಯೋಜಿಸಿದೆ. ಈ ಸಾಮರ್ಥ್ಯವು ಎಲ್ವಿಎಂ3 ರಾಕೆಟ್ನ ಕಾರ್ಯಾಚರಣೆ ಪ್ಲೆಕ್ಸಿಬಿಲಿಟಿ ಹೆಚ್ಚಿಸುತ್ತದೆ.