* ನಿವೃತ್ತ ಐಎಎಸ್ ಅಧಿಕಾರಿ ಡಾ| ಅಶೋಕ ಎಂ. ದಳವಾಯಿ ಅವರನ್ನು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ನೇಮಿಸಿ ರಾಜ್ಯ ಸರಕಾರ ಡಿಸೆಂಬರ್ 25 ರಂದು ಆದೇಶ ಹೊರಡಿಸಿದೆ.* ತಕ್ಷಣದಿಂದಲೇ ಅನ್ವಯಿಸುವಂತೆ ಈ ನೇಮಕಾತಿ ಮಾಡಲಾಗಿದ್ದು, ಆಯೋಗದ ಸದಸ್ಯರಾಗಿ ಬಳ್ಳಾರಿ ಜಿಲ್ಲೆಯ ಸಿಂಧುವಾಳ ಗ್ರಾಮದ ಎಸ್.ಆರ್.ಗಾದಿ ಲಿಂಗನಗೌಡ ಹಾಗೂ ಕೊಪ್ಪಳದ ವಿಠಲ್ಮಾದರಿನಗರದ ಡಿ.ಹೆಚ್.ಪೂಜಾರ ಅವರನ್ನು ನೇಮಕ ಮಾಡಲಾಗಿದೆ.* ಸದಸ್ಯ ಕಾರ್ಯದರ್ಶಿಯಾಗಿ ಕೃಷಿ ಆಯುಕ್ತಾಲಯದ ಬೆಳೆ ಅಭಿವೃದ್ಧಿ ಮತ್ತು ಯೋಜನೆ ವಿಭಾಗದ ಅಪರ ಕೃಷಿ ನಿರ್ದೇಶಕರು ಕಾರ್ಯನಿರ್ವಹಿಸಲಿದ್ದಾರೆ* 2026ರ ಜೂನ್. 25ರ ವರೆಗೆ ಅಧಿಕಾರ ಅವಧಿ ಇರಲಿದೆ.