* ಕೇಂದ್ರ ಸರ್ಕಾರ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGA) ಕಾರ್ಮಿಕರ ದಿನಗೂಲಿಯನ್ನು ಹೆಚ್ಚಿಸಿದೆ.* ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕರ್ನಾಟಕದಲ್ಲಿ 33 ರೂ. ದಿನಗೂಲಿಯನ್ನು ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಕರ್ನಾಟಕದಲ್ಲಿ ನರೇಗಾ ದಿನಗೂಲಿಯು 349 ರೂ.ಗೆ ಏರಿಕೆಯಾಗಿದೆ. 2024ರ ಏಪ್ರಿಲ್ 1ರಿಂದ ಈ ಹೊಸ ದಿನಗೂಲಿಯು ಜಾರಿಗೆ ಬರಲಿದೆ.* ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್ಗಢ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಗೋವಾದಲ್ಲಿ ವೇತನದಲ್ಲಿ ಏರಿಕೆ ಕಂಡುಬಂದಿದೆ. ಕೇಂದ್ರ ಸರ್ಕಾರವು 2024-25ರ ಆರ್ಥಿಕ ವರ್ಷಕ್ಕೆ ಎಂಜಿಎನ್ಆರ್ಇಜಿಎ ಕಾರ್ಮಿಕರ ವೇತನ ದರದಲ್ಲಿ ಶೇಕಡಾ 3-10 ರಷ್ಟು ಹೆಚ್ಚಳವನ್ನು ಘೋಷಿಸಿದೆ. * ಕೇಂದ್ರ ಸರ್ಕಾರವು 2024-25ನೇ ಸಾಲಿನಲ್ಲಿ ಕರ್ನಾಟಕ ಸೇರಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನರೇಗಾ ದಿನಗೂಲಿಯನ್ನು ಏರಿಕೆ ಮಾಡಿದೆ. * ವೇತನ ಹೆಚ್ಚಳದ ವಿಷಯದಲ್ಲಿ ಬಿಹಾರ ಮತ್ತು ಜಾರ್ಖಂಡ್ ಎರಡನೇ ಸ್ಥಾನದಲ್ಲಿವೆ, 2022 ಕ್ಕೆ ಹೋಲಿಸಿದರೆ ಶೇಕಡಾ 8 ರಷ್ಟು ಹೆಚ್ಚಿಸಲಾಗಿದೆ. 2022 ರಲ್ಲಿ ಈ ಎರಡು ರಾಜ್ಯಗಳಲ್ಲಿ ನರೇಗಾ ಕಾರ್ಮಿಕರ ವೇತನವು 210 ರೂ.ಗಳಿಂದ 2023 ರಲ್ಲಿ 228 ರೂ.ಗೆ ಏರಿಕೆಯಾಗಿದೆ.* ಕರ್ನಾಟಕದಲ್ಲಿ ಕೇಂದ್ರ ಸರ್ಕಾರವು 2023-24ನೇ ಸಾಲಿನಲ್ಲಿ ನರೇಗಾ ದಿನಗೂಲಿಯನ್ನು ಕೇವಲ 7 ರೂ. ಹೆಚ್ಚಿಸಿತ್ತು. ಇದರೊಂದಿಗೆ ಕರ್ನಾಟಕದಲ್ಲಿ ನರೇಗಾ ದಿನಗೂಲಿಯು 316 ರೂ. ಆಗಿತ್ತು. 2022-23ನೇ ಸಾಲಿನಲ್ಲಿ 309 ರೂ. ದಿನಗೂಲಿ ನಿಗದಿಪಡಿಸಲಾಗಿತ್ತು.