* ಕರಾವಳಿ ರಾಜ್ಯಗಳಲ್ಲಿ ಮೀನು ರಫ್ತು ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈಕ್ವೆಡಾರ್ ನಂತಹ ದೇಶಗಳಿಂದ ಸಿಗಡಿಗಳ ಅತಿಯಾದ ಪೂರೈಕೆಯು ಸ್ಪರ್ಧಾತ್ಮಕ ದರ ಕುಸಿತಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಲಾಗಿದೆ.* ರಫ್ತು ವಿಚಾರದಲ್ಲಿ ಆಂಧ್ರ ಪ್ರದೇಶ ಮತ್ತು ಗುಜರಾತ್ ಮುಂಚೂಣಿಯಲ್ಲಿವೆ. ಗೋವಾ ಮತ್ತು ಕೇರಳ ರಾಜ್ಯಗಳ ಮೀನು ರಫ್ತಿನಲ್ಲೂ ಇಳಿಮುಖವಾಗಿದೆ.* ಕರ್ನಾಟಕ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಆಂಧ್ರಪ್ರದೇಶ ಹಾಗೂ ಗುಜರಾತ್ಗೆ ಮೊದಲೆರಡು ಸ್ಥಾನದಲ್ಲಿವೆ.* ರಾಜ್ಯದ ಮೀನಿನ ರಫ್ತಿನ ಪ್ರಮಾಣ 2022-23ರಲ್ಲಿ 2,984 ಲಕ್ಷ ಟನ್ಗಳಿಂದ 2023-24ರಲ್ಲಿ 2,735 ಲಕ್ಷ ಟನ್ಗಳಿಗೆ ಇಳಿದಿದೆ. * ಕರ್ನಾಟಕದ ಮೀನಿನ ವಿಚಾರದಲ್ಲಿ ರಫ್ತು ಮೌಲ್ಯ 2022-23ರಲ್ಲಿ 4,737.22 ಕೋಟಿ ರೂ.ನಿಂದ 2023-24ರಲ್ಲಿ 4,785.04 ಕೋಟಿ ರೂ.ಗೆಏರಿಕೆಯಾಗಿದೆ. ಆದರೆ ಒಟ್ಟಾರೆ ರಫ್ತು ಮೌಲ್ಯವು 2022-23ರಲ್ಲಿ 63,969.14 ಕೋಟಿ ರೂ.ನಿಂದ 2023-24ರಲ್ಲಿ 60,523.89 ಕೋಟಿ ರೂ.ಗೆ ಕುಸಿದಿದೆ.* ಈಕ್ವೆಡಾರ್ನಂತಹ ದೇಶಗಳಿಂದ ಸಿಗಡಿಗಳ ಅತಿಯಾದ ಪೂರೈಕೆಯೇ ಸ್ಪರ್ಧಾತ್ಮಕ ದರ ಕುಸಿತಕ್ಕೆ ಪ್ರಮುಖ ಕಾರಣ ಎನ್ನುವುದು ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಂಪಿಇಡಿಎ) ಅಧಿಕಾರಿಗಳ ಮೂಲಗಳು ತಿಳಿಸಿವೆ.* ಸಿಗಡಿ ವಿಚಾರದಲ್ಲಿ ಆಂಧ್ರಪ್ರದೇಶದಲ್ಲಿ 71,921 ಹೆಕ್ಟೇರ್ಗಳಲ್ಲಿ ಸಿಗಡಿ ಸಾಕಣೆಯಿಂದ ಶೇ.70ರಷ್ಟು ಸಿಗಡಿ ರಫ್ತು ಮಾಡಲಾಗುತ್ತಿದೆ. ಆದರೆ ಕರ್ನಾಟಕದ ವಿಚಾರದಲ್ಲಿ ಜಲಕೃಷಿ ಉತ್ಪಾದನೆ 970.39 ಹೆಕ್ಟೇರ್ಗಳಿಗೆ ಸೀಮಿತವಾಗಿದೆ ಎಂಬುದು ಎಂಪಿಇಡಿಎ ಮಾಹಿತಿ.