* ಕಳ್ಳತನ ಆಗಿರುವ ಅಥವಾ ಕಳೆದುಹೋದ ಮೊಬೈಲ್ ಫೋನ್ಗಳನ್ನು ಬ್ಲಾಕ್ ಮಾಡುವುದಕ್ಕಾಗಿ ದೂರಸಂಪರ್ಕ ಇಲಾಖೆಯು ಜನವರಿ 17 ರಂದು (ಶುಕ್ರವಾರ) ‘ಸಂಚಾರ್ ಸಾಥಿ’ ಎಂಬ ಹೊಸ ಆ್ಯಪ್ ಅನ್ನು ಪರಿಚಯಿಸಿದೆ. * ಮೊಬೈಲ್ ಕಳೆದುಹೋದರೂ, ನೀವು ಸಂಚಾರ್ ಸಾಥಿ ಅಪ್ಲಿಕೇಶನ್ ಮೂಲಕ ಅದನ್ನು ಹುಡುಕಬಹುದು. ಇದಕ್ಕಾಗಿ ನೀವು ಸಂಚಾರ್ ಸಾಥಿ ಪೋರ್ಟಲ್ಗೆ ಹೋಗಿ ಮೊಬೈಲ್ ಸಂಖ್ಯೆಗೆ ಬಂದ OTP ಬಳಸಿಕೊಂಡು ಪೋರ್ಟಲ್ಗೆ ಲಾಗಿನ್ ಆಗಬೇಕು. ಇದಾದ ನಂತರ ನೀವು ವೊಡಾಫೋನ್ ಐಡಿಯಾ, ಏರ್ಟೆಲ್ ಮುಂತಾದ ನಿಮ್ಮ ಮೊಬೈಲ್ ಸಂಪರ್ಕಕ್ಕೆ ಹೋಗುತ್ತೀರಿ.* ದೂರಸಂಪರ್ಕ ಇಲಾಖೆ (DoT) ಜನರ ಅನುಕೂಲಕ್ಕಾಗಿ ಸಂಚಾರ ಸತಿ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಆಪ್ ಮೂಲಕ ಆನ್ ಲೈನ್ ವಂಚನೆಯಿಂದ ಹಿಡಿದು ಫೋನ್ ನಷ್ಟದವರೆಗಿನ ದೂರುಗಳನ್ನ ಮೊಬೈಲ್’ನಲ್ಲೇ ದಾಖಲಿಸಬಹುದಾಗಿದೆ.* ಈ ಅಪ್ಲಿಕೇಶನ್’ನ ಪ್ರಾರಂಭದೊಂದಿಗೆ ವರದಿ ಮಾಡುವ ಪ್ರಕ್ರಿಯೆಯು ಸುಲಭವಾಗಿದೆ. ಫೋನ್ ಕಳ್ಳತನ ಮತ್ತು ನಕಲಿ ಕರೆಗಳ ಬಗ್ಗೆ ದೂರು ನೀಡಲು ಮೊದಲು ಸಂಚಾರ ಸಾಥಿಯ ವೆಬ್ಸೈಟ್’ಗೆ ಹೋಗಬೇಕಾಗಿತ್ತು. ಈಗ ಒಬ್ಬರು ಮೊಬೈಲ್ ಫೋನ್ ಮೂಲಕವೂ ವರದಿ ಮಾಡಬಹುದು.* ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್ಫೋನ್ಗಳಿಗೆ ಈ ಆ್ಯಪ್ ಲಭ್ಯವಾಗಲಿದೆ.* 2023 ರಲ್ಲಿ ಪರಿಚಯಿಸಲಾದ ದೂರಸಂಪರ್ಕ ಇಲಾಖೆಯ ‘ಸಂಚಾರ್ ಸಥಿ’ ವೇದಿಕೆಯು ಮೋಸದ ಫೋನ್ ಕರೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪರಿಣಾಮಕಾರಿ ಕಾರ್ಯವಿಧಾನವಾಗಿದೆ ಎಂದು ಸಾಬೀತಾಗಿದೆ. * ಇದರ ಹೊಸ ಅಪ್ಲಿಕೇಶನ್ ಗ್ರಾಹಕರಿಗೆ ಸುರಕ್ಷಿತ ವಾತಾವರಣವನ್ನು ಖಾತ್ರಿಪಡಿಸುವ ಮೂಲಕ ಈ ಪ್ರಯತ್ನಗಳನ್ನು ದ್ವಿಗುಣಗೊಳಿಸುತ್ತದೆ. * ಈ ಆ್ಯಪ್ ಅನ್ನು ಬಿಡುಗಡೆ ಮಾಡುವಾಗ ಸಿಂಧಿಯಾ ಅವರು ‘ಸಂಚಾರ್ ಸಥಿ’ ಉಪಕ್ರಮವು ಪ್ರತಿಯೊಬ್ಬ ಗ್ರಾಹಕರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡುವ ಸುರಕ್ಷಿತ ವಾತಾವರಣವನ್ನು ಒದಗಿಸುತ್ತದೆ ಎಂದು ತಿಳಿಸಿದರು.- ಆ್ಯಪ್ ವೈಶಿಷ್ಯಗಳೇನು?- ವಂಚನೆ ತಡೆ: ಬಳಕೆದಾರರು ಈ ಆ್ಯಪ್ ಮೂಲಕ ಅನಾಮಧೇಯ ಕರೆಗಳು ಮತ್ತು ಸಂದೇಶಗಳ ಬಗ್ಗೆ ವರದಿ ಮಾಡಬಹುದು. ಇದರಿಂದ ವಂಚನೆ ತಡೆಗಟ್ಟುವುದು ಸುಲಭ- ಫೋನ್ ಬ್ಲಾಕ್/ ಅನ್ಲಾಕ್ ವ್ಯವಸ್ಥೆ: ಕಳೆದುಹೋದ ಅಥವಾ ಕಳವಾದ ಫೋನ್ ಅನ್ನು ತಕ್ಷಣವೇ ಬ್ಲಾಕ್ ಮಾಡಿಸಬಹುದು. ಅದು ಪತ್ತೆಯಾದ ಬಳಿಕ ಸುರಕ್ಷಿತವಾಗಿದ್ದರೆ ಮತ್ತೆ ಅನ್ಲಾಕ್ ಮಾಡಿಸಬಹುದು- ನೈಜತೆ ಪತ್ತೆ: ನಾಗರಿಕರು ತಮ್ಮ ಹೆಸರಿನಲ್ಲಿ ಪಡೆದಿರುವ ಎಲ್ಲಾ ಮೊಬೈಲ್ ಸಂಪರ್ಕಗಳ ಬಗ್ಗೆ ಇದರಲ್ಲಿ ಪರಿಶೀಲಿಸಬಹುದು. ಅನಧಿಕೃತವಾಗಿ ಬಳಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಅಲ್ಲದೆ, ಬಳಸಿದ ಫೋನ್ ಖರೀದಿಸುವ ಮೊದಲು ಅದರ ಅಸಲಿತನದ ಪರೀಕ್ಷೆಗೂ ಅವಕಾಶವಿದೆ- ನೋ ಯುವರ್ ಮೊಬೈಲ್: ಗ್ರಾಹಕರು ಈ ಸೌಲಭ್ಯ ಬಳಸಿಕೊಂಡು ತಾವು ಖರೀದಿಸುವ ಸೆಕೆಂಡ್ಹ್ಯಾಂಡ್ ಫೋನ್ ಕಳ್ಳತನದ ಮೂಲಕ ತಮ್ಮ ಕೈಸೇರುತ್ತಿದೆಯೇ ಎಂಬ ಬಗ್ಗೆ ಪರೀಕ್ಷಿಸಿಕೊಳ್ಳಬಹುದಾಗಿದೆ. ದೇಶದಲ್ಲಿ 90 ಕೋಟಿ ಸ್ಮಾರ್ಟ್ಫೋನ್ ಬಳಕೆದಾರರು ಇದ್ದಾರೆ.