* ಪ್ರಮಾಣಿತ ಸಾವಯವ ಉತ್ಪನ್ನಗಳ ರಫ್ತಿಗೆ ನ್ಯಾಷನಲ್ ಪ್ರೋಗ್ರಾಂ ಫಾರ್ ಆರ್ಗಾನಿಕ್ ಪ್ರೊಡಕ್ಷನ್ನಿಂದ (ಎನ್ಪಿಒಪಿ) ವಹಿವಾಟು ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರವು ಜನವರಿ 07 ರಂದು (ಮಂಗಳವಾರ) ಅಧಿಸೂಚನೆ ಹೊರಡಿಸಿದೆ.* 2030ರ ವೇಳೆಗೆ ದೇಶವು ₹17,146 ಕೋಟಿ (2 ಬಿಲಿಯನ್ ಡಾಲರ್) ಮೌಲ್ವದ ಸಾವಯವ ಆಹಾರ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ.* ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ನವೆಂಬರ್ ತಿಂಗಳ ಅವಧಿಯಲ್ಲಿ ಈ ಉತ್ಪನ್ನಗಳ ರಫ್ತು ಮೌಲ್ಯ ₹3,909 ಕೋಟಿ ಇತ್ತು. 2023–24ರ ಪೂರ್ಣ ಹಣಕಾಸು ವರ್ಷದಲ್ಲಿ ₹4,244 ಕೋಟಿ ಇತ್ತು.* ಅಮೆರಿಕ, ಐರೋಪ್ಯ ಒಕ್ಕೂಟ, ಕೆನಡಾ, ಬ್ರಿಟನ್, ಸ್ವಿಟ್ಜರ್ಲೆಂಡ್, ಆಸ್ಟ್ರೇಲಿಯಾ, ಪಶ್ಚಿಮ ಏಷ್ಯಾ ಮತ್ತು ಏಷ್ಯನ್ ದೇಶಗಳಿಗೆ ಈ ಉತ್ಪನ್ನಗಳು ರಫ್ತಾಗುತ್ತದೆ.* ಧಾನ್ಯಗಳು, ಸಂಸ್ಕರಿಸಿದ ಆಹಾರ, ಚಹಾ, ಮಸಾಲೆ ಪದಾರ್ಥಗಳು, ಸಕ್ಕರೆ, ಔಷಧೀಯ ಸಸ್ಯದ ಉತ್ಪನ್ನಗಳು, ಕಾಫಿ, ಎಣ್ಣೆ ಕಾಳುಗಳು ಸೇರಿ ಇತರೆ ಉತ್ಪನ್ನಗಳು ಪ್ರಮುಖವಾಗಿ ರಫ್ತಾಗುವ ವಸ್ತುಗಳಾಗಿವೆ.* 2030ರ ವೇಳೆಗೆ ದೇಶವು ₹17,146 ಕೋಟಿ (2 ಬಿಲಿಯನ್ ಡಾಲರ್) ಮೌಲ್ವದ ಸಾವಯವ ಆಹಾರ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ. * ಎನ್ಪಿಒಪಿ ಮಾನದಂಡದ ಪ್ರಕಾರ ಉತ್ಪಾದನೆ, ಸಂಸ್ಕರಣೆ, ಪ್ಯಾಕ್ ಮಾಡಿದ ಮತ್ತು ಲೇಬಲ್ ಎಂದು ಪ್ರಮಾಣೀಕರಿಸಿದ ಸರಕುಗಳನ್ನು ರಫ್ತು ಮಾಡಬಹುದಾಗಿದೆ. ಈ ಆದೇಶವು ಜನವರಿ 5ರಿಂದ ಅನ್ವಯ ಆಗಲಿದ್ದು, 180 ದಿನದವರೆಗೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದೆ.* ಕೇಂದ್ರ ವಾಣಿಜ್ಯ ಸಚಿವಾಲಯದ ಕೃಷಿ ಮತ್ತು ಆಹಾರ ಸಂಸ್ಕರಣಾ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎಪಿಇಡಿಎ) ರೈತ ಸ್ನೇಹಿ ಮತ್ತು ದೇಶದ ಸಾವಯವ ಆಹಾರ ಉತ್ಪನ್ನಗಳ ರಫ್ತಿಗೆ ನೆರವು ನೀಡಲು ಎನ್ಪಿಒಪಿ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.