* ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2025 ರಂದು ಸತತ 8 ನೇ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಫೆಬ್ರವರಿಯ ಬಜೆಟ್ನಲ್ಲಿ ವರ್ಷಕ್ಕೆ 15 ಲಕ್ಷ ರೂ. ವರೆಗೆ ಆದಾಯ ಹೊಂದಿರುವವರಿಗೆ ಆದಾಯ ತೆರಿಗೆಯನ್ನು ಕಡಿತಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ಸೂಚಿಸುತ್ತವೆ.* ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ವಿವಿಧ ಅವಧಿಗಳಲ್ಲಿ ಮಂಡಿಸಿದ 10 ಬಜೆಟ್ಗಳ ದಾಖಲೆಗೆ ಶ್ರೀಮತಿ ಸೀತಾರಾಮನ್ ಅವರನ್ನು ಹತ್ತಿರಕ್ಕೆ ಕೊಂಡೊಯ್ಯುತ್ತದೆ. ದೇಸಾಯಿ ಅವರು 1959-1964ರಲ್ಲಿ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಒಟ್ಟು 6 ಬಜೆಟ್ಗಳನ್ನು ಮತ್ತು 1967-1969ರ ನಡುವೆ 4 ಬಜೆಟ್ಗಳನ್ನು ಮಂಡಿಸಿದ್ದರು.* ಪ್ರತಿ ಬಜೆಟ್ ನಲ್ಲೂ ಮಧ್ಯಮ ವರ್ಗದ ಜನರ ನಿರೀಕ್ಷೆ, ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ. ತೆರಿಗೆ ವಿನಾಯಿತಿ ಮಿತಿಯನ್ನು 10 ಲಕ್ಷ ರೂ.ವರೆಗೆ ವಿಸ್ತರಿಸಿ ಎನ್ನುವ ಒತ್ತಾಯಗಳು ಕೇಳಿಬಂದಿವೆ. ಅದಾಯ ತೆರಿಗೆ ಮಿತಿಯನ್ನು 12-14 ಲಕ್ಷ ರೂ.ಗೆ ಏರಿಸಲಾಗುತ್ತದೆ ಎಂದೂ ಹೇಳಲಾಗುತ್ತಿದೆ.* 2025ರ ಬಜೆಟ್ನಲ್ಲಿ ಹಳೆಯ ತೆರಿಗೆ ಪದ್ಧತಿಯನ್ನು ಕ್ರಮೇಣವಾಗಿ ತೆಗೆದುಹಾಕುವ ಕೆಲವು ಸುಧಾರಣೆಗಳು ಮತ್ತು ವರ್ಷಕ್ಕೆ 10 ಲಕ್ಷ ರೂಪಾಯಿಗಿಂತ ಕಡಿಮೆ ಗಳಿಸುವವರಿಗೆ ಶೂನ್ಯ ಆದಾಯ ತೆರಿಗೆಯನ್ನು ಪರಿಚಯಿಸುವ ಸಾಧ್ಯತೆಯಿದೆ.* ಬಜೆಟ್ ಅಧಿವೇಶನದ ಮೊದಲ ದಿನ ಹಾಗೂ ಬಜೆಟ್ ಮಂಡನೆಗೆ ಒಂದು ದಿನ ಮುಂಚಿತವಾಗಿ ಶುಕ್ರವಾರ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ಸಿದ್ಧಪಡಿಸಿದ್ದ ಆರ್ಥಿಕ ಸಮೀಕ್ಷೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ್ದು 2026ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯನ್ನು ಶೇ.6.3 ಮತ್ತು ಶೇ.6.8ರ ನಡುವೆ ಇರಬಹುದೆಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ.