➤ ಅಹಮದಾಬಾದ್: ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆಯಲ್ಲಿ ಭಾರತವನ್ನು ಬಲಿಷ್ಠ ಶಕ್ತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ಗುಜರಾತ್‌ನ ಸಾನಂದ್‌ನಲ್ಲಿ 3,300 ಕೋಟಿ ರೂಪಾಯಿ ವೆಚ್ಚದ ಕೇನ್ ಸೆಮಿಕಂಡಕ್ಟರ್ (Kaynes Semicon) ಪ್ಲಾಂಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (31-03-20260) ಉದ್ಘಾಟಿಸಿದರು.
➤ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, "ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲು ವರ್ಷಗಳೇ ಬೇಕಾಗುತ್ತವೆ. ಆದರೆ ಭಾರತವು ಕೇವಲ 900 ದಿನಗಳಲ್ಲಿ ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸಿ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ತೋರಿಸಿದೆ," ಎಂದು ಶ್ಲಾಘಿಸಿದರು. ಮೈಕ್ರಾನ್ (Micron) ಕಂಪನಿಯ ನಂತರ ಈ ಭಾಗದಲ್ಲಿ ಕಾರ್ಯಾರಂಭ ಮಾಡುತ್ತಿರುವ ಎರಡನೇ ಅತಿದೊಡ್ಡ ಘಟಕ ಇದಾಗಿದೆ.
➤ ದಿನಕ್ಕೆ 60 ಲಕ್ಷ ಚಿಪ್ ಉತ್ಪಾದನೆ: ಇದು ಕೇವಲ ಕಾರ್ಖಾನೆಯಲ್ಲ, ಇದೊಂದು OSAT (Outsourced Semiconductor Assembly and Test) ಘಟಕವಾಗಿದೆ. ಇಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳ ಅಸೆಂಬ್ಲಿಂಗ್, ಪ್ಯಾಕೇಜಿಂಗ್ ಮತ್ತು ಕಟ್ಟುನಿಟ್ಟಾದ ಪರೀಕ್ಷೆಗಳು ನಡೆಯುತ್ತವೆ. ಸ್ಮಾರ್ಟ್‌ಫೋನ್, ಎಲೆಕ್ಟ್ರಿಕ್ ವಾಹನ (EV) ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಗೆ ಈ ಘಟಕ ದೊಡ್ಡ ಬಲ ನೀಡಲಿದೆ.
➤ ಕೇನ್ ಸೆಮಿಕಂಡಕ್ಟರ್ ಘಟಕದ ಆರಂಭದಿಂದ ಭಾರತವು ಕೇವಲ ಚಿಪ್‌ಗಳನ್ನು ಆಮದು ಮಾಡಿಕೊಳ್ಳುವ ದೇಶವಾಗಿ ಉಳಿಯದೆ, ಜಾಗತಿಕವಾಗಿ ಚಿಪ್‌ಗಳನ್ನು ಪೂರೈಸುವ 'ಹಬ್' ಆಗಿ ಮಾರ್ಪಡುತ್ತಿದೆ. ಇದು ಯುವಜನತೆಗೆ ಉದ್ಯೋಗದ ಜೊತೆಗೆ ತಾಂತ್ರಿಕ ಕ್ರಾಂತಿಗೂ ಮುನ್ನುಡಿ ಬರೆದಿದೆ.
ಬುಧವಾರ, 01 ಎಪ್ರಿಲ್ 2026
10:17 ಪೂರ್ವಾಹ್ನ
Daily PDF
ಭಾರತದ ಸೆಮಿಕಂಡಕ್ಟರ್ ಕ್ರಾಂತಿ: ಸಾನಂದ್‌ನಲ್ಲಿ ಕೇನ್ ಸೆಮಿಕಂಡಕ್ಟರ್ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ!
Authored by:
Akshata Halli