* ಜಾಗತಿಕ ಜನಸಂಖ್ಯೆಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ.* ಪ್ರತಿ ವರ್ಷ ಜುಲೈ 11 ಅನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಸುಸ್ಥಿರ ಅಭಿವೃದ್ಧಿ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಲಿಂಗ ಸಮಾನತೆಯನ್ನು ಪ್ರತಿಪಾದಿಸುತ್ತದೆ. * ಈ ವರ್ಷ 2024 ರ ವಿಶ್ವ ಜನಸಂಖ್ಯಾ ದಿನದ ಥೀಮ್ " ಯಾರನ್ನೂ ಬಿಡಬೇಡಿ, ಪ್ರತಿಯೊಬ್ಬರನ್ನು ಎಣಿಸಿ”* ವಿಶ್ವ ಜನಸಂಖ್ಯಾ ದಿನವನ್ನು 1989 ರಲ್ಲಿ ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂ (UNDP) ಆಡಳಿತ ಮಂಡಳಿಯು ಅಧಿಕೃತವಾಗಿ ರಚಿಸಿತು. * ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ ಮಂಡಳಿಯ (ಯುಎನ್ ಡಿಪಿ) ಮೂಲಕ 1989 ಜುಲೈ 11 ರಂದು ಮೊದಲ ಬಾರಿಗೆ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. * ಜನಸಂಖ್ಯಾ ದಿನವನ್ನು ಆಚರಿಸುವ ಸಾರ್ವಜನಿಕ ಹಿತಾಸಕ್ತಿಯು ಜುಲೈ 11 ಅನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಯ್ಕೆ ಮಾಡಲು ಕಾರಣವಾಯಿತು , ಇದನ್ನು ಡಿಸೆಂಬರ್ 1990 ರಲ್ಲಿ 45/216 ನಿರ್ಣಯದೊಂದಿಗೆ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಅಧಿಕೃತಗೊಳಿಸಿತು.* 2021ರ ಜನಗಣತಿ ಪ್ರಕಾರ ಜಗತ್ತಿನ ಜನಸಂಖ್ಯೆ 788.84 ಕೋಟಿ ಇದ್ದು, ಅದರಲ್ಲಿ ಏಷ್ಯಾದ ಪಾಲು 475 ಕೋಟಿ. ಚೀನಾ ಮತ್ತು ಭಾರತದ ಪಾಲು ಸುಮಾರು ಶೇ.40ರಷ್ಟಿದೆ. ಮುಂದಿನ 12ವರ್ಷಗಳ ಹೊತ್ತಿಗೆ ಜಗತ್ತಿನ ಜನಸಂಖ್ಯೆಯಲ್ಲಿ 100 ಕೋಟಿಯಷ್ಟು ಹೆಚ್ಚುವ ಸಾಧ್ಯತೆ ಇದ್ದು, 2050ರ ಹೊತ್ತಿಗೆ 970 ಕೋಟಿ ತಲುಪುವ ನಿರೀಕ್ಷೆ ಇದೆ. * 2050ರ - ಹೊತ್ತಿಗೆ ವಿಶ್ವ ಜನಸಂಖ್ಯೆಯ 970 ಕೋಟಿಯಲ್ಲಿ ಏಷ್ಯಾದ ಪಾಲು 530 ಕೋಟಿ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು, ಆಫ್ರಿಕಾ ದೇಶಗಳಲ್ಲೂ ಜನಸಂಖ್ಯೆ ಅಧಿಕವಾಗಿದೆ. 2100ರ ವೇಳೆಗೆ 10.9 ಶತಕೋಟಿ ಏರಿಕೆಯಾಗಲಿದೆ ಎಂದು ವಿಶ್ವಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.* ಭಾರತದ ಜನಸಂಖ್ಯೆಯಲ್ಲಿ ಶೇ. 50ಕ್ಕೂ ಹೆಚ್ಚಿನ ಜನರ ವಯಸ್ಸು 25ಕ್ಕೂ ಕಡಿಮೆ. ಇದನ್ನು 35ರವರೆಗೆ ಏರಿಸಿದರೆ ನಮ್ಮ ಜನಸಂಖ್ಯೆಯ 65 ಪ್ರತಿಶತ ಜನರು ಇದರಡಿ ಬರುತ್ತಾರೆ. ಅಂದರೆ ಹತ್ತಿರತ್ತಿರ 85 ಕೋಟಿ ಜನರು 35 ವಯೋಮಾನ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು. ಶೇ. 36.8ರಷ್ಟು ಭಾರತೀಯರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಉಳಿದ ಶೇ.73.2ರಷ್ಟು ಭಾರತೀಯರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ.- ಜನಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳು ಭಾರತ - 144ಚೀನಾ - 143ಅಮೆರಿಕ - 34ಇಂಡೋನೇಷ್ಯಾ - 28ಪಾಕಿಸ್ತಾನ - 24ನೈಜೇರಿಯಾ - 23ಬ್ರೆಜಿಲ್ - 21ಬಾಂಗ್ಲಾದೇಶ - 17ರಷ್ಯಾ - 14ಮೆಕ್ಸಿಕೋ - 13- ವರ್ಷಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯ ಹಾದಿ2024 ರಲ್ಲಿ 8.1 ಬಿಲಿಯನ್ 2022 ರಲ್ಲಿ 8 ಬಿಲಿಯನ್ 2010 ರಲ್ಲಿ 7 ಬಿಲಿಯನ್ 1998 ರಲ್ಲಿ 6 ಬಿಲಿಯನ್ 1987 ರಲ್ಲಿ 5 ಬಿಲಿಯನ್ 1974 ರಲ್ಲಿ 4 ಬಿಲಿಯನ್ 1960 ರಲ್ಲಿ 3 ಬಿಲಿಯನ್ 1930 ರಲ್ಲಿ 2 ಬಿಲಿಯನ್ 1804 ರಲ್ಲಿ 1 ಬಿಲಿಯನ್