* ಭಾರತದ ವೇಗದ ಬೌಲಿಂಗ್ ಜಸ್ಪ್ರೀತ್ ಬುಮ್ರಾ ಅವರನ್ನು 2024 ರ ಐಸಿಸಿ ಪುರುಷರ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.* ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿ ಗೆದ್ದ ಭಾರತೀಯ ಆರನೇ ಹಾಗೂ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. * ಈ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿದ್ದ ಇಂಗ್ಲೆಂಡ್ನ ಜೋ ರೂಟ್, ಹ್ಯಾರಿ ಬ್ರೂಕ್ ಮತ್ತು ಶ್ರೀಲಂಕಾದ ಕಾಮಿಂಡು ಮೆಂಡಿಸ್ ಅವರನ್ನು ಜಸ್ಪ್ರೀತ್ ಬುಮ್ರಾ ಹಿಂದಿಕ್ಕಿದ್ದಾರೆ.* ಬುಮ್ರಾ 2024 ರಲ್ಲಿ 14.92 ಸರಾಸರಿಯಲ್ಲಿ 13 ಪಂದ್ಯಗಳಲ್ಲಿ 357 ಓವರ್ಗಳನ್ನು ಬೌಲಿಂಗ್ ಮಾಡುವಾಗ 71 ವಿಕೆಟ್ಗಳನ್ನು ಪಡೆದರು. 2024 ಅನ್ನು ಕೇವಲ 30.1ರ ವಾರ್ಷಿಕ ಸ್ಟ್ರೈಕ್ ರೇಟ್ನೊಂದಿಗೆ ಕೊನೆಗೊಳಿಸಿದರು.* ಬುಮ್ರಾ ಕ್ಯಾಲೆಂಡರ್ ವರ್ಷದಲ್ಲಿ 70ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಗಳನ್ನು ಪಡೆದ ನಾಲ್ಕನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.* ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯ ಸಮಯದಲ್ಲಿ, ಬುಮ್ರಾ 200 ಟೆಸ್ಟ್ ವಿಕೆಟ್ಗಳ ಗಡಿ ದಾಟಿದರು ಮತ್ತು ಈ ಸಾಧನೆ ಮಾಡಿದ 12ನೇ ಭಾರತೀಯ ಬೌಲರ್ ಎನಿಸಿಕೊಂಡರು.* ಟೆಸ್ಟ್ ಇತಿಹಾಸದಲ್ಲಿ ಕನಿಷ್ಠ 200 ಕ್ಯಾಚ್ಗಳನ್ನು ಹಿಡಿದ ಏಕೈಕ ಬೌಲರ್ ಆಗಿದ್ದರೆ.* ಇದಕ್ಕೂ ಮೊದಲು ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ರಾಹುಲ್ ದ್ರಾವಿಡ್, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ರವಿಚಂದ್ರನ್ ಅಶ್ವಿನ್ ಮತ್ತು ವಿರಾಟ್ ಕೊಹ್ಲಿ ಪಡೆದಿದ್ದರು.* ಕೊಹ್ಲಿ 2018ರ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಆಗ ಕೊಹ್ಲಿ 13 ಟೆಸ್ಟ್ಗಳಲ್ಲಿ 55.08ರ ಸರಾಸರಿಯಲ್ಲಿ ಐದು ಶತಕಗಳು ಮತ್ತು ಐದು ಅರ್ಧಶತಕಗಳೊಂದಿಗೆ 1322 ರನ್ ಗಳಿಸಿದ್ದರು.