* ಭಾರತದಲ್ಲಿ ಮೊದಲ ಬಾರಿಗೆ ಜನವರಿ,16ರಂದು ಲೋಕಪಾಲ್ ದಿನ ಆಚರಿಸಲಾಗುತ್ತಿದ್ದು, 2024ರ ಮಾರ್ಚ್.14ರಂದು ನಡೆದ ಸಭೆಯ ಬಳಿಕ ಭಾರತದಲ್ಲಿ ಲೋಕಪಾಲ್ ಅಸ್ತಿತ್ವಕ್ಕೆ ಬಂದಿದೆ. ಇದರ ನೆನಪಿಗಾಗಿ ಈ ವರ್ಷದಿಂದ ಲೋಕಪಾಲ್ ದಿನ ಆಚರಿಸಲಾಗುತ್ತದೆ. * ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ದೇಶದ ಅಟಾರ್ನಿ ಜನರಲ್ ಆರ್.ವೆಂಕಟ್ರಮಣಿ, ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಜಸ್ಟೀಸ್ ಎನ್ ಸಂತೋಷ್ ಹೆಗ್ಡೆ ಹಾಗೂ ಅಣ್ಣ ಹಜಾರೆ ಅವರನ್ನು ಸನ್ಮಾನಿಸಲಾಗುತ್ತದೆ.* "ಲೋಕಪಾಲ್ ದಿನದ ಮೊದಲ ಸ್ಮರಣೆಯನ್ನು ಜನವರಿ 16, 2025 ರಂದು ಮಾಣೆಕ್ಷಾ ಕೇಂದ್ರದ ಜೋರಾವರ್ ಸಭಾಂಗಣದಲ್ಲಿ ಮುಖ್ಯ ಅತಿಥಿಯಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಉಪಸ್ಥಿತಿಯಲ್ಲಿ ನಿಗದಿಪಡಿಸಲಾಗಿದೆ" ಎಂದು ಲೋಕಪಾಲ್ ಹೇಳಿಕೆಯಲ್ಲಿ ತಿಳಿಸಲಾಗಿದೆ.