➤ ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಮಾಜಿ ಆರ್ಟಿಸ್ಟ್-ಮಾಡಲರ್ (Artist-Modeler) ಆಗಿ ಸೇವೆ ಸಲ್ಲಿಸಿದ್ದ ಎ. ಶಿವರಾಮನ್ (A. Sivaraman) ಅವರು ಈ ವಸ್ತುಸಂಗ್ರಹಾಲಯದ ರೂವಾರಿಯಾಗಿದ್ದಾರೆ. ಶಿವರಾಮನ್ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ವೈದ್ಯಕೀಯ ಬೋಧನೆಗಾಗಿ ಸ್ವತಃ ಕೈಯಿಂದ ಸಿದ್ಧಪಡಿಸಿದ ನೂರಾರು ವೈದ್ಯಕೀಯ ಮಾದರಿಗಳು (Medical Models) ಮತ್ತು ಕಲಾಕೃತಿಗಳನ್ನು ಈ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ.
➤ ಮ್ಯೂಸಿಯಂನಲ್ಲಿ ಏನೇನೆಲ್ಲಾ ನೋಡಬಹುದು: ಸಾಮಾನ್ಯವಾಗಿ ವೈದ್ಯಕೀಯ ಕಾಲೇಜುಗಳ ಒಳಗೆ ಮಾತ್ರ ಸೀಮಿತವಾಗಿದ್ದ ಮಾನವ ದೇಹದ ಸಂಕೀರ್ಣ ಪ್ರಕ್ರಿಯೆಗಳನ್ನು ಇಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ 3D ಮಾದರಿಗಳಲ್ಲಿ ಪ್ರದರ್ಶಿಸಲಾಗಿದೆ:
- ಅಂಗರಚನಾ ಶಾಸ್ತ್ರದ ಮಾದರಿಗಳು (Anatomical Models): ಮಾನವನ ಅಂಗಾಂಗಗಳ ನಿಖರ ಕಲಾಕೃತಿಗಳು.
- ಭ್ರೂಣಶಾಸ್ತ್ರ (Embryology) ಪ್ರದರ್ಶನ: ಭ್ರೂಣದ ಬೆಳವಣಿಗೆ ಹಾಗೂ ರಕ್ತ ಪರಿಚಲನೆ (Fetal Circulation) ಹಂತಗಳು.
- ಕೋಶ ವಿಭಜನೆ (Mitosis): ಜೀವಕೋಶಗಳು ವಿಭಜನೆಯಾಗುವ ವಿವಿಧ ಹಂತಗಳ ಚಿತ್ರಣ.
- ಹಲ್ಲಿನ ರಚನೆ, ಸಂತಾನೋತ್ಪತ್ತಿ ವ್ಯವಸ್ಥೆ, ಹೃದಯದ ಬೆಳವಣಿಗೆ ಮತ್ತು ರಕ್ತನಾಳಗಳ ರಚನೆಗಳು.
- ಮೈಕ್ರೋಬಯಾಲಜಿ ಆರ್ಕೈವ್ಸ್: ಸೂಕ್ಷ್ಮಜೀವಿ ಶಾಸ್ತ್ರದ ಇತಿಹಾಸ ಮತ್ತು ಹಳೆಯ ಅಪರೂಪದ ಛಾಯಾಚಿತ್ರಗಳು