Job Description: ➤ ಭಾರತದ ಸಾಂಪ್ರದಾಯಿಕ ಕಲೆಯಾದ ಯೋಗ ಇದೀಗ ಜಾಗತಿಕ ಕ್ರೀಡಾ ವೇದಿಕೆಯಲ್ಲಿ ಹೊಸ ಇತಿಹಾಸ ಬರೆದಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಮೊದಲ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 (Inaugural World Yogasana Championship) ನಲ್ಲಿ ಆತಿಥೇಯ ಭಾರತ ತಂಡವು ಬರೋಬ್ಬರಿ 114 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ➤ ಗುಜರಾತ್‌ನ ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾದಲ್ಲಿ ಜೂನ್ 4 ರಿಂದ 8, 2026 ರವರೆಗೆ ನಡೆದ ಮೊದಲ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ 79 ದೇಶಗಳು ಭಾಗವಹಿಸಿದ್ದು, ಆತಿಥೇಯ ಭಾರತ ತಂಡವು 102 ಚಿನ್ನ ಸೇರಿದಂತೆ ಒಟ್ಟು 114 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ➤ ಪದಕಗಳ ಪಟ್ಟಿ: ➤ ಈ ಕ್ರೀಡಾಕೂಟಕ್ಕೆ ಬೆಂಬಲ ನೀಡಿದ ಸಂಸ್ಥೆಗಳು:- ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ (Ministry of Youth Affairs & Sports)- ಆಯುಷ್ ಸಚಿವಾಲಯ (Ministry of Ayush)- ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India - SAI)- ಗುಜರಾತ್ ಕ್ರೀಡಾ ಪ್ರಾಧಿಕಾರ ಮತ್ತು ಗುಜರಾತ್ ಪ್ರವಾಸೋದ್ಯಮ ಇಲಾಖೆ.➤ ಒಲಿಂಪಿಕ್ಸ್‌ನತ್ತ ಯೋಗಾಸನ: ಯೋಗಾಸನವನ್ನು ಕೇವಲ ದೈಹಿಕ ಕಸರತ್ತಾಗಿ ಉಳಿಸದೆ, ಅದನ್ನು ಅಂತರರಾಷ್ಟ್ರೀಯ ನಿಯಮಾವಳಿಗಳಿಗೆ ಒಳಪಟ್ಟು ಸ್ಪರ್ಧಾತ್ಮಕ ಕ್ರೀಡೆಯಾಗಿ (Competitive Yogasana) ರೂಪಿಸುವಲ್ಲಿ ಈ ಚಾಂಪಿಯನ್‌ಶಿಪ್ ಪ್ರಮುಖ ಮೈಲಿಗಲ್ಲಾಗಿದೆ. ಭವಿಷ್ಯದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಯೋಗಾಸನವನ್ನು ಒಂದು ಕ್ರೀಡೆಯಾಗಿ ಸೇರಿಸಲು ಅಗತ್ಯವಿರುವ ಜಾಗತಿಕ ಮನ್ನಣೆ, ಪ್ರಮಾಣಿತ ನಿಯಮಗಳು ಮತ್ತು ಹೆಚ್ಚಿನ ದೇಶಗಳ ಭಾಗವಹಿಸುವಿಕೆಯನ್ನು ಈ ಟೂರ್ನಿ ಒದಗಿಸಿದೆ.