Job Description: ➤ ಭಾರತದ ನಾಗರಿಕ ವಿಮಾನಯಾನ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಬೆಳವಣಿಗೆಯನ್ನು ಸಾಧಿಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಬ್ರೆಜಿಲ್ ಮತ್ತು ಇಂಡೋನೇಷ್ಯಾ ದೇಶಗಳನ್ನು ಹಿಂದಿಕ್ಕಿ ಜಾಗತಿಕವಾಗಿ ಮೂರನೇ ಅತಿ ದೊಡ್ಡ ದೇಶೀಯ ನಾಗರಿಕ ವಿಮಾನಯಾನ ಮಾರುಕಟ್ಟೆ (Third-Largest Domestic Aviation Market) ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ➤ ರಾಜ್ಯಸಭೆಯಲ್ಲಿ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳಿಧರ್ ಮೋಹೋಲ್ ಅವರು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ದೇಶದ ವಿಮಾನಯಾನ ಉದ್ಯಮದ ವೇಗದ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ. ➤ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಮತ್ತು ಅಂಕಿ-ಅಂಶಗಳು: ಮೊದಲ ಎರಡು ಸ್ಥಾನಗಳು: ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಅಮೆರಿಕ (USA) ಮೊದಲ ಸ್ಥಾನದಲ್ಲಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿದೆ. ಭಾರತದ ಸಾಮರ್ಥ್ಯ: 2024 ರ ಏಪ್ರಿಲ್ ವೇಳೆಗೆ ಭಾರತದ ದೇಶೀಯ ವಿಮಾನಯಾನ ಸಾಮರ್ಥ್ಯವು 15.6 ಮಿಲಿಯನ್ ಸೀಟುಗಳಿಗೆ (Seats Capacity) ತಲುಪುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಒಟ್ಟಾರೆ ಸ್ಥಾನ (ದೇಶೀಯ + ಅಂತರರಾಷ್ಟ್ರೀಯ): ಕೇವಲ ದೇಶೀಯವಲ್ಲದೆ, ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯನ್ನೂ ಒಳಗೊಂಡ ಒಟ್ಟಾರೆ ಜಾಗತಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತ ಪ್ರಸ್ತುತ 5 ನೇ ಸ್ಥಾನದಲ್ಲಿದೆ. ➤ ಭಾರತದ ಈ ಅಸಾಧಾರಣ ಬೆಳವಣಿಗೆಗೆ ಪ್ರಮುಖ ಕಾರಣಗಳೇನು? ಕಳೆದ ಹತ್ತು ವರ್ಷಗಳಲ್ಲಿ (2014 ರಿಂದ 2024) ಜಾಗತಿಕವಾಗಿ ಅಗ್ರ 5 ದೇಶಗಳ ಪೈಕಿ ಭಾರತವು ಅತ್ಯಧಿಕ ಅಂದರೆ ಶೇಕಡಾ 6.9 ರಷ್ಟು ವಾರ್ಷಿಕ ಸರಾಸರಿ ಸಾಮರ್ಥ್ಯದ ಬೆಳವಣಿಗೆಯನ್ನು (Annual Growth Rate) ದಾಖಲಿಸಿದೆ. ಇದಕ್ಕೆ ಕಾರಣವಾದ ಪ್ರಮುಖ ಅಂಶಗಳು ಕೆಳಗಿನಂತಿವೆ:1. ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಗಳು (Low-Cost Carriers - LCC): ಭಾರತದ ದೇಶೀಯ ಮಾರುಕಟ್ಟೆಯಲ್ಲಿ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಗಳ ಪಾತ್ರ ಅತ್ಯಂತ ದೊಡ್ಡದಾಗಿದೆ. ಒಟ್ಟು ಮಾರುಕಟ್ಟೆಯ ಶೇಕಡಾ 78.4 ರಷ್ಟು ಪಾಲು LCC ಗಳದ್ದಾಗಿದೆ. ಇದರಲ್ಲಿ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ 'ಇಂಡಿಗೋ' (IndiGo) ತನ್ನ ಮಾರುಕಟ್ಟೆ ಪಾಲನ್ನು 2014 ರಲ್ಲಿದ್ದ ಶೇ. 32 ರಿಂದ ಶೇ. 62 ಕ್ಕೆ ಹೆಚ್ಚಿಸಿಕೊಂಡಿದೆ.2. ಮೂಲಸೌಕರ್ಯಗಳ ವಿಸ್ತರಣೆ ಮತ್ತು ವಿಮಾನ ನಿಲ್ದಾಣಗಳ ಹೆಚ್ಚಳ: ಭಾರತದ ಆರ್ಥಿಕ ಸಮೀಕ್ಷೆಯ (Economic Survey) ಪ್ರಕಾರ, ದೇಶದಲ್ಲಿ ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 2014 ರಲ್ಲಿ: ಕೇವಲ 74 ಕಾರ್ಯಾಚರಣೆ ವಿಮಾನ ನಿಲ್ದಾಣಗಳು ಇದ್ದವು. ಪ್ರಸ್ತುತ: ಈ ಸಂಖ್ಯೆಯು ಬರೋಬ್ಬರಿ 164 ಕ್ಕೆ ಏರಿಕೆಯಾಗಿದೆ. 3. ಸರ್ಕಾರದ ಪ್ರಮುಖ ಯೋಜನೆಗಳು ಮತ್ತು ಕಾರ್ಯತಂತ್ರಗಳು: ಕೇಂದ್ರ ಸರ್ಕಾರವು ನಾಗರಿಕ ವಿಮಾನಯಾನ ಕ್ಷೇತ್ರದ ಸುಧಾರಣೆಗಾಗಿ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ: RCS-UDAN ಯೋಜನೆ: ಸಾಮಾನ್ಯ ಜನರಿಗೂ ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮಾಡುವ ಪ್ರಾದೇಶಿಕ ಸಂಪರ್ಕ ಯೋಜನೆ (Regional Connectivity Scheme - UDAN)ಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಪರಿಶೀಲಿಸುತ್ತಿದೆ. ಅಂತರರಾಷ್ಟ್ರೀಯ ವಿಮಾನಯಾನ ಹಬ್ ತಂತ್ರಜ್ಞಾನ (International Aviation Hub Strategy): ದೇಶದ ಪ್ರಮುಖ ವಿಮಾನ ನಿಲ್ದಾಣಗಳನ್ನು ಜಾಗತಿಕ ಹಬ್‌ಗಳಾಗಿ ಪರಿವರ್ತಿಸಲು ಮತ್ತು ಭಾರತದಲ್ಲೇ ವಿಮಾನಗಳ ದುರಸ್ತಿ ಹಾಗೂ ನಿರ್ವಹಣೆಗಾಗಿ MRO (Maintenance, Repair and Overhaul) ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ