* ಕಳೆದ ಮೂರು ವರ್ಷಗಳಲ್ಲಿ 30 ಕೋಟಿಗೂ ಅಧಿಕ ಇ-ಶ್ರಮ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಜತೆಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ನೋಂದಾಯಿಸಿದವರ ಸಂಖ್ಯೆಯೂ ಅಧಿಕವಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ (ಡಿಸೆಂಬರ್ 16) ಲೋಕಸಭೆಗೆ ತಿಳಿಸಿದೆ.* ಪ್ರಶೋತ್ತರ ವೇಳೆಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪಂಕಜ್ ಚೌಧರಿ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. * 2014-15ರಲ್ಲಿ 15.84 ಕೋಟಿ ಜನರು ನೋಂದಾಯಿಸಿಕೊಂಡಿದ್ದರು ಆದರೆ 2023-24ರಲ್ಲಿ ಈ ಸಂಖ್ಯೆ 29 ಕೋಟಿಗೆ ಏರಿದೆ ಎಂದು ತಿಳಿಸಿದ್ದಾರೆ.* ಮೌಖಿಕ ಉತ್ತರಗಳಿಗಾಗಿ ಪ್ರಶೋತ್ತರ ಅವಧಿಯಲ್ಲಿ ಪಟ್ಟಿ ಮಾಡಲಾದ 20 ಪ್ರಶ್ನೆಗಳನ್ನು ತೆಗೆದುಕೊಳ್ಳಲು ಸಚಿವರಿಗೆ ಅವಕಾಶವಿರುತ್ತದೆ. ಈ ಅವಧಿಯಲ್ಲಿ ಹೊಸ ಅಂದರೆ ಲೋಕಸಭೆಗೆ ಸದಸ್ಯರು ಹೊಸದಾಗಿ ಪ್ರವೇಶಿಸಿರುವವರು ಕೇಳಿರುವ ಪೂರಕ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.